ಕಂಗನಾ ಕೆನ್ನೆಗೆ ಹೊಡೆದಾಕೆಗೆ ಗಾಯಕ ವಿಶಾಲ್​ ಬಂಪರ್​ ಆಫರ್​: ಅಭಿಮಾನಿಗಳಿಂದ ವ್ಯಾಪಕ ಟೀಕೆ

Published : Jun 07, 2024, 04:18 PM IST
ಕಂಗನಾ ಕೆನ್ನೆಗೆ ಹೊಡೆದಾಕೆಗೆ ಗಾಯಕ ವಿಶಾಲ್​ ಬಂಪರ್​ ಆಫರ್​: ಅಭಿಮಾನಿಗಳಿಂದ ವ್ಯಾಪಕ ಟೀಕೆ

ಸಾರಾಂಶ

ಕಂಗನಾ ಕೆನ್ನೆಗೆ ಹೊಡೆದಾಕೆಗೆ ಗಾಯಕ ವಿಶಾಲ್​ ಬಂಪರ್​ ಆಫರ್​ ಕೊಟ್ಟಿದ್ದಾರೆ. ಅವರು ಹೇಳಿರೋದೇನು?   

ಒಂದೆಡೆ, ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಅತ್ತ ಸರ್ಕಾರದ ರಚನೆಯಲ್ಲಿ ಮುಂದಾಗಿದ್ದರೆ, ಇತ್ತ  ನಟಿ ಕಂಗನಾ ರಣಾವತ್​ ಅವರ ವಿಷಯ ಭಾರಿ ಕೋಲಾಹಲ ಸೃಷ್ಟಿಸುತ್ತಿದೆ. ರಾಜಕೀಯ ಪ್ರವೇಶ ಮಾಡುತ್ತಿದ್ದಂತೆಯೇ ಪ್ರಥಮ ಹಂತದಲ್ಲಿಯೇ ಲೋಕಸಭೆಯನ್ನು ಪ್ರವೇಶಿಸಲಿರುವ ಅದರಲ್ಲಿಯೂ ಭರ್ಜರಿ ಗೆಲುವಿನೊಂದಿಗೆ ಸಂಸದೆಯಾಗ ಹೊರಟ ನಟಿಯ ಮೇಲೆ ವಿರೋಧಿಗಳ ಕಣ್ಣು ನೆಟ್ಟಿರುವ ಹೊತ್ತಿನಲ್ಲಿಯೇ ಸಿಐಎಸ್ಎಫ್ ನ ಮಹಿಳಾ ಸೆಕ್ಯುರಿಟಿ ಸಿಬ್ಬಂದಿಯೊಬ್ಬರು ಕೆನ್ನೆಗೆ ಹೊಡೆದಿರುವ ಘಟನೆ ಆತಂಕ ಸೃಷ್ಟಿಸಿದೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ಗೆಲುವು ಸಾಧಿಸುತ್ತಿದ್ದಂತೆಯೇ ಈ ಘಟನೆ ಅಭಿಮಾನಿಗಳನ್ನು ದಂಗು ಬಡಿಸಿದೆ. ಈ ಬಗ್ಗೆ ಇದಾಗಲೇ ಸಾಕಷ್ಟು ಚರ್ಚೆ ನಡೆದಿದ್ದು, ಕೆನ್ನೆಗೆ ಹೊಡೆದಿರುವ ಸಿಐಎಸ್ಎಫ್  ಕುಲ್ವಿಂದರ್​ ಕೌರ್ ಅವರನ್ನು ಕೆಲಸದಿಂದ ಅಮಾನತು ಕೂಡ ಮಾಡಲಾಗಿದೆ. ಇದರ ಮಧ್ಯೆಯೇ ವಿಭಿನ್ನ ಕ್ಷೇತ್ರಗಳಿಂದ ಭದ್ರತಾ ಲೋಪದ ಬಗ್ಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ. 

