ನಮ್ಮನ್ನ ಬಳಸ್ಕೊಂಡು ಅಕ್ರಮವಾಗಿ ಹಣ ಗಳಿಸಿರೋ ಜನಾರ್ಧರೆಡ್ಡಿ, ನಮಗೇ ರಣಹೇಡಿಗಳು ಅಂತಾನೆ!

By Sathish Kumar KH  |  First Published Jun 1, 2023, 7:18 PM IST

ನಮ್ಮನ್ನು ಬಳಸಿಕೊಂಡು ಅಕ್ರಮವಾಗಿ ಹಣ ಗಳಿಸಿರುವ ಜನಾರ್ಧನರೆಡ್ಡಿ ಈಗ ನಮ್ಮನ್ನೇ ರಣಹೇಡಿಗಳು ಎಂದಿದ್ದು, ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ.


ಬಳ್ಳಾರಿ (ಜೂ.1): ಜನಾರ್ದನ ರೆಡ್ಡಿ ಮತ್ತವರ ಕೆಆರ್‌ಪಿಪಿ ಪಕ್ಷವೇ ನನ್ನ ಸೋಲಿಗೆ ಕಾರಣ. ನಮ್ಮನ್ನು ಬಳಸಿಕೊಂಡು ಅಕ್ರಮವಾಗಿ ಹಣವನ್ನು ಮಾಡಿಕೊಂಡಿರುವ ಜನಾರ್ಧನರೆಡ್ಡಿ ಈಗ ನಮ್ಮನ್ನೇ ರಣಹೇಡಿಗಳು ಎಂದು ಹೇಳಿದ್ದು, ಅವರಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಮಾಜಿ ಶಾಸಕ ಸೋಮಶೇಖರರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭಾ ಚುನಾವಣೆ ಬಳಿಕ ಬಳ್ಳಾರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಮತ್ತವರ ಕೆಆರ್‌ಪಿಪಿ ಪಕ್ಷವೇ ನನ್ನ ಸೋಲಿಗೆ ಕಾರಣ. ನನ್ನ ಸೋಲಿಸಲೆಂದೇ ಅವರು ಸ್ಪರ್ಧೆ ಮಾಡಿದರು. ಜನಾರ್ದನ ರೆಡ್ಡಿ ತನ್ನ ಬುದ್ಧಿಯನ್ನು ತೋರಿಸಿಬಿಟ್ಟನು. ಈ ಹಿಂದೆ ಜನಾರ್ದನರೆಡ್ಡಿ ಎಲ್ಲರನ್ನೂ ಖರೀದಿ ಮಾಡಿ ಕರುಣಾಕರರೆಡ್ಡಿಯನ್ನು ಗೆಲ್ಲಿಸಿದ್ದರು. ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಇರುವವರನ್ನು ಖರೀದಿ ಮಾಡಿ ಕೆಆಆರ್‌ಪಿಪಿ ಪರವಾಗಿ ಕೆಲಸ ಮಾಡಿಸಿದರು. ಈಗ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದರು.

Tap to resize

Latest Videos

undefined

ಆಪರೇಷನ್‌ ಮಾಡಬೇಕಾದ ವೈದ್ಯ ಫುಲ್‌ ಟೈಟ್‌: ಅಮಾನತಿಗೆ ಆದೇಶಿಸಿದ ಆರೋಗ್ಯ ಸಚಿವರು

ಇನ್ನು ಗಂಗಾವತಿಯಿಂದ ಗೆದ್ದಿರುವ ಜನಾರ್ದನರೆಡ್ಡಿ ನಮ್ಮನ್ನು ರಣಹೇಡಿ ಎಂದು ಹೇಳಿದ್ದಾರೆ. "ನಾನು ಬೆಳಸಿದ ಹೇಡಿಗಳು ಈಗ ಮನೆಯಲ್ಲಿದ್ದಾರೆ, ನಾನು ಸದನಕ್ಕೆ ಬಂದಿದ್ದೇನಿ" ಎಂದು ಜನಾರ್ದನರೆಡ್ಡಿ ಹೇಳಿಕೆ ನೀಡುವ ಮೂಲಕ ನಮ್ಮನ್ನು ಕೆಣಕುತ್ತಿದ್ದಾರೆ. ನನಗೆ (ಸೋಮಶೇಖರ್ ರೆಡ್ಡಿ) ಶ್ರೀರಾಮುಲು. ಸೋಮಲಿಂಗಪ್ಪ. ಸುರೇಶಬಾಬು ಹಾಗೂ ಕರುಣಾಕರರೆಡ್ಡಿಗೆ ರಣಹೇಡಿ ಅಂತಾ ಕರೆದಿದ್ದಾರೆ. ಆದರೆ, ನಿಜವಾದ ರಣಹೇಡಿ ಜನಾರ್ದನರೆಡ್ಡಿ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೋಲಿನ ಬಗ್ಗೆ ಭಾವನಾತ್ಮಕವಾಗಿ ಹಾಗೂ ತಮ್ಮ ಸಹೋದರನ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮನ್ನ ಬಳಸಿಕೊಂಡು ಅಕ್ರಮವಾಗಿ ಹಣ ಗಳಿಕೆ: ಜನಾರ್ಧನರೆಡ್ಡಿ ನಮ್ಮನ್ನ ಬಳಸಿಕೊಂಡು ಅವನ ಬೇಳೆ ಬೇಯಿಸಿಕೊಂಡನು. ನಮ್ಮನ್ನ ಬಳಸಿಕೊಂಡು ಜನಾರ್ದನರೆಡ್ಡಿ ಅಕ್ರಮವಾಗಿ ಹಣ ಗಳಿಸಿದ್ದಾನೆ. ಜನಾರ್ದನರೆಡ್ಡಿಗೆ ಚಿಕ್ಕದಿನಿಂದ ಒಂದು ಗುಣ ಇದೆ. ಅದು ಯಾರೇ ಆಗಲಿ, ಅವನ ಕೆಳಗೆ ಇರಬೇಕು. ಅವನು ಹೇಳಿದ್ದು ಕೇಳಲಿಲ್ಲವೆಂದರೆ ಅವನು ಎಲ್ಲರನ್ನೂ ಡೆಮಾಲಿಷ್ ಮಾಡ್ತಾನೆ. ನಾವೆಲ್ಲಾ ಒಂದಾಗಿದ್ದೇವೆ. ನಾವೂ ಜನಾರ್ದನರೆಡ್ಡಿಯನ್ನು ಎದುರಿಸುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಬಲ ತೋರಿಸುತ್ತೇವೆ ಎಂದು ಸವಾಲು ಹಾಕಿದರು. ಈ ಮೂಲಕ ವಿಧಾನಸಭಾ ಚುನಾವಣೆ ಬಳಿಕ ರೆಡ್ಡಿ ಸಹೋದರರ ಅಂತರಿಕ ಕಚ್ಚಾಟ ಬೀದಿಗೆ ಬಂದಿದೆ. 

ಎಂ.ಬಿ. ಪಾಟೀಲ್‌, ಪ್ರಿಯಾಂಕ ಖರ್ಗೆಗೆ ಡಬಲ್‌ ಖಾತೆಗಳು: ಸಿಎಂ ಆಪ್ತರಿಗೆ ಭರ್ಜರಿ ಆಫರ್

ಬಿಜೆಪಿ ಅಧಿಕಾರಕ್ಕೆ ಬರಲು ರೆಡ್ಡಿ ಬ್ರದರ್ಸ್ ಕೊಡುಗೆ ಅಪಾರ: ರಾಜ್ಯ ರಾಜಕಾರಣದಲ್ಲಿ ಕಳೆದ 20 ವರ್ಷಗಳಿಂದೀಚೆಗೆ ಬಳ್ಳಾರಿಯಲ್ಲಿ ಹಣದ ಹೊಳೆಯನ್ನೇ ಹರಿಸಿದ ಗಣಿಧಣಿಗಳಾದ ರೆಡ್ಡಿ ಬ್ರದರ್ಸ್‌ಗಳಲ್ಲಿಯೇ ಈಗ ಜಗಳ ಆರಂಭವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿದ ಕೀರ್ತಿಯಲ್ಲಿ ರೆಡ್ಡಿ ಬ್ರದರ್ಸ್‌ ಪಾತ್ರವೂ ಮುಖ್ಯವಾಗಿದೆ. ಇದಾದ ನಂತರ ಗಣಿಗಾರಿಕೆಯ ಮೇಲೆ ಸಿಬಿಐ ದಾಳಿ ನಡೆಸಿದ್ದು, ಅಕ್ರಮ ಹಣ ಗಳಿಕೆ ಆರೋಪದಲ್ಲಿ ಜನಾರ್ಧನರೆಡ್ಡಿ ಕೂಡ ಜೈಲು ಸೇರಿದರು. ಈಗ ಅದೆಲ್ಲವೂ ಇತಿಹಾಸವಾದರೂ, ಜೈಲು ವಾಸ ಅನುಭವಿಸಿದ ಹಾಗೂ ಸ್ವಂತ ಊರನ್ನೂ ನೋಡಲಾಗದ ಸ್ಥಿತಿಯಲ್ಲಿರುವ ಜನಾರ್ಧನರೆಡ್ಡಿ ಪುನಃ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಆದರೆ, ಈಗ ತಮ್ಮ ಬೆಳವಣಿಗೆಗೆ ಕಾರಣವಾದ ರೆಡ್ಡಿ ಬ್ರದರ್ಸ್‌ಗಳ ಸೋಲಿಗೆ ಜನಾರ್ಧನರೆಡ್ಡಿ ಕಟ್ಟಿದ ಪಕ್ಷವೇ ಕಾರಣವಾಗಿದ್ದು, ಈಗ ತಮ್ಮ ತಮ್ಮಲ್ಲಿಯೇ ಕಚ್ಚಾಟ ಆರಂಭವಾಗಿದೆ.

click me!