ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ: ಸಚಿವ ಮಧು ಬಂಗಾರಪ್ಪ

By Kannadaprabha News  |  First Published Jun 1, 2023, 8:43 PM IST

ಶಿಕ್ಷಣ ಕ್ಷೇತ್ರದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ, ಶಿಕ್ಷಕರ ನೇಮಕಾತಿ ಅಲ್ಲದೆ ಇತರ ಸಾಕಷ್ಟುಸವಾಲುಗಳಿದ್ದು ಹಂತಹಂತವಾಗಿ ಎಲ್ಲ ಸವಾಲುಗಳನ್ನು ಬಗೆಹರಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.


ದೇವನಹಳ್ಳಿ (ಜೂ.01): ಶಿಕ್ಷಣ ಕ್ಷೇತ್ರದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ, ಶಿಕ್ಷಕರ ನೇಮಕಾತಿ ಅಲ್ಲದೆ ಇತರ ಸಾಕಷ್ಟುಸವಾಲುಗಳಿದ್ದು ಹಂತಹಂತವಾಗಿ ಎಲ್ಲ ಸವಾಲುಗಳನ್ನು ಬಗೆಹರಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ತಾಲೂಕಿನ ಅರದೇಶಹಳ್ಳಿ, ಬಸವನಪುರ ಹಾಗೂ ಜಾಲಿಗೆ ಪ್ರೌಢಶಾಲೆಗಳ 2023 ನೇ ಸಾಲಿನ ಪ್ರಾರಂಭೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ವಿತರಣೆ ಮಾಡಿ ಮಾತನಾಡಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಈಗಾಗಲೇ ರಾಜ್ಯದ ಮತದಾರರಿಗೆ ಐದು ಗ್ಯಾರಂಟಿಗಳನ್ನು ನೀಡಲಾಗಿದ್ದು ಈಗಾಗಲೇ ಎರಡು ಗ್ಯಾರಂಟಿಗಳಿಗೆ ಒಪ್ಪಿಗೆ ನೀಡಲಾಗಿದೆ. ಉಳಿದ ಗ್ಯಾರಂಟಿಗಳ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು. ವಿದ್ಯಾಥಿಗಳಾದವರು ಚೆನ್ನಾಗಿ ಓದಿ ನಿಮ್ಮ ಶಾಲೆಗೆ ಮತ್ತು ನಿಮ್ಮ ಗ್ರಾಮಕ್ಕೆ ಅಲ್ಲದೆ ತಂದೆ ತಾಯಿಗಳಿಗೆ ಹೆಸರು ತರುವಂತಹವರಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತಮ್ಮದೇ ಆದ ಶಕ್ತಿ ಇದೆ ಯಾವತ್ತೂ ಕೂಡ ಅದನ್ನು ಕಳೆದುಕೊಳ್ಳಬೇಡಿ ಎಂದರು. ಪಠ್ಯ ಪರಿಷ್ಕರಣೆ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಹಾಕಿದ್ದೇವೆ. ಇದು ಹಾಕಿರುವುದು ಮತ ಪಡೆಯಕ್ಕಲ್ಲ. 

Tap to resize

Latest Videos

undefined

ಚುನಾವಣೆ ಸಂದರ್ಭದ ದ್ವೇಷಕ್ಕೆ ಮಾರಣಾಂತಿಕ ಹಲ್ಲೆ: ಶಾಸಕ ಬಾಲಕೃಷ್ಣ ಬೆಂಬಲಿಗರ ವಿರುದ್ಧ ಗೂಂಡಾಗಿರಿ ಆರೋಪ

ಬದಲಾಗಿ ರಾಜ್ಯದ ಮಕ್ಕಳ ಭವಿಷ್ಯಕ್ಕೋಸ್ಕರ ಅವರ ಮನಸು ಕಲ್ಮಶ ಆಗಬಾರದು ಎಂಬ ದೃಷ್ಟಿಯಿಂದ. ಗೃಹಲಕ್ಷ್ಮೇ ಯೋಜನೆಯಡಿ ಹಣ ನೀಡುವುದು ಅತ್ತೆಗೋ ಅಥವ ಸೊಸೆಗೋ ಎಂಬ ವಿಷಯವನ್ನು ಬಿಜೆಪಿಯವರು ಹುಟ್ಟು ಹಾಕಿದ್ದಾರೆ. ಅದಕ್ಕೆ ಅವರು 67ರಲ್ಲಿ ಕುಳಿತಿದ್ದಾರೆ. ಯಾರಿಗೆ ಸಲ್ಲಬೇಕು ಂಬ ವಿಷಯದ ಬಗ್ಗೆ ನೀತಿ ನಿಯಮ ಪಾಲನೆ ಇರುತ್ತದೆ. ಯಾರಿಗೆ ಸಲ್ಲಬೇಕು ಎನ್ನುವ ಬಗ್ಗೆ ಕಾನೂನಾತ್ಮಕವಾಗಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. ಸಮಾರಂಭದಲ್ಲಿ ಜಿ.ಪಂ ಮಾಜಿ ಸದಸ್ಯ ಕೆ.ಸಿ. ಮಂಜುನಾಥ್‌, ಜಾಲಿಗೆ ಶ್ರೀರಾಮಯ್ಯ, ಡಿಡಿಪಿಐ ಶ್ರೀಕಂಠ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪ್ರಸನ್ನಕುಮಾರ್‌ ಹಾಗೂ ದೇವನಹಳ್ಳಿ ಬಿಇಒ ಎಸ್‌.ಕೆ. ಸುಮ ಉಪಸ್ಥಿತರಿದ್ದರು.

ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಎರಡು ದಿನದಲ್ಲಿ ನಿರ್ಧಾರ?: ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ ಬದಲಾವಣೆ ಮಾಡಿರುವ ವಿಷಯಗಳನ್ನು ಮರು ಪರಿಷ್ಕರಿಸಲು ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ. ಸ್ವತಃ ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಈ ಮಾಹಿತಿ ನೀಡಿದ್ದು, ಈಗಾಗಲೇ ಪಠ್ಯಪುಸ್ತಕಗಳು ಮುದ್ರಣವಾಗಿ ಶಾಲೆಗಳಿಗೆ ತಲುಪುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಇನ್ನು ಎರಡು ದಿನಗಳಲ್ಲಿ ಪಠ್ಯ ಪರಿಷ್ಕರಣೆ ವಿಚಾರವಾಗಿ ಸ್ಪಷ್ಟಚಿತ್ರಣ ನೀಡುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆಯೂ ಒಂದು ಪ್ರಮುಖ ಅಂಶವಾಗಿದೆ. ಅದರಂತೆ ನಮ್ಮ ಸರ್ಕಾರ ಪಠ್ಯಪುಸ್ತಕಗಳ ಮರು ಪರಿಷ್ಕರಣೆ ಮಾಡಲಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ತಂದಿರುವ ಬದಲಾವಣೆಗಳನ್ನು ಮರುಪರಿಶೀಲಿಸಲು ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಶೀಘ್ರದಲ್ಲೇ ನನಗೊಂದು ಸಮಿತಿ ನೀಡುವುದಾಗಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ’ ಎಂದರು.

ಸೊರಬ ಕ್ಷೇತ್ರದಲ್ಲಿ ಸಚಿವ ಮಧು ಬಂಗಾರಪ್ಪಗೆ ಹೆಜ್ಜೆ ಹೆಜ್ಜೆಗೂ ಸವಾಲು!

‘ಆದರೆ, ಪಠ್ಯಪುಸ್ತಕಗಳ ಮರು ಪರಿಷ್ಕರಣೆಯಿಂದ ಮಕ್ಕಳಲ್ಲಿ ಗೊಂದಲ, ಅವರ ವಿದ್ಯಾಭ್ಯಾಸ ಮೇಲೆ ಯಾವುದೇ ಗೊಂದಲ ಉಂಟಾಗದಂತೆ ಎಚ್ಚರಿಕೆಯ ಕ್ರಮ ವಹಿಸಲಾಗುವುದು. ಶಾಲೆಗಳು ಪುನಾರಂಭಕ್ಕೆ ಸಿದ್ಧವಾಗಿರುವುದರಿಂದ ಮತ್ತು ಈಗಾಗಲೇ ಬಹುತೇಕ ಪುಸ್ತಕಗಳು ಮುದ್ರಣಗೊಂಡು ಶಾಲೆಗಳನ್ನು ತಲುಪಿರುವುದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಪರಿಷ್ಕರಣೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಯಾವುದೇ ಅಧ್ಯಾಯವನ್ನು ಬೋಧನೆಯಿಂದ ಕೈಬಿಡುವುದಾದರೆ ಶಿಕ್ಷಕರಿಗೆ ಪ್ರತ್ಯೇಕವಾಗಿ ಸೂಚನೆಗಳನ್ನು ನೀಡಲಾಗುವುದು. ಈ ಮರು ಪರಿಷ್ಕರಣೆಯ ಕಾರ್ಯ ಹೇಗೆ ಮಾಡುವುದು ಎಂಬ ಬಗ್ಗೆ ಜೂ.1ರ ಸಚಿವ ಸಂಪುಟ ಸಭೆಯ ಬಳಿಕ ಸ್ಪಷ್ಟಚಿತ್ರಣ ನೀಡುತ್ತೇವೆ’ ಎಂದು ಹೇಳಿದರು.

click me!