ಪ್ರವಾ​ಸೋ​ದ್ಯಮ ಅಭಿವೃದ್ಧಿಗೆ ಕ್ರಮ: ಶಾಸಕ ಬಾಲ​ಕೃಷ್ಣ ಜೊತೆ ಸಂಸದ ಸುರೇಶ್‌ ಚರ್ಚೆ

By Kannadaprabha News  |  First Published Jun 4, 2023, 8:43 PM IST

ಮಾಗಡಿ ತಾಲೂಕು ಅನೇಕ ವೈಶಿಷ್ಟ್ಯಗಳಿಂದ ಕೂಡಿದ ತಾಲೂಕಾಗಿರುವುದರಿಂದ ಇದು ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಆಗಲೇಬೇಕು. ಅದರಲ್ಲೂ ಪ್ರವಾಸಿ ತಾಣವಾಗಿ ವ್ಯವಸ್ಥಿತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕಾಗಿದೆ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು. 


ಕುದೂರು (ಜೂ.04): ಮಾಗಡಿ ತಾಲೂಕು ಅನೇಕ ವೈಶಿಷ್ಟ್ಯಗಳಿಂದ ಕೂಡಿದ ತಾಲೂಕಾಗಿರುವುದರಿಂದ ಇದು ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಆಗಲೇಬೇಕು. ಅದರಲ್ಲೂ ಪ್ರವಾಸಿ ತಾಣವಾಗಿ ವ್ಯವಸ್ಥಿತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕಾಗಿದೆ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು. ಮಾಗಡಿ ತಾಲೂಕಿನ ಪ್ರವಾಸಿ ಸ್ಥಳ​ಗಳ ಅಭಿವೃದ್ಧಿ ಕುರಿತು ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್‌.ಕೆ.ಪಾಟೀಲ್‌ ​ಅ​ವ​ರನ್ನು ಭೇಟಿ​ಯಾಗಿ ಚರ್ಚೆ ನಡೆ​ಸಿದ ವಿಷ​ಯ​ಗ​ಳನ್ನು ಬಾಲ​ಕೃ​ಷ್ಣ​ ಅ​ವರು ವಿವ​ರಿ​ಸಿ​ದರು.

ಕೆಂಪೇಗೌಡರ ಜನ್ಮಸ್ಥಳ ಕೆಂಪಾಪುರ ಮತ್ತು ಅವರು ಆಳ್ವಿಕೆ ಮಾಡಿದ ಸಾವನದುರ್ಗ, ಭೈರವನದುರ್ಗ ಬೆಟ್ಟಗಳನ್ನು ಉಳಿಸುವುದು. ಅಲ್ಲಿರುವ ಕುರುಹುಗಳನ್ನು ರಕ್ಷಿಸಿ ಮುಂದಿನ ತಲೆಮಾರಿಗೆ ಹೆಮ್ಮೆ ಬರುವಂತೆ ಮಾಡುವುದು, ಸಿದ್ದಗಂಗಾ ಶ್ರೀಗಳ ಜನ್ಮಸ್ಥಳ ವೀರಾಪುರ, ಆದಿಚುಂಚನಗಿರಿ ಶ್ರೀಗಳ ಜನ್ಮಸ್ಥಳ ಬಾನಂದೂರು ಗ್ರಾಮಗಳನ್ನು ಜಗತ್ತೇ ವಿಸ್ಮಯದಿಂದ ನೋಡುವಂತೆ ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ತಾಲೂಕಿನಲ್ಲಿ ಹುಟ್ಟಿಇದರ ಕೀರ್ತಿಯನ್ನು ಜಗತ್ತಿನಾದ್ಯಂತ ಹರಿಸಿದ ಮಹಾನ್‌ ಚೇತನಗಳ ಜನ್ಮಸ್ಥಳಗಳ ಜೀರ್ಣೋದ್ಧಾರಕ್ಕೂ ಶ್ರಮಿಸುತ್ತಿದ್ದೇವೆ. ಅದಕ್ಕಾಗಿ ನೀಲನಕ್ಷೆಯೊಂದನ್ನು ಸಿದ್ದಪಡಿಸಿ ಸಚಿವರನ್ನು ಭೇಟಿ ಮಾಡಿದ್ದೇವೆ ಎಂದು ಬಾಲ​ಕೃ​ಷ್ಣ ಹೇಳಿದರು.

