ಸರ್ವರಿಗೂ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಅನ್ನ ನೀಡುವ ರೈತರ ಬಾಳು ಹಸನಾಗಿಸುವ ಸಂಕಲ್ಪದೊಂದಿಗೆ ನಾನು ಶಾಸಕನಾಗಿ ಬದ್ಧತೆಯಿಂದ ಕೆಲಸ ಮಾಡುವೆ ಎಂದು ನೂತನ ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ಕೋಲಾರ (ಜೂ.01): ಸರ್ವರಿಗೂ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಅನ್ನ ನೀಡುವ ರೈತರ ಬಾಳು ಹಸನಾಗಿಸುವ ಸಂಕಲ್ಪದೊಂದಿಗೆ ನಾನು ಶಾಸಕನಾಗಿ ಬದ್ಧತೆಯಿಂದ ಕೆಲಸ ಮಾಡುವೆ ಎಂದು ನೂತನ ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು. ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಸ್ವತಃ ಸಿಹಿ ತಿನ್ನಿಸಿ, ಶಿಕ್ಷಕರಿಗೂ ಸಿಹಿ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡರೆ ಮಾತ್ರ ಸರ್ವರಿಗೂ ಶಿಕ್ಷಣ ಸಿಗಲು ಸಾಧ್ಯ ಎಂದರು
ಮಾದರಿ ಶಾಲೆಯನ್ನಾಗಿ ಮಾಡುವೆ: ತಾವು ಶಾಸಕನಾದ ನಂತರ ಕೋಲಾರ ತಾಲ್ಲೂಕಿನಲ್ಲಿ ಭೇಟಿ ನೀಡುತ್ತಿರುವ ಮೊದಲ ಶಾಲೆ ಮೊದಲ ಕಾರ್ಯಕ್ರಮ ಇದು, ಈ ನೆನಪನ್ನು ಮರೆಯಲ್ಲ, ವಾರಕ್ಕೊಮ್ಮೆ ನಿಮ್ಮ ಶಾಲೆಗೆ ಬಂದು ಒಂದು ಗಂಟೆ ಇದ್ದು ಹೋಗುವೆ, ಈ ಶಾಲೆಯ ಸಮಗ್ರ ಅಭಿವೃದ್ದಿಗೆ ಎಲ್ಲಾ ರೀತಿಯ ನೆರವು ಒದಗಿಸಿ ಮಾದರಿ ಶಾಲೆಯಾಗಿಸುವೆ. ಈ ಶಾಲೆ ನೋಡಿ ಇತರೆ ಶಾಲೆಗಳು ಅಭಿವೃದ್ಧಿಗೆ ಮುನ್ನುಡಿ ಇಡುವಂತೆ ಮಾಡುವೆ. ವಿಶ್ವದ ಟಾಪ್ 100 ಶ್ರೀಮಂತರಲ್ಲಿ ಕನಿಷ್ಟ10 ಮಂದಿ ನನ್ನ ಸ್ನೇಹಿತರಿದ್ದಾರೆ, ಅವರ ನೆರವು ಪಡೆಯುವೆ ಎಂದರು. ಎಂಎಲ್‌ಸಿ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸೋಣ. ಇಲ್ಲಿಂದ ಐಎಎಸ್, ಐಪಿಎಸ್, ಕೆಎಎಸ್ ಸಾಧಕರನ್ನು ದೇಶಕ್ಕೆ ನೀಡೋಣ ಎಂದರು.
ಗ್ಯಾರಂಟಿಗಾಗಿ ಪಿಎಚ್‌ಎಚ್ ಕಾರ್ಡ್ ಹೊಂದುವ ಬಯಕೆ: ಆನ್‌ಲೈನ್ ಪೋರ್ಟಲ್ ಸ್ಥಗಿತ
ಗುಣಾತ್ಮಕ ಶಿಕ್ಷಣ ಶೇ.100 ಗುರಿ: ಬಿಇಒ ಕನ್ನಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕಿನಲ್ಲಿ 59876 ಮಕ್ಕಳು ಓದುತ್ತಿದ್ದು, ಈ 2023-24ನೇ ಸಾಲನ್ನು ಗುಣಾತ್ಮಕ ಶೈಕ್ಷಣಿಕವರ್ಷವಾಗಿ ಆಚರಿಸುತ್ತಿದ್ದು, ಈ ಬಾರಿ ಮೂರು ಗುರಿ ಹೊಂದಲಾಗಿದೆ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಶೇ.100 ಫಲಿತಾಂಶ ಸಾಧನೆ, ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕಗಳಿಕೆ, ಫಲಿತಾಂಶದಲ್ಲಿ ರಾಜ್ಯದಲ್ಲಿ ಈಗ 6ನೇ ಸ್ಥಾನದಲ್ಲಿರುವ ನಾವು ಕನಿಷ್ಟ1 ಅಥವಾ 2ನೇ ಸ್ಥಾನಕ್ಕೆ ಬರಬೇಕು ಈ ಸಂಕಲ್ಪ, ಗುರಿಯೊಂದಿಗೆ ಕೆಲಸ ಮಾಡೋಣ ಎಂದರು.
ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ: ಶಾಸಕ ಕೊತ್ತೂರು ಮಂಜುನಾಥ್
ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್, ಮುಖಂಡರಾದ ನಂದಿನಿ ಪ್ರವೀಣ್, ಶಾಸಕರ ಸ್ನೇಹಿತ ನರಸಿಂಹ, ಗ್ರಾ.ಪಂ ಅಧ್ಯಕ್ಷರಾದ ರಾಜಣ್ಣ, ವಕ್ಕಲೇರಿ ಮುರಳಿ, ಗ್ರಾ.ಪಂ ಪಿಡಿಒ ಶಾಲಿನಿ, ಮಾಜಿ ಉಪಾಧ್ಯಕ್ಷ ವೈ.ಮುನಿಯಪ್ಪ, ಮುಖಂಡರಾದ ಹೆಚ್.ನಾರಾಯಣಪ್ಪ, ಚಿಕ್ಕವೆಂಕಟಪ್ಪ, ಗುಟ್ಟಹಳ್ಳಿ ಶ್ರೀನಿವಾಸ್, ಗಜೇಂದ್ರ, ಹರ್ಷವರ್ಧನ್, ನರೇಂದ್ರ, ಬಿಆರ್‌ಸಿ ಪ್ರವೀಣ್, ಇಸಿಒಗಳಾದ ವೆಂಕಟಾಚಲಪತಿ, ಕೆ.ಶ್ರೀನಿವಾಸ್, ಸಿಆರ್‌ಪಿ ಸೌಮ್ಯಲತಾ, ಶಿಕ್ಷಕರಾದ ಸಿದ್ದೇಶ್ವರಿ, ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ರೇತಾ, ಸುಗುಣಾ, ಲೀಲಾ, ಫರೀದಾ, ಸಿ.ಎಲ್.ಶ್ರೀನಿವಾಸಲು, ಚಂದ್ರಶೇಖರ್ ಇದ್ದರು.