
ಕಲಬುರಗಿ (ಜು.1): ಸಿಎಂ ಬದಲಾವಣೆ, ಮೂರು ಜನ ಡಿಸಿಎಂ ಮಾಡುವ ಅವಶ್ಯಕತೆ ಇಲ್ಲ. ಮಾಡುವುದಿದ್ರೆ ಅದನ್ನ ನಮ್ಮ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಸಿಎಂ ಬದಲಾವಣೆ ವಿಚಾರವಾಗಿ ಸ್ವಾಮೀಜಿ ಹೇಳಿಕೆ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸ್ವಾಮೀಜಿ ಹೇಳಿಕೆ ಅದು ಅವರ ವಯಕ್ತಿಕ ವಿಚಾರ. ನಾನೂ ಕೂಡ ಆ ವೇದಿಕೆಯಲ್ಲಿದ್ದೆ. ಸ್ವಾಮೀಜಿ ಮಾತಿಗೆ ಅಷ್ಟು ಮಹತ್ವ ಕೊಡುವ ಅವಶ್ಯತೆ ಇಲ್ಲ. ಆದರೆ ಅದು ಮಾಧ್ಯಮಗಳಲ್ಲಿ ದೊಡ್ಡದಾಗಿ ಚರ್ಚೆ ಆಗ್ತಿದೆ ಅಷ್ಟೇ. ನಾನು ವೈಯಕ್ತಿಕವಾಗಿ ಹೇಳೋದೇನೆಂದರೆ ಇದು ಚರ್ಚೆ ಮಾಡುವ ಅವಶ್ಯಕತೆಯೇ ಇಲ್ಲ ಎಂದರು.
ಸಿಎಂ ಬದಲಾವಣೆ ಮಾಡೋದಾದ್ರೆ ಬಿಕೆ ಹರಿಪ್ರಸಾದ್ ಅವರನ್ನೇ ಮುಖ್ಯಮಂತ್ರಿ ಮಾಡಿ: ಪ್ರಣವಾನಂದಶ್ರೀ ಆಗ್ರಹ
ಇನ್ನು ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅವರು ಏನು ಮಾತಾಡ್ತಾರೆ ಅಂತಾ ಅವರಿಗೇ ಗೊತ್ತಾಗೋದಿಲ್ಲ. 136 ಜನ ಗೆಲ್ಲಿಸುವ ಮೂಲಕ ರಾಜ್ಯದ ಜನರು ನಮಗೆ ಬಹುಮತ ಕೊಟ್ಟಿದ್ದಾರೆ. ಸಿಟಿ ರವಿ ಅವರು ಹೈಕಮಾಂಡ್ ಮೆಚ್ಚಿಸಲು ತಿಳಿದಂಗ ಮಾತಾಡ್ತಿರಬೇಕು ಎಂದರು.
ಗ್ಯಾರೆಂಟಿ ಯೋಜನೆಗಳಿಂದ ಜನರು ಸೋಮಾರಿ ಆಗ್ತಿದ್ದಾರೆಂಬ ರಂಭಾಪುರಿ ಜಗದ್ಗುರು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲ ಆಗಿದೆ. ಬಡವರ ಯೋಜನೆ ಬಗ್ಗೆ ಯಾರೂ ಕೂಡ ಅಪಸ್ವರ ಎತ್ತಬಾರದು. ಬಡವರ ಯೋಜನೆ ಚುನಾವಣೆಗಾಗಿ ಜಾರಿ ಮಾಡಿದ್ದಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಬಂದ್ ಆಗೊಲ್ಲ ಅಂತಾ ಸಿಎಂ ಅವರೇ ಸ್ಪಷ್ಟಪಡಿಸಿದ್ದಾರೆ. ಯಾರು ಏನೇ ಅಪಸ್ವರ ಎತ್ತಿದರೂ ಬಡವರಿಗಾಗಿ ಗ್ಯಾರಂಟಿ ಯೋಜನೆ ಮುಂದುವರಿಸುತ್ತೇವೆ ಎಂದರು.
ಸಿಎಂ-ಡಿಸಿಎಂ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇದ್ದಂತೆ: ವಚನಾನಂದ ಶ್ರೀ
ಇನ್ನು ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕರವೇ ಕಾರ್ಯಕರ್ತರಿಂದ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ವಿಚಾರವಾಗಿ ಅವರು ಹೋರಾಟ ಮಾಡುತ್ತಿದ್ದಾರೆ. ನನ್ನ ಜೊತೆಯೂ ಸಹ ಮಾತಾಡ್ತಿದ್ದಾರೆ. ಕರವೇ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸರೋಜಿನಿ ಮಹಿಷಿ ವರದಿ ಜಾರಿ ಮಾಡೋದಕ್ಕೆ ಒಂದು ಕಮಿಟಿ ಕೂಡ ಮಾಡಲಾಗಿದೆ. ಅದನ್ನ ಆದಷ್ಟು ಬೇಗ ಪೂರ್ಣಗೊಳಿಸಿ ಅನುಷ್ಠಾನ ಮಾಡಲಾಗುವುದು. ನಮಗೆ ಕನ್ನಡಿಗರು ಬೇಕು, ಅದರ ಜೊತೆಗೆ ಬೇರೆಯವರೂ ಸಹ ಬೇಕಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.