Tap to resize

Latest Videos

ಆ​ರೋಗ್ಯ, ಶಿಕ್ಷ​ಣದ ವಲಸೆ ತಪ್ಪಿ​ಸುವುದು ನನ್ನ ಗುರಿ: ಡಿ.ಕೆ.​ಶಿ​ವ​ಕು​ಮಾರ್‌

ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ಉತ್ಸಾಹಿ ಶಾಸಕರಿದ್ದರೆ ಸಚಿವರಾಗಿ ನನಗೂ ಕೆಲಸ ಮಾಡಲು ಖುಷಿ ಎನಿಸುತ್ತದೆ. ಗೆದ್ದ ಮೇಲೆ ತಾಲೂಕಿನ ಜನರಿಗೆ ಏನಾದರೂ ಕೊಡುಗೆ ನೀಡಿ ತಾಲೂಕನ್ನು ಮಾದರಿ ಮಾಡಬೇಕೆಂದು ಹಂಬಲಿಸುತ್ತಿರುವ ಶಾಸಕ ಬಾಲಕೃಷ್ಣರವರಿಗೆ ನನ್ನ ಸಂಪೂರ್ಣ ಸಹಕಾರವಿರುತ್ತದೆ. ಎಲ್ಲಾ ರೀತಿಯಲ್ಲೂ ಸರ್ಕಾರದಿಂದ ಸಹಾಯ ಮಾಡಿ ಮಾಗಡಿಯನ್ನು ರಾಜ್ಯದ ಆಕರ್ಷಣೀಯ ಪ್ರವಾಸಿ ತಾಣವನ್ನಾಗಿಸುವತ್ತ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿ​​ಸಿದರು. ಸಂಸದ ಡಿ.ಕೆ.ಸುರೇಶ್‌ ಮಾತ​ನಾ​ಡಿ, ಜನಾಶೀರ್ವಾದ ನಮ್ಮಗಳ ಮೇಲೆ ಸಂಪೂರ್ಣವಾಗಿದೆ. ಅದಕ್ಕಾಗಿ ಹೇಮಾವತಿ ನದಿ ನೀರು ತಾಲೂಕಿಗೆ ತರುವ ಕೆಲಸಕ್ಕೂ ಚಾಲನೆ ನೀಡುತ್ತಿದ್ದೇವೆ ಎಂದು ಹೇಳಿದರು.

ಗ್ಯಾರಂಟಿ ಹೇಳಿಕೆ ಎಚ್ಡಿಡಿಗೆ ಶೋಭೆ ತರಲ್ಲ: ಕಾಂಗ್ರೆಸ್‌ ಪಕ್ಷ ಘೋಷಿ​ಸಿ​ರುವ ಗ್ಯಾರಂಟಿ​ಗಳ ಕುರಿತು ಮಾಜಿ ಸಿಎಂ ಕುಮಾ​ರ​ಸ್ವಾ​ಮಿ​ ಅವರ ಹೇಳಿ​ಕೆ​ಗಳು ಅವರ ಘನ​ತೆಗೆ ಶೋಭೆ ತರು​ವು​ದಿಲ್ಲ ಎಂದು ಮಾಗಡಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ಕಿಡಿ​ಕಾ​ರಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ​ಗಳ ಅನು​ಷ್ಠಾನ ಕುರಿತು ಸಾಧಕ ಬಾಧ​ಕ​ಗಳ ಚರ್ಚೆ ನಡೆದು ನಿಯ​ಮ​ಗ​ಳನ್ನು ರೂಪಿ​ಸಿ ಅರ್ಹ ಫಲಾ​ನು​ಭ​ವಿ​ಗ​ಳಿಗೆ ತಲು​ಪಿ​ಸು​ತ್ತೇವೆ. ಇದ​ಕ್ಕೆ ಕಾಲಾ​ವ​ಕಾಶ ಬೇಕಾ​ಗಿದೆ. ಮಾಜಿ ಸಿಎಂ ಕುಮಾ​ರ​ಸ್ವಾಮಿ ಜನ​ರನ್ನು ಎತ್ತಿ​ಕ​ಟ್ಟುವ ಕೆಲಸ ಮಾಡು​ವುದು ಬೇಡ ಎಂದು ಟಾಂಗ್‌ ನೀಡಿ​ದರು.

ಕಳೆದ ಬಾರಿ ಕುಮಾ​ರ​ಸ್ವಾಮಿ ಮುಖ್ಯ​ಮಂತ್ರಿ ಆದ 24 ಗಂಟೆಯೊಳಗೆ ಕಮ​ರ್ಷಿ​ಯಲ್‌ ಬ್ಯಾಂಕ್‌, ಕೋ ಆಪ​ರೇ​ಟಿವ್‌ ಬ್ಯಾಂಕ್‌ನಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ, ವಿಧ​ವೆ​ಯರು, ವೃದ್ಧ​ರಿಗೆ ತಲಾ 6 ಸಾವಿರ ಮಾಸಾ​ಶನ ನೀಡು​ವು​ದಾಗಿ ಘೋಷಣೆ ಮಾಡಿ​ದ್ದರು. ಅವರು ಯಾವ ರೀತಿ ಮುಖ್ಯ​ಮಂತ್ರಿ ಪದವಿ ಅಲಂಕ​ರಿ​ಸಿ​ದರೆಂದು ಕೇಳು​ವು​ದಿಲ್ಲ. ಮುಖ್ಯ​ಮಂತ್ರಿ ಆದ 24 ಗಂಟೆ​ಯೊ​ಳಗೆ ಕೊಟ್ಟಭರ​ವಸೆ ಈಡೇ​ರಿ​ಸ​ಲಿಲ್ಲ. ಸಿಎಂ ಆಗಿ ಕೆಲಸ ಮಾಡಿದ ಅನು​ಭವ ಹೊಂದಿ​ರುವ ಕುಮಾ​ರ​ಸ್ವಾಮಿ ಜನ​ರನ್ನು ವಿದ್ಯುತ್‌ ಬಿಲ್‌ ಕಟ್ಟ​ಬೇಡಿ ಎಂದು ಉತ್ತೇ​ಜಿ​ಸು​ವು​ದ​ರಲ್ಲಿ ಅರ್ಥ​ವಿಲ್ಲ ಎಂದು ಕಿಡಿ​ಕಾ​ರಿ​ದ​ರು. ನಾವು ಕೊಟ್ಟಿರುವ ಎಲ್ಲಾ ಭರವಸೆ ಈಡೇರಿಸುತ್ತೇವೆ. 

ಮಕ್ಕಳ ದಾಖ​ಲಾ​ತಿಗೆ ವಾಮ​ಮಾರ್ಗ ಹಿಡಿದ ಪೋಷ​ಕರು: ಎಲ್‌ಕೆಜಿಗೆ 4 ವರ್ಷ, ಯುಕೆಜಿಗೆ 5 ವರ್ಷ

ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಅಂದಿದ್ದೇವೆ. ನಮ್ಮಲ್ಲಿ ಸಮರ್ಥ ಮುಖ್ಯ​ಮಂತ್ರಿ ಹಾಗೂ ಉಪ​ಮು​ಖ್ಯ​ಮಂತ್ರಿ ಇತರರಿದ್ದರು. ಮಂತ್ರಿಮಂಡಲದಲ್ಲಿ ಅನುಭವಿ ಸಚಿವರಿದ್ದಾರೆ. ಗ್ಯಾರಂಟಿ​ಗಳ ಸಾಧಕ - ಬಾಧಕ ಚರ್ಚೆ ಮಾಡಿ ಅದು ​ದು​ರು​ಪ​ಯೋಗವಾಗದೆ ಅರ್ಹ ಫಲಾ​ನು​ಭ​ವಿ​ಗ​ಳಿಗೆ ತಲು​ಪ​ಬೇಕು. ಆದ್ದ​ರಿಂದ ನಿಯ​ಮ​ಗ​ಳನ್ನು ರೂಪಿ​ಸ​ಲಾ​ಗು​ತ್ತಿದೆ. ಆನಂತರ ಅದನ್ನು ಅನು​ಷ್ಠಾನಕ್ಕೆ ತರು​ತ್ತೇ​ವೆ ಎಂದು ಹೇಳಿ​ದರು. ಜನರ ಆಶೀರ್ವಾದ ಸಿಕ್ಕಿ​ದ್ದ​ರಿಂದಲೇ ಶಾಸಕನಾಗಿದ್ದೇನೆ. ಅದನ್ನು ಸದು​ಪ​ಯೋಗ ಪಡಿ​ಸಿ​ಕೊ​ಳ್ಳು​ತ್ತೇನೆ. ಸಚಿ​ವ​ರ​ನ್ನಾಗಿ ಮಾಡ​ಲಿಲ್ಲ ಅಂತ ಜನ​ರು ಮಾಡಿ​ರುವ ಆಶೀ​ರ್ವಾದವನ್ನು ವ್ಯರ್ಥ ಮಾಡಲು ಆಗು​ವು​ದಿಲ್ಲ. ಅದನ್ನು ಸದು​ಪ​ಯೋಗ ಪಡಿ​ಸಿ​ಕೊಂಡು ಮೊದಲು ಜನರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ನನ​ಗೇನು ಸಿಗ​ಲಿಲ್ಲ ಅಂತ ಜನ​ರಿಗೆ ಮೋಸ ಮಾಡಲು ಆಗು​ವು​ದಿಲ್ಲ. ಅವ​ರಿಗೆ ನ್ಯಾಯ ಒದ​ಗಿ​ಸು​ತ್ತೇನೆ. ಸಮಯ ಸಂದರ್ಭ ಬಂದಾಗ ಹೈಕ​ಮಾಂಡ್‌ ಆಶೀ​ರ್ವಾದ ಮಾಡು​ತ್ತಾ​ರೆಂಬ ಆಶಾ​ಭಾ​ವನೆ ಇದೆ ಎಂದು ಹೇಳಿ​ದ​ರು.

click me!