ನಿತ್ಯ 2-3 ಕೇಜಿ ಬೈಗುಳ ತಿಂತೇನೆ, ಅದೇ ನನ್ನ ಶಕ್ತಿ: ಮೋದಿ

Published : Nov 13, 2022, 03:49 AM IST
ನಿತ್ಯ 2-3 ಕೇಜಿ ಬೈಗುಳ ತಿಂತೇನೆ, ಅದೇ ನನ್ನ ಶಕ್ತಿ: ಮೋದಿ

ಸಾರಾಂಶ

ನಿತ್ಯ 2-3 ಕೇಜಿ ಬೈಗುಳ ತಿಂತೇನೆ, ಅದೇ ನನ್ನ ಶಕ್ತಿ: ಮೋದಿ ಹೀಗಾಗಿ ನನಗೆ ಆಯಾಸವೇ ಆಗುವುದಿಲ್ಲ ತೆಲಂಗಾಣದ ಎಲ್ಲೆಲ್ಲೂ ಕಮಲ ಅರಳುತ್ತೆ

ಹೈದರಾಬಾದ್‌ (ನ.13) :: ‘ಪ್ರತಿದಿನ ನಾನು 2-3 ಕೇಜಿ ತೆಗಳಿಕೆಗಳನ್ನು ತಿನ್ನುತ್ತೇನೆ. ಈ ನಿಂದನೆಗಳು ನನ್ನ ದೇಹ ಪ್ರವೇಶಿಸಿ ಪೌಷ್ಟಿಕಾಂಶದ ರೂಪ ನೀಡುತ್ತಿವೆ. ಈ ರೀತಿ ನನ್ನನ್ನು ಭಗವಂತ ಆಶೀರ್ವದಿಸಿದ್ದಾನೆ. ಹೀಗಾಗಿ ನನಗೆ ಆಯಾಸವೇ ಆಗುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2 ದಿನಗಳಲ್ಲಿ 4 ರಾಜ್ಯಗಳ ಭೇಟಿ ಅಂಗವಾಗಿ ಶನಿವಾರ ತೆಲಂಗಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳು ಹಾಗೂ ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್‌ ವಿರುದ್ಧ ಸಾರ್ವಜನಿಕ ರಾರ‍ಯಲಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

Gujarat Election 2022: ನರೇಂದ್ರ ಮೋದಿ ಸ್ಟೇಡಿಯಂ ಹೆಸರು ಬದಲಾವಣೆ, ಉದ್ಯೋಗ ಭರವಸೆ ನೀಡಿದ ಕಾಂಗ್ರೆಸ್‌ ಪ್ರಣಾಳಿಕೆ!

‘ಅಷ್ಟೊಂದು ಶ್ರಮದಿಂದ ಕೆಲಸ ಮಾಡಿದರೂ ನೀವೇಕೆ ಆಯಾಸಗೊಳ್ಳುವುದಿಲ್ಲ ಎಂದು ಹಲವು ಜನರು ಕೇಳುತ್ತಾರೆ. ಇದಕ್ಕೆ ಕಾರಣ ನಿಂದನೆ. ಬೇಕಿದ್ದರೆ ಮೋದಿಯನ್ನು ಬೈಯ್ಯಿರಿ, ಬಿಜೆಪಿಯನ್ನು ಬೈಯ್ಯಿರಿ. ಆದರೆ ನೀವೇನಾದರೂ ತೆಲಂಗಾಣ ಜನರನ್ನು ಬೈದರೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕೆಲವು ವ್ಯಕ್ತಿಗಳು ಹತಾಶರಾಗಿ, ಆತಂಕಗೊಂಡು, ಮೂಢನಂಬಿಕೆಯಿಂದ ಮೋದಿಯ ವಿರುದ್ಧ ತಮಗಿಷ್ಟಬಂದ ಪದಗಳನ್ನು ಬಳಸಿ ನಿಂದಿಸುತ್ತಾರೆ. ಇದೆಲ್ಲಾ ತಂತ್ರಗಳಾಗಿದ್ದು, ಅದಕ್ಕೆ ಮಣಿಯಬೇಡಿ ಎಂದು ತೆಲಂಗಾಣದ ಕಾರ್ಯಕರ್ತರಿಗೆ ಕೋರುತ್ತೇನೆ. ತೆಲಂಗಾಣದಲ್ಲಿ ಎಲ್ಲಿ ವಾಸಿಸಬೇಕು, ಕಚೇರಿ ಎಲ್ಲಿರಬೇಕು, ಯಾರನ್ನು ಸಚಿವರಾಗಿ ಮಾಡಬೇಕು ಎಂಬುದು ಸೇರಿದಂತೆ ಎಲ್ಲ ಮಹತ್ವದ ನಿರ್ಧಾರಗಳನ್ನೂ ಮೂಢನಂಬಿಕೆ ಆಧರಿಸಿ ತೆಗೆದುಕೊಳ್ಳಲಾಗುತ್ತಿದೆ. ಇದು ಸಾಮಾಜಿಕ ನ್ಯಾಯಕ್ಕೆ ಅತಿದೊಡ್ಡ ತಡೆಗೋಡೆಯಾಗಿದೆ’ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ ಹೆಸರೆತ್ತದೆ ಚಾಟಿ ಬೀಸಿದರು.

ಮೂಢನಂಬಿಕೆಗೆ ಕಿಡಿ:

‘ತೆಲಂಗಾಣ ಮಾಹಿತಿ ತಂತ್ರಜ್ಞಾನದ ಕೇಂದ್ರ. ಆದರೆ ಆಧುನಿಕ ನಗರದಲ್ಲಿ ಮೂಢನಂಬಿಕೆಯನ್ನು ಉತ್ತೇಜಿಸಲಾಗುತ್ತಿದೆ. ಇದು ಬೇಸರದ ಸಂಗತಿ. ತೆಲಂಗಾಣವನ್ನು ಅಭಿವೃದ್ಧಿಪಡಿಸಬೇಕಾದರೆ, ಅದನ್ನು ಹಿಂದುಳಿದಿರುವಿಕೆಯಿಂದ ಮೇಲೆತ್ತಬೇಕಾದರೆ, ಈ ಮೂಢನಂಬಿಕೆಗಳನ್ನೆಲ್ಲಾ ಕಿತ್ತೊಗೆಯಬೇಕು’ ಎಂದು ಕರೆ ನೀಡಿದರು.

 

ಒಂದೇ ಭೇಟಿ, 3 ಸಮುದಾಯಗಳ ಒಲವು ಗಳಿಸಲು ಮೋದಿ ಯತ್ನ

‘ಸರ್ಕಾರ ಎಲ್ಲ ಕುಟುಂಬಗಳ ಪರವಾಗಿ ಕೆಲಸ ಮಾಡಬೇಕೇ ಹೊರತು ಒಂದು ಕುಟುಂಬಕ್ಕಾಗಿ ಅಲ್ಲ ಎಂದು ತೆಲಂಗಾಣ ಬಯಸಿದ್ದಾರೆ. ತೆಲಂಗಾಣ ಜನರು ವಿಶ್ವಾಸವಿರಿಸಿದ್ದ ಪಕ್ಷ ಜನರಿಗೆ ವಂಚನೆ ಮಾಡಿದೆ. ಯಾವಾಗ ನಾಲ್ಕೂ ದಿಕ್ಕುಗಳಿಂದ ಅಂಧಕಾರ ಆವರಿಸುತ್ತದೋ ಆಗ ಕಮಲ ಅರಳುತ್ತದೆ. ತೆಲಂಗಾಣದ ಎಲ್ಲೆಡೆ ಕಮಲ ಅರಳುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸುಳ್ಳು ಆರೋಪ ಮಾಡಿದರೆ ಒದ್ದು ಒಳಗೆ ಹಾಕಬೇಕಾಗುತ್ತದೆ: ಸಚಿವ ಎಂ.ಬಿ.ಪಾಟೀಲ್‌
ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