ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಕಂಗನಾ, ಚಿರಾಗ್ ಪಾಸ್ವಾನ್: ಹಗ್ ಮಾಡಿ ಬಾಲಿವುಡ್ ಕ್ವೀನ್‌ಗೆ ಸ್ವಾಗತ: ವೀಡಿಯೋ

By Anusha Kb  |  First Published Jun 7, 2024, 5:04 PM IST

ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆಯಾದ ಕಂಗನಾರನ್ನು ಸಂಸದ ಚಿರಾಗ್ ಪಾಸ್ವಾನ್ ಅವರು ಹಗ್ ಮಾಡಿ ಸ್ವಾಗತಿಸಿದ್ದು, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದ ಸಿನಿಮಾಗಳ ತುಣುಕು ಮೀಮ್ಸ್‌ನಂತೆ ವೈರಲ್ ಆಗುತ್ತಿದೆ. 


ನವದೆಹಲಿ: ಎನ್‌ಡಿಎ ಮೈತ್ರಿಕೂಟದ ನಿಷ್ಠಾವಂತ, ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಹಾಗೂ ಚೊಚ್ಚಲ ಬಾರಿ ಬಿಜೆಪಿಯಿಂದ ಸಂಸತ್‌ಗೆ ಆಯ್ಕೆಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು 13 ವರ್ಷಗಳ ಹಿಂದೆ ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು ಎಂಬ ವಿಚಾರ ನಿಮಗೆ ಗೊತ್ತಾ? ಹೌದು 13 ವರ್ಷಗಳ ಹಿಂದೆ ಅಂದರೆ  2011ರಲ್ಲಿ ತೆರೆ ಕಂಡ ಬಾಲಿವುಡ್ ಸಿನಿಮಾ 'ಮಿಲೇ ನಾ ಮಿಲೇ' ಸಿನಿಮಾದಲ್ಲಿ ಇವರು ಜೊತೆಯಾಗಿ ನಟಿಸಿದ್ದರು. ಆದರೆ ದುರಾದರಷ್ಟವಶಾತ್ ಈ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಹಿಟ್ ಆಗುವುದರಲ್ಲಿ ಸೋತಿತ್ತು. 

ಈಗ ಈ ಇಬ್ಬರು ಕೇಂದ್ರದಲ್ಲಿ ಸರ್ಕಾರ ರಚಿಸುತ್ತಿರುವ ಎನ್‌ಡಿಎ ಮೈತ್ರಿಕೂಟದ ಭಾಗವಾಗುತ್ತಿದ್ದಾರೆ. ಇಂದು ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ನಡೆದ  ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಈ ಇಬ್ಬರೂ ಭಾಗಿಯಾಗಿದ್ದಾರೆ. ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆಯಾದ ಕಂಗನಾರನ್ನು ಸಂಸದ ಚಿರಾಗ್ ಪಸ್ವಾನ್ ಅವರು ಹಗ್ ಮಾಡಿ ಸ್ವಾಗತಿಸಿದ್ದು, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದ ಸಿನಿಮಾಗಳ ತುಣುಕು ಮೀಮ್ಸ್‌ನಂತೆ ವೈರಲ್ ಆಗುತ್ತಿದೆ. 

Tap to resize

Latest Videos

undefined

ಏರ್‌ಪೋರ್ಟ್‌ನಲ್ಲಿ ಬಿಜೆಪಿ ನೂತನ ಸಂಸದೆ ನಟಿ ಕಂಗನಾ ಕೆನ್ನೆಗೆ ಬಾರಿಸಿದ ಸಿಐಎಸ್ಎಫ್ ಕಾನ್ಸ್‌ಟೇಬಲ್ ಅರೆಸ್ಟ್‌

ಕಂಗನಾ ಹಿಮಾಚಲದ ಪ್ರದೇಶ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಭರ್ಜರಿ ಮತಗಳ ಅಂತರದಿಂದ ಗೆದ್ದು ಬಂದಿದ್ದಾರೆ. ಇತ್ತ ಚಿರಾಗ್ ಪಾಸ್ವಾನ್ ಅವರು ಬಿಹಾರದ ಹಾಜಿಪುರ ಕ್ಷೇತ್ರದಲ್ಲಿ ತಮ್ಮ ಎಲ್‌ಜೆಪಿ ಪಕ್ಷದಿಂದ ಸ್ಪರ್ಧಿಸಿ. 1.70 ಲಕ್ಷ ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ. ದಿವಂಗತ ರಾಜಕಾರಣಿ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರನಾಗಿರುವ ಚಿರಾಗ್ ಪಾಸ್ವಾನ್ ಅವರು ಎನ್‌ಡಿಎ ಮೈತ್ರಿಕೂಟದ ನಿಷ್ಠಾವಂತ ಬೆಂಬಲಿಗರಾಗಿದ್ದಾರೆ.

 ಜೂ. 8ಕ್ಕೆ ಮೋದಿ ಪ್ರಮಾಣವಚನ ? ಎನ್‌ಡಿಎಗೆ ನಮ್ಮ ಬೆಂಬಲ ಎಂದ ಚಿರಾಗ್ ಪಾಸ್ವಾನ್

ಇತ್ತ ಪಿಟಿಐ ಎಎನ್‌ಐ ಸುದ್ದಿಸಂಸ್ಥೆಗಳ ವೀಡಿಯೋಗಳು ಇವರಿಬ್ಬರು ಪರಸ್ಪರ ಹಗ್ ಮಾಡಿ ಸ್ವಾಗತಿಸಿರುವ ವೀಡಿಯೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋ ನೋಡಿದ ಜನ ಇವರಿಬ್ಬರು ಜೊತೆಗಿದ್ದರೆ ಚೆನ್ನಾಗಿರುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಅಂದಹಾಗ ಇಬ್ಬರೂ ಅವಿವಾಹಿತರಾಗಿದ್ದಾರೆ. ಇಬ್ಬರ ಕೆಮೆಸ್ಟ್ರಿ ಚೆನ್ನಾಗಿ ಮ್ಯಾಚ್ ಆಗ್ತಿದೆ.  ಕಂಗನಾ ರಣಾವತ್ ಹಾಗೂ ಚಿರಾಗ್‌ ಪಾಸ್ವಾನ್ ಇಬ್ಬರು ಜೊತೆಯಾಗಿ ರಾಗ್ನಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಕಂಗನಾ ಅವರನ್ನು ಅಭಿನಂದಿಸಿದ ಚಿರಾಗ್ ಪಾಸ್ವಾನ್ ಅವರು ಆಕೆಯ ಅಭಿಪ್ರಾಯಗಳನ್ನು ತಿಳಿಯಲು ಎದುರು ನೋಡುತ್ತಿರುವುದಾಗಿ ಹೇಳಿದರು. 
ನಾವು ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದೇವೆ, ಒಂದೇ ಚಿತ್ರದಲ್ಲಿ ಕೆಲಸ ಮಾಡಿದ್ದೇವೆ. ನಾವು ಸಂಸತ್ತಿನಲ್ಲಿ ಭೇಟಿಯಾಗಲಿದ್ದೇವೆ. ಅವರು ಶಕ್ತಿಶಾಲಿ ಮಹಿಳೆ ಎಂದು ನಾನು ಭಾವಿಸುತ್ತೇನೆ. ಅವರು ತುಂಬಾ ಸ್ಪಷ್ಟವಾಗಿ ಧ್ವನಿಹೊಂದಿದ್ದಾರೆ ಎಂದು ಚಿರಾಗ್ ಅವರು ಹೇಳಿದರು.

ಪಂಜಾಬ್​ ಉಗ್ರವಾದವನ್ನು ಪ್ರಶ್ನಿಸುತ್ತಲೇ ಕೆನ್ನೆಗೆ ಹೊಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ಕಂಗನಾ

ಇನ್ನು ಎನ್‌ಡಿಎ ಮೈತ್ರಿಕೂಟಕ್ಕೆ ತಮ್ಮ ಪಕ್ಷದ ಬೆಂಬಲಕ್ಕೆ ಪ್ರತಿಯಾಗಿ ನೀವೇನಾದರು ಬೇಡಿಕೆ ಇರಿಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಿರಾಗ್, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡುವುದೇ ನಮ್ಮ ಗುರಿ, ನಾವು ಯಾವುದೇ ಷರತ್ತಿಲ್ಲದೇ ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದೇವೆ ಎಂದು ಹೇಳಿದ್ದರು.  ಅಂದಹಾಗೆ ಚಿರಾಗ್ ಹಾಜಿಪುರ ಕ್ಷೇತ್ರದಲ್ಲಿ 6,15,718 ಮತ ಗಳಿಸಿದ್ದರೆ, ಇತ್ತ ಮಂಡಿ ಕ್ಷೇತ್ರದಲ್ಲಿ ಕಂಗನಾ 5,37,022 ಮತ ಗಳಿಸಿದ್ದಾರೆ.  ಹಲವು ವರ್ಷಗಳ ಬಳಿಕ ಇವರಿಬ್ಬರು ಎನ್‌ಡಿಎ ಎಂಬ ಒಂದೇ ಕೊಡೆಯ ಕೆಳಗೆ ಜೊತೆಯಾಗಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ, ಇಬ್ಬರು ನಟಿಸಿದ ಸಿನಿಮಾ ತುಣುಕುಗಳು ಈಗ ಮೀಮ್ಸ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹೊರಬರುತ್ತಿದ್ದು, ತಮಾಷೆಯಾಗಿದೆ. ಜೊತೆಯಾಗಿ ಆ ಸಿನಿಮಾದಲ್ಲಿರುವಂತೆ ಇವರಿಬ್ಬರ ಮಧ್ಯೆ ಪ್ರೀತಿಯಾಗಬಹುದಾ ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.

Indian twitter rooting for RagGana. 😂

Chirag Paswan l Kangana Ranaut pic.twitter.com/eXZuEpxohN

— The Poll Lady (@ThePollLady)

 

click me!