Latest Videos

ಕಾಂಗ್ರೆಸ್ ನಾಯಕರ ಜಾತಿವಾದಿತನ ಬಜಾರದಲ್ಲಿ ಬೆತ್ತಲಾಗಿದೆ; ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

By Sathish Kumar KHFirst Published Jul 1, 2024, 1:32 PM IST
Highlights

ರಾಜ್ಯದಲ್ಲಿ ಸಮುದಾಯಕ್ಕೊಂದು ಡಿಸಿಎಂ ಸ್ಥಾನ ಕೊಡಬೇಕೆಂದು ಆಗ್ರಹಿಸುವ ಮೂಲಕ ಕಾಂಗ್ರೆಸ್ ನಾಯಕರ ಜಾತಿವಾದಿತನ ಬಹಿರಂಗವಾಗಿ ಬೆತ್ತಲಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರು (ಜು.01): ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಎಷ್ಟರಮಟ್ಟಿಗೆ ಜಾತಿವಾದಿಗಳು ಎಂಬುವುದು ಬಹಿರಂಗವಾಗಿ ಬೆತ್ತಲೆಯಾಗಿದ್ದಾರೆ. ಮಠಾಧಿಪತಿಗಳಿಗೆ ದೇವರ ಸ್ಥಾನ ಕೊಟ್ಟಿದ್ದೇವೆ. ಆದರೆ, ಕಾಂಗ್ರೆಸ್ಸಿಗರು ದೇವರ ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳುವ ಕೆಲಸವನ್ನು  ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಎಷ್ಟರಮಟ್ಟಿಗೆ ಜಾತಿವಾದಿಗಳು ಎಂಬುವುದು ಬಹಿರಂಗವಾಗಿ ಬೆತ್ತಲೆಯಾಗಿದ್ದಾರೆ. ಮಠಾಧಿಪತಿಗಳಿಗೆ ದೇವರ ಸ್ಥಾನ ಕೊಟ್ಟಿದ್ದೇವೆ. ಆದರೆ, ಕಾಂಗ್ರೆಸ್ಸಿಗರು ದೇವರ ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳುವ ಕೆಲಸವನ್ನು  ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಬಿಜೆಪಿ ಸೇರಿದಂತೆ ಯಾವ ಪಕ್ಷ ಇದರಲ್ಲಿ ತಲೆ ಹಾಕಲು ಬರುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಏನು ಬೇಕಾದರೂ ಮಾಡಿಕೊಳ್ಳಿ. ಸಂವಿಧಾನದಲ್ಲಿ ಒಂದೇ ಸಿಎಂ ಸ್ಥಾನಕ್ಕೆ ಅವಕಾಶವಿದೆ. ಮುಖ್ಯಮಂತ್ರಿ ಸ್ಥಾನದ ನಂತರ ಎಷ್ಟು ಉಪ ಮುಖ್ಯಮಂತ್ರಿ  ಬೇಕಾದರೂ ಮಾಡಿಕೊಳ್ಳಿ. ಇಂತಹ ಕೆಟ್ಟ ಸರ್ಕಾರ ಸ್ವಾತಂತ್ರ್ಯ ನಂತರ ಬಂದಿಲ್ಲ. ನಿಮ್ಮ ಪಕ್ಷದ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.

ನಾನು ಚಿಕ್ಕವನಿದ್ದಾಗ ನೋಡಿದಷ್ಟು ಹಣವನ್ನು ದರ್ಶನ್ ಈವರೆಗೂ ನೋಡಿರಲಿಕ್ಕಿಲ್ಲ; ಉಮಾಪತಿ ಶ್ರೀನಿವಾಸ್‌ಗೌಡ

ಲೋಕಸಭಾ ಚುನಾವಣೆ ಬಳಿಕ ಮತ್ತೆ ಪಕ್ಷಕ್ಕೆ ಆಹ್ವಾನ ಬಂದಿದೆ: ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಕರೆದಿದ್ದಾರೆ. ಆದರೆ, ಈ ಬಗ್ಗೆ ನಾನಿನ್ನು ತೀರ್ಮಾನ ಕೈಗೊಂಡಿಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಷ್ಟ್ರಭಕ್ತ ಬಳಗದ ಮಹಾಲಿಂಗ ಶಾಸ್ತ್ರಿಗಳು ಗೆಲುವು ಸಾಧಿಸಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆ ಸೇರಿದಂತೆ ಆಯಾ ಚುನಾವಣೆ ಬಂದಾಗ ರಾಷ್ಟ್ರ ಭಕ್ತರ ಬಳಗ ತೀರ್ಮಾನ ಕೈಗೊಳ್ಳಲಿದೆ. ಪಕ್ಷ ಪ್ಲಸ್ ಕಾರ್ಯಕರ್ತ ಇಸ್ ಈಕ್ವಲ್ ಟು ಹೀರೋ. ಪಕ್ಷ ಮೈನಸ್ ಕಾರ್ಯಕರ್ತ ಇಸ್ ಈಕ್ವಲ್ ಟು ಜೀರೋ. ಆಯಾ ಚುನಾವಣೆ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. 

ಶಿವಮೊಗ್ಗದ ಗೋಪಿ ಶೆಟ್ಟಿ ಕೊಪ್ಪ ಮತ್ತು ಗೋವಿಂದಪುರಗಳಲ್ಲಿ ಆಶ್ರಯ ಮನೆ ಕಟ್ಟುವ ಕಾಮಗಾರಿ ನೆನಗುದಿಗೆ ಬಿದ್ದಿದೆ. ಕೇವಲ ಮೂರು ವರ್ಷಗಳಲ್ಲಿ ಮನೆ ಕಟ್ಟಿಕೊಡುವುದಾಗಿ ಹೇಳಲಾಗಿತ್ತು. ಎಂಟು ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಗೋವಿಂದಪುರದಲ್ಲಿ 3,000 ಮನೆಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು. ಗೋಪಿ ಶೆಟ್ಟಿಕೊಪ್ಪದಲ್ಲಿ ಕೇವಲ ಮುದ್ದಲಿ ಪೂಜೆ ಮಾತ್ರ ನಡೆದಿದೆ. ಮಹಾನಗರ ಪಾಲಿಕೆಯಿಂದ ಬೀದಿ ದೀಪ, ಕಾಂಕ್ರೆಟ್ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. 288 ಮನೆಗಳನ್ನು ಮಾತ್ರ ಲಾಟರಿ ಮೂಲಕ ಹಂಚಿಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಗೇಶ್ವರ್, ನಿಖಿಲ್‌ ಚನ್ನಪಟ್ಟಣ ಅಭ್ಯರ್ಥಿ ಯಾರು..? ಜನಸ್ಪಂದನ ಹೆಸರಲ್ಲಿ ಡಿಕೆ ಬ್ಯಾಕ್‌ ಟು ಬ್ಯಾಕ್‌ ವಿಸಿಟ್‌

ವಸತಿ ಸಚಿವ ಜಮೀರ್ ಅಹ್ಮದ್ ಆದಷ್ಟು ಬೇಗ ಮನೆ ನಿರ್ಮಾಣ ಪೂರ್ಣಗೊಳಿಸುವ ಆಶ್ವಾಸನೆ ನೀಡಿದ್ದರು. ವಸತಿಗಳ ನಿರ್ಮಾಣಕ್ಕೆ ಫಲಾನುಭವಿಗಳು ತಮ್ಮ ಪಾಲಾದ 80000 ಗಳನ್ನು ಒಡವೆಗಳನ್ನು ಅಡವಿಟ್ಟು ನೀಡಿದ್ದಾಗಿ ಹೇಳುತ್ತಿದ್ದಾರೆ. ಬಸ್ಸಿನ ವ್ಯವಸ್ಥೆ ಇಲ್ಲ ಮೂಲಭೂತ ಸೌಕರ್ಯಗಳ ಕೊರತೆ ಇದೆ ಹಾಗಾಗಿ ಮನೆಗಳನ್ನು ಪಡೆದರು ಕೂಡ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಸತಿ ಸಚಿವ ಜಮೀರ್ ಅಹ್ಮದ್ ಜುಲೈ 15 ರೊಳಗೆ ವಿಶೇಷ ಸಭೆ ಕರೆದು ಮನೆ ಕಾಮಗಾರಿ ಪೂರ್ಣಗೊಳಿಸಬೇಕು. ಶಿವಮೊಗ್ಗ ಮಹಾನಗರ ಪಾಲಿಕೆಗೆ ಆದಷ್ಟು ಬೇಗ ರಾಜ್ಯ ಸರ್ಕಾರ ಚುನಾವಣೆ ನಡೆಸಬೇಕು. ಜುಲೈ 15ರೊಳಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಳೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದೆ ಆಡಳಿತ ನಡೆಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಹೇಳಿದರು.

click me!