
ಗುಂಡ್ಲುಪೇಟೆ (ಜೂ.04): ವಿಧಾನಸಭೆ ಚುನಾವಣೆ ಪೂರ್ವ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳಿಗೆ ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಮುದ್ರೆ ಒತ್ತುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೆ ನುಡಿದಂತೆ ನಡೆದು ಸಾಬೀತು ಪಡಿಸಿದೆ ಎಂದು ನೂತನ ಕಾಂಗ್ರೆಸ್ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಹೇಳಿದ್ದಾರೆ. ಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಐದು ಗ್ಯಾರಂಟಿಗೆ ಶುಕ್ರವಾರ ಮಧ್ಯಾಹ್ನ ಆದೇಶ ನೀಡುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ ಎಂದರು.
ಚುನಾವಣೆ ಪೂರ್ವ ಕಾಂಗ್ರೆಸ್ ಪಕ್ಷ ವ್ಯಕಿಗೆ ತಲಾ 10 ಕೆಜಿ ಅಕ್ಕಿ(ಅನ್ನಭಾಗ್ಯ)ಮನೆಯ ಯಜಮಾನಿಗೆ 2 ಸಾವಿರ(ಗೃಹಲಕ್ಷಿತ್ರ್ಮೕ), ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್(ಗೃಹ ಜ್ಯೋತಿ), ಪದವೀಧರರಿಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1.500(ಯುವ ನಿ), ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣದ ಗ್ಯಾರಂಟಿಗಳನ್ನು ಈಡೇರಿಸಿದ ಹಿನ್ನೆಲೆ ಕಾಂಗ್ರೆಸ್ ಪಕ್ಷ ಹಾಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಧನ್ಯವಾದ ಎಂದರು.
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಜಾರಿಗೆ ತರಲ್ಲ ಎನ್ನುತ್ತಿದ್ದ ವಿಪಕ್ಷಗಳಿಗೆ ರಾಜ್ಯ ಸರ್ಕಾರ ತಕ್ಕ ಉತ್ತರ ಐದು ಗ್ಯಾರಂಟಿ ಜಾರಿಗೆ ತರುವ ಮೂಲಕ ನೀಡಿದೆ. ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಟೀಕಿಸಲು ಹೊಸ ದಾರಿ ಹುಡುಕಬೇಕಾಗುತ್ತದೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಆರೋಗ್ಯ, ಶಿಕ್ಷಣದ ವಲಸೆ ತಪ್ಪಿಸುವುದು ನನ್ನ ಗುರಿ: ಡಿ.ಕೆ.ಶಿವಕುಮಾರ್
ರೈಲು ದುರಂತದಲ್ಲಿ ಸಾವನ್ನಪ್ಪಿದವರಿಗೆ ಶಾಸಕ ಗಣೇಶ್ ಸಂತಾಪ: ಒರಿಸ್ಸಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಸಾವನ್ನಪ್ಪಿದವರಿಗೆ ಗುಂಡ್ಲುಪೇಟೆ ಕ್ಷೇತ್ರದ ನೂತನ ಶಾಸಕ ಎಚ್.ಎಂ. ಗಣೇಶ್‌ಪ್ರಸಾದ್ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.
ರೈಲು ದುರಂತದಲ್ಲಿ 235 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿ, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದು ನೋವಿನ ಸಂಗತಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ನುಡಿದಂತೆ ನಡೆದ ನೂತನ ಶಾಸಕ ಗಣೇಶ್‌ಪ್ರಸಾದ್: ನೂತನ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕವೂ ನುಡಿದಂತೆ ನಡೆದುಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಎಚ್.ಎಂ.ಗಣೇಶ್‌ಪ್ರಸಾದ್ ಶಾಸಕರಾದ ಮರು ದಿನವೇ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ನನಗೆ ಹಾರ, ತುರಾಯಿ ಬೇಕಿಲ್ಲ, ಫ್ಲೆಕ್ಸ್, ಬ್ಯಾನರ್ ಬದಲಿಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾರ, ಪೇಟ, ಶಾಲು, ಫ್ಲೆಕ್ಸ್‌ನ ಹಣ ನೀಡುವಂತೆ ಕೋರಿದ್ದರು.
ಸರ್ಕಾರ ರಚನೆಯಾದ ಬಳಿಕ ವಿಧಾನಸಭೆಯಲ್ಲಿ ಶಾಸಕ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿದ ನಂತರ ಗುಂಡ್ಲುಪೇಟೆಗೆ ನೂತನ ಶಾಸಕರಾಗಿ ಪ್ರವಾಸಿ ಮಂದಿರಕ್ಕೆ ಆಗಮಿಸಿದಾಗ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾರ, ತುರಾಯಿ, ಶಾಲು ತಂದಿರಲಿಲ್ಲ. ಕ್ಷೇತ್ರದ ಪ್ರಥಮ ಪ್ರಜೆಯಾಗಿ ಕ್ಷೇತ್ರಕ್ಕೆ ಮೊದಲ ಭೇಟಿಯ ದಿನ ಪ್ರವಾಸಿ ಮಂದಿರಕ್ಕೆ ಶಾಸಕರು ಆಗಮಿಸಿದಾಗಲೂ ಶಾಸಕರ ಸಲಹೆಯಂತೆ ಒಂದು ಪಟಾಕಿ ಸದ್ದು ಮಾಡಲಿಲ್ಲ, ಇಂದು ಪ್ರಜ್ಞಾವಂತ ಶಾಸಕರಿಗೆ ಇರಬೇಕಾದ ಗುಣವಿದು ಎಂಬುದು ಜನರ ಮಾತು.
ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಶಾಸಕ ಬಾಲಕೃಷ್ಣ ಜೊತೆ ಸಂಸದ ಸುರೇಶ್ ಚರ್ಚೆ
ಕಳೆದರೆಡರು ವರ್ಷಗಳಿಂದ ಪಟ್ಟಣದಲ್ಲಿ ಫ್ಲೆಕ್ಸ್‌ಗಳ ಹಾವಳಿಗೆ ಜನರು ಬೇಸತ್ತಿದ್ದರು. ಗಣೇಶ್‌ಪ್ರಸಾದ್ ಶಾಸಕರಾದ ನಂತರ ಫ್ಲೆಕ್ಸ್ ಸಂಸ್ಕೃತಿಗೆ ವಿದಾಯ ಹೇಳುವ ಮೂಲಕ ಗಣೇಶ್‌ಪ್ರಸಾದ್ ಮೊದಲ ಹೆಜ್ಜೆಯಲ್ಲೇ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಶಾಸಕರಾಗುವ ಮುಂಚೆ ಹೇಗಿದ್ದರೋ ಅದೇ ರೀತಿಯಲ್ಲಿ ಪ್ರವಾಸಿ ಮಂದಿರದ ನವೀಕೃತ ಶಾಸಕರ ಕೊಠಡಿ ಉದ್ಘಾಟಿಸಿದರು. ನಂತರ ಕ್ಷೇತ್ರದಲ್ಲಿ ಹಲವು ಗ್ರಾಮಗಳಲ್ಲಿ ಮಳೆ, ಗಾಳಿಗೆ ಹಾನಿಯಾಗಿದ್ದ ಸ್ಥಳ ಪರಿಶೀಲನೆಗೆ ಹೋಗಿ, ಮನೆಗೆ ಹಾನಿಯಾದ ಕುಟುಂಬಸ್ಥರಿಗೆ ಶಾಸಕರಾಗಿದ್ದುಕೊಂಡು ವೈಯಕ್ತಿಕವಾಗಿ ನೆರವು ನೀಡಿದ್ದು ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.