ಇವೆಲ್ಲವುಗಳ ನಡುವೆ ಕುಲ್ವಿಂದರ್​ ಕೌರ್ ಅವರಿಗೆ ಬಿಗ್​ ಆಫರ್​ ಕೊಟ್ಟಿದ್ದಾರೆ ಗಾಯಕ ಶಾಲ್​ ದದ್ಲಾನಿ. ಸಂಗೀತ ನಿರ್ದೇಶಕರೂ ಆಗಿರುವ ವಿಶಾಲ್​ ಅವರು ಕೆಲ ವರ್ಷಗಳಿಂದ ಆಮ್​ ಆದ್ಮಿ ಪಕ್ಷದ ಸ್ಟಾರ್​ ಪ್ರಚಾರಕರಾಗಿದ್ದು, ಎರಡು ವರ್ಷಗಳ ಹಿಂದೆ ಇದರಿಂದ ದೂರ ಸರಿದಿದ್ದಾರೆ. ಇದೀಗ ಮತ್ತೆ ಮುನ್ನೆಲೆಗೆ ಬಂದಿರುವ ಅವರು, ಕಂಗನಾ ಅವರ ಕೆನ್ನೆಗೆ ಹೊಡೆದ ಸಿಬ್ಬಂದಿಗೆ ಏನಾದರೂ ಉದ್ಯೋಗ ಸಮಸ್ಯೆಯಾದರೆ ತಾವು ನೀಡುವುದಾಗಿ ಭರವಸೆ ನೀಡಿದ್ದಾರೆ. ಕುಲ್ವಿಂದರ್​ ಅವರನ್ನು ಅಮಾನತು ಮಾಡುವ ಮುನ್ನ ಅವರು ಈ ಹೇಳಿಕೆ ಕೊಟ್ಟಿದ್ದು, ಈಗ ಅಮಾನತಾಗಿರುವ ಹಿನ್ನೆಲೆಯಲ್ಲಿ ಉದ್ಯೋಗ ನೀಡುತ್ತಾರೆಯೋ ನೋಡಬೇಕಿದೆ. 

ಪಂಜಾಬ್​ ಉಗ್ರವಾದವನ್ನು ಪ್ರಶ್ನಿಸುತ್ತಲೇ ಕೆನ್ನೆಗೆ ಹೊಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ಕಂಗನಾ

 ವಿಶಾಲ್​ ದದ್ಲಾನಿ ಅವರು ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ‘ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆದರೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿಯ ಸಿಟ್ಟು ಏನು ಎಂಬುದು ನನಗೆ ಚೆನ್ನಾಗಿ ಅರ್ಥ ಆಗುತ್ತದೆ. ಕುಲ್ವಿಂದರ್​ ಕೌರ್​ ವಿರುದ್ಧ ಸಿಐಎಸ್​ಎಫ್​ನವರು ಏನಾದರೂ ಕ್ರಮ ಕೈಗೊಂಡರೆ, ಅವರಿಗಾಗಿ ನನ್ನಲ್ಲಿ ಉದ್ಯೋಗ ಕಾದಿರುತ್ತದೆ ಎಂಬುದನ್ನು ನಾನು ಖಚಿತಪಡಿಸುತ್ತೇನೆ. ಜೈ ಹಿಂದ್​, ಜೈ ಜವಾನ್​, ಕೈ ಕಿಸಾನ್​’ ಎಂದು ವಿಶಾಲ್​ ದದ್ಲಾನಿ ಬರೆದುಕೊಂಡಿದ್ದಾರೆ.

ಅಷ್ಟಕ್ಕೂ ನಿನ್ನೆ ನಡೆದ ಘಟನೆಯಲ್ಲಿ,  ಕಂಗನಾ ಅವರು ಚಂಡೀಗಢದಿಂದ ದೆಹಲಿಗೆ ಯುಕೆ707 ಸಂಖ್ಯೆಯ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ವಿಮಾನ ನಿಲ್ದಾಣ ಪ್ರವೇಶಿಸಿದ ಸಂದರ್ಭದಲ್ಲಿ ಸೆಕ್ಯುರಿಟಿ ಚೆಕ್​ ಇದ್ದಾಗ ಸಿಬ್ಬಂದಿಯೊಬ್ಬರು ಅವರ ಕೆನ್ನೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಎರಡು ವರ್ಷಗಳ ಹಿಂದೆ ಪಂಜಾಬ್​ನಲ್ಲಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ, ಇದರಲ್ಲಿ ವಿದೇಶಿಗರ ಕೈವಾಡ ಇರುವ ಬಗ್ಗೆ ಹಲವಾರು ವರದಿಗಳು ಬಂದಿದ್ದವು. ಅದನ್ನೇ ಆಧರಿಸಿ ನಟಿ ಕಂಗನಾ ಅವರು, ರೈತರ ವಿರುದ್ಧ ಮಾತನಾಡಿದ್ದರು.  ಇದರಿಂದ ಕೆರಳಿದ್ದ ಸಿಬ್ಬಂದಿ ಹೀಗೆ ಮಾಡಿರುವುದಾಗಿ ಹೇಳಲಾಗುತ್ತಿದೆ. 

ಸಂಸದೆಯಾದ್ರೆ ನಟನೆಗೆ ಗುಡ್​​