ಮಠ ಮಂದಿರಗಳನ್ನು ವಿವಾದಕ್ಕೆ ಈಡುಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ. ಚುನಾವಣೆಯಲ್ಲಿ ಒಂದು ಜಾತಿಯನ್ನು ಉಪಯೋಗ ಮಾಡಿಕೊಳ್ಳಲು ಇಂತಹ ಕಾರ್ಯಕ್ಕೆ ಇಳಿಯುತ್ತಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಶಿರಸಿ (ಫೆ.1) : ಮಠ ಮಂದಿರಗಳನ್ನು ವಿವಾದಕ್ಕೆ ಈಡುಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ. ಚುನಾವಣೆಯಲ್ಲಿ ಒಂದು ಜಾತಿಯನ್ನು ಉಪಯೋಗ ಮಾಡಿಕೊಳ್ಳಲು ಇಂತಹ ಕಾರ್ಯಕ್ಕೆ ಇಳಿಯುತ್ತಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ತಾಲೂಕಿನ ಬಿಸ್ಲಕೊಪ್ಪದಲ್ಲಿ ಮಾತನಾಡಿದ ಅವರು, ಅತ್ತಿವೇರಿ ಮಾತೆಯವರ ಬಗ್ಗೆ ಏಕವಚನ ಬಳಸಿದ್ದೇನೆ ಎಂದು ನನ್ನ ಮೇಲೆ ಕಾಂಗ್ರೆಸ್ ಪ್ರಮುಖರು ಆರೋಪ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ನಾನು ಗುರುಗಳು, ಹಿರಿಯರು ಅಥವಾ ವಿರೋಧಿಗಳ ಬಗ್ಗೆ ಅಗೌರವ ತೋರಿಲ್ಲ. ಅಂತಹ ಶಬ್ದ ಬಳಸಿಲ್ಲ ಎಂದರು.
ಕನ್ನಡದ ಒಂದಿಂಚು ನೆಲವನ್ನೂಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ; ಶಿವರಾಮ್ ಹೆಬ್ಬಾರ್
ಕಾಂಗ್ರೆಸ್ ವಿನಾಕಾರಣ ಇದನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಪತ್ರಿಕಾಗೋಷ್ಠಿ ಮಾಡುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಈ ರೀತಿಯ ಅಪಪ್ರಚಾರದ ತಂತ್ರ ಹೂಡುತ್ತಿದೆ ಎಂದ ಅವರು, ವಿರೋಧ ಪಕ್ಷದವರು ಅವರ ಕೆಲಸ ಮಾಡಲಿ. ಆದರೆ ಇಂತಹ ಸನ್ನಿವೇಶದಿಂದ ನಾನು ವಿಚಲಿತ ಆಗುತ್ತೇನೆ ಎಂದ ತಿಳಿದಿದ್ದರೆ ಅದು ಸಾಧ್ಯವಿಲ್ಲ ಎಂದರು.
1994ರಿಂದ 2000ರ ವರೆಗೆ 6 ವರ್ಷ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ನಾನು ಕೆಲಸ ಮಾಡಿದ್ದೇನೆ. ಆಗ ಈ ಮೂಲ ಬಿಜೆಪಿಯೇ ಆಗಿದೆ ಎಂದರು.
ವರ್ತೂರ ಪ್ರಕಾಶ್ ಅವರ ಬಗ್ಗೆ ಮಾತನಾಡಿದ ಸಚಿವರು, ಮಾನಸಿಕ ಸ್ಥಿತಿ ಸರಿ ಇಲ್ಲದವರು ಮಾತ್ರ ಬೇರೆಯವರ ವೈಯಕ್ತಿಕ ಜೀವನದ ಬಗ್ಗೆ ಟೀಕೆ ಮಾಡುತ್ತಾರೆ. ಹಾಗಾಗಿ ವರ್ತೂರ ಯಾವ ಸ್ಥಿತಿಯಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಆ ಸ್ಥಿತಿ ತಿಳಿದುಕೊಂಡು ಉತ್ತರ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದರು.
Uttara Kannada: ಮರಾಠಿಗರಿಗೆ ಕಸಾಪ ತಕ್ಕ ಪಾಠ ಕಲಿಸಲಿ: ಸಚಿವ ಹೆಬ್ಬಾರ್