ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಯಾವುದೇ ಲಾಬಿ ನಡೆಸಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಯಾವುದೇ ರೀತಿಯ ಲಾಬಿ ನಡೆಸಿಲ್ಲ ಮತ್ತು ನಡೆಸುವುದೂ ಇಲ್ಲ.
ಬೀದರ್ (ಜೂ.30): ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಯಾವುದೇ ಲಾಬಿ ನಡೆಸಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಯಾವುದೇ ರೀತಿಯ ಲಾಬಿ ನಡೆಸಿಲ್ಲ ಮತ್ತು ನಡೆಸುವುದೂ ಇಲ್ಲ. ರಾಜ್ಯದಲ್ಲೀಗ ಮುಖ್ಯಮಂತ್ರಿ ಬದಲಾವಣೆ ವಿಚಾರ ಈಗ ಅಪ್ರಸ್ತುತ. ಅದೇನಿದ್ದರೂ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಬೇಕೆಂಬ ಆಗ್ರಹ ಲಿಂಗಾಯತ ಮಠಾಧೀಶರಿಂದ ನಡೆದಿರುವ ಬೆನ್ನಲ್ಲೇ ಅಧ್ಯಕ್ಷ ಗದ್ದುಗೆ ಖಾಲಿಯಾದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯನ್ನು ಎರಡು ಬಾರಿ ಸಮರ್ಥವಾಗಿ ವಹಿಸಿಕೊಂಡಿರುವ ಖಂಡ್ರೆ ಅವರನ್ನು ಪರಿಗಣಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರ ಬಳಿ ಈಗಾಗಲೇ ಮನವಿ ಹೋಗಿದೆ ಎನ್ನಲಾಗಿದೆ.
ಒಬ್ಬರ ಮತದಿಂದ ರಾಜಕೀಯ ನಡೆಯೋಲ್ಲ: ಜಿಲ್ಲೆಯ ಶ್ರೀಸಾಮಾನ್ಯ ಹೇಳುವ ಕೆಲಸವನ್ನು ತಲೆಬಾಗಿಸಿ ಮಾಡ್ತೇವೆ. ಒಬ್ಬರ ಮತದಿಂದ ರಾಜಕೀಯ ನಡೆಯೋಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ನೂತನ ಸಂಸದ ಸಾಗರ ಖಂಡ್ರೆ ಅವರ ತಂದೆಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
200 ಕೋಟಿ ವೆಚ್ಚದಲ್ಲಿ ಕೆ.ಸಿ.ಜನರಲ್ ಆಸ್ಪತ್ರೆ ಅಭಿವೃದ್ಧಿ: ಸಚಿವ ದಿನೇಶ್ ಗುಂಡೂರಾವ್
ಮುಸ್ಲಿಂ ಮತಗಳಿಂದಲೇ ಸಾಗರ ಖಂಡ್ರೆಗೆ ಜಯ, ಅರಣ್ಯ ಸಚಿವ ಈಶ್ವರ ಖಂಡ್ರೆ ತಲೆತಗ್ಗಿಸಿ ಕೆಲಸ ಮಾಡಬೇಕಾಗುತ್ತೆ ಎಂದೆಲ್ಲ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಜಮೀರ್ ಹೇಳಿಕೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಹೇಳಿಕೆ ವೈಯಕ್ತಿಕ, ನಮ್ಮದಾಗಲಿ ಪಕ್ಷದ್ದಾಗಲಿ ಅಲ್ಲ. ಸಾಗರ್ ಖಂಡ್ರೆ, ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಜಾತಿ ಸಮುದಾಯದ ಜನ, ವಿಶೇಷವಾಗಿ ಬಡವರು, ರೈತರು, ಕಾರ್ಮಿಕರ, ಶೋಷಿತ ವರ್ಗದ ಎಲ್ಲರೂ ಮತ ನೀಡಿದ್ದಾರೆ. ಎಲ್ಲರ ಅಭಿವೃದ್ಧಿಗಾಗಿ ಕೆಲಸ ಮಾಡ್ತಾರೆ. ಇದು ನನ್ನದಷ್ಟೇ ಅಲ್ಲ ಪಕ್ಷದ್ದೂ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದ್ದಾರೆ.