ಸಾಂಸ್ಕೃತಿಕ ನಗರಿ, ಶೈಕ್ಷಣಿಕ ಕ್ಷೇತ್ರ ಎಂದು ಕರೆಯಿಸಿಕೊಳ್ಳುವ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಳೆಯಿಂದ ಕಾಂಗ್ರೆಸ್‌ನ ಯುವ ನಾಯಕ, ಪಾಲಿಕೆ ಸದಸ್ಯರೂ ಡಾ. ಮಯೂರ ಮೋರೆ ಅವರು ಪಾದಯಾತ್ರೆ ಆರಂಭಿಸಲಿದ್ದಾರೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಫೆ.2) : ಸಾಂಸ್ಕೃತಿಕ ನಗರಿ, ಶೈಕ್ಷಣಿಕ ಕ್ಷೇತ್ರ ಎಂದು ಕರೆಯಿಸಿಕೊಳ್ಳುವ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಳೆಯಿಂದ ಕಾಂಗ್ರೆಸ್‌ನ ಯುವ ನಾಯಕ, ಪಾಲಿಕೆ ಸದಸ್ಯರೂ ಡಾ. ಮಯೂರ ಮೋರೆ ಅವರು ಪಾದಯಾತ್ರೆ ಆರಂಭಿಸಲಿದ್ದಾರೆ.
ಕೆಲಗೇರಿ ಗ್ರಾಮದಿಂದ ಸಿದ್ದಾರೂಢ ದೇವಸ್ಥಾನದವರೆಗೆ 250 ಕಿಮೀ ವರೆಗೆ ಪಾದಯಾತ್ರೆ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವ ಆಶಯ ಹೊಂದಿರುವ ಇವರು ಜನತೆಯ ಮೂಲಭೂತ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಪಕ್ಷ ಸಂಘಟಿಸಲಿದ್ದಾರೆ.
ಯತ್ನಾಳ, ನಿರಾಣಿ ಪರಸ್ಪರ ಟೀಕೆಯಿಂದ ಪಕ್ಷಕ್ಕೆ ಹಿನ್ನಡೆ; ಅರವಿಂದ ಬೆಲ್ಲದ್
2023 ರ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿರುವ ಮಯೂರ ಮೋರೆ(Mayoor more) ಸದ್ಯ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿ ಜನ ಬೆಂಬಲಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳೂ, ನಾಯಕರೂ, ಹಾಗೂ ಕಾರ್ಯಕರ್ತರೊಡನೆ ಪಾದಯಾತ್ರೆ ನಡೆಸಿ ಬೇರೆ ಬೇರೆ ವಾರ್ಡಿನಲ್ಲಿಯ ನಾಗರಿಕರ ಮನೆ ಮನೆಗೆ ತೆರಳಿ ಸಮಸ್ಯೆಗಳನ್ನು ಆಲಿಸಲಿದ್ದಾರೆ.ನಗರದ ಪ್ರತಿಯೊಬ್ಬರೂ ಪಾಲಿಕೆಗೆ ಟ್ಯಾಕ್ಸ್ ಕಟ್ಟಿದ್ದರೂ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅವೆಲ್ಲವನ್ನು ಖುದ್ದಾಗಿ ಪರಿಶೀಲಿಸಿ ಅದಕ್ಕೆ ಸರಿಯಾಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಆಶಯ ಹೊಂದಿದ್ದಾರೆ.
ಸ್ಮಾರ್ಟ್ ಸಿಟಿಯ ವ್ಯಾಪ್ತಿಯಲ್ಲಿ ಕ್ಷೇತ್ರ ಬಂದಿದ್ದರೂ ಸ್ಥಳೀಯ ಆಡಳಿತಾರೂಢ ಪಕ್ಷದ ನಾಯಕರ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿಲ್ಲ ಒಳಚರಂಡಿ, ರಸ್ತೆ ಗಟಾರು, ಕುಡಿಯುವ ನೀರು, ವಿದ್ಯುತ್ ದ್ವೀಪ, ವಸತಿ ಮುಂತಾದ ಸಮಸ್ಯೆಗಳ ಸುಳಿಯಲ್ಲಿ ನಾಗರಿಕರು ಸಿಲುಕಿದ್ದರೂ ಅಧಿಕಾರಿಗಳು ಅದಕ್ಕೆ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿಯ ಸಮಸ್ಯೆಗಳ ಪಟ್ಟಿ ಮಾಡಿ ಅವುಗಳ ಪರಿಹಾರಕ್ಕೆ ಮುಂದಾಗುವ ಪ್ರಯತ್ನ ಈ ಪಾದಯಾತ್ರೆಯ ಉದ್ದೇಶಗಳಲ್ಲಿ ಒಂದಾಗಿದೆ.ಯಾವುದೇ ಜಾತಿ ಮತ, ಪಂಥ, ಪಂಗಡ ಎನ್ನದೇ ಎಲ್ಲರನ್ನೂ ಈ ಪಾದಯಾತ್ರೆಯಲ್ಲಿ ಒಗ್ಗೂಡಿಸಿಕೊಂಡು ಹೋಗುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಯತ್ನವೂ ಇದಾಗಿದೆ.
ಹಿಂದುಳಿದ ಪ್ರದೇಶ, ಕೊಳಚೆ ಪ್ರದೇಶಗಳಲ್ಲಿ ಶೈಕ್ಷಣಿಕ ಗುಣಮಟ್ಟದ ಕೊರತೆ ಎದ್ದು ಕಾಣುತ್ತದೆ. ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸುವ ಹಾಗೂ ಕೊಳಚೆ ನಿವಾಸಿಗಳ ಶಾಲಾ ಮಕ್ಕಳಿಗೆ ಪ್ರತಿಭೋತ್ಸವ ಕಾರ್ಯಕ್ರಮ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. 'ಸರ್ಕಾರಿ ಶಾಲೆಗಳೆಂದರೆ ದೇವಾಲಯಗಳಿದ್ದಂತೆ, ಅಲ್ಲಿಯ ಮುಗ್ಧ ಮಕ್ಕಳು ದೇವರಿದ್ದಂತೆ' ಎಂಬ ನಂಬಿಕೆ ಹೊಂದಿರುವ ಡಾ. ಮಯೂರ ಮೋರೆ ಸರ್ಕಾರಿ ಶಾಲೆಗಳ ಸ್ಥಿತಿಗತಿ ಗಮನಿಸಿ ಅವುಗಳ ಅಭಿವೃದ್ಧಿಯತ್ತ ಪ್ರಾಮಾಣಿಕಹೋರಾಟ ಮಾಡಲಿದ್ದಾರೆ.
ರಸ್ತೆಗಳು ಹಾಳಾಗಿ ಧೂಳಮಯವಾಗಿದೆ, ಗಟಾರುಗಳು ಗಬ್ಬೆದ್ದು ನಾರುತ್ತಿವೆ. ಆರೋಗ್ಯಕರ ವಾತಾವರಣವೇ ಇಲ್ಲದಂತಾಗಿದೆ. ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ ಇದಕ್ಕೆ ಕಾರಣವಾಗಿದೆ. ಆಯಾ ಕ್ಷೇತ್ರದ ಚುನಾಯಿತ ನಾಯಕರು ಜನರ ಆಗು ಹೋಗುಗಳಿಗೆ ಸ್ಪಂದಿಸುವ ಉದ್ದೇಶದಿಂದ ಸ್ಥಳೀಯ ವಾಸಿಗಳಾಗಿರಬೇಕೆನ್ನುವ ಡಾ. ಮಯೂರ ಆ ಕೊರತೆ ನೀಗಿಸಲು ಸದೃಡ ನಾಯಕರ ಆಯ್ಕೆಗೆ ಮನವಿ ಮಾಡಿಕೊಳ್ಳುವ ಉದ್ದೇಶವನ್ನು ಸಹ ಈ ಪಾದಯಾತ್ರೆ ಹೊಂದಿದೆ.
Chikkodi: 25 ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಬೋರ್ಡ್ ಕೊಟ್ಟ ಖಾಸಗಿ ಶಾಲೆ ಮಾಲೀಕ: ಮಾದರಿ ಕಾರ್ಯ
ಡಾ. ಮಯೂರ ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದುಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರೆಯಬಹುದಿತ್ತು, ಆರ್ಥಿಕವಾಗಿ ಸಬಲರಾಗಿರುವ ಅವರು ವೈದ್ಯಕೀಯ ಕ್ಷೇತ್ರ ಬಿಟ್ಟು ಜನಸೇವೆಯ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೆ ಬಂದು ಪ್ರಾಮಾಣಿಕ ಸೇವೆಯ ಛಲ ತೊಟ್ಟಿದ್ದೇನೆ ಎಂದು ಮಯೂರ ಮೋರೆ ಹೇಳಿದ್ದಾರೆ. ಹೇಳಿದಂತೆ ಮಾಡುತ್ತಾರೆ ಎಂಬ ವಿಶ್ವಾಸ ಜನರದ್ದು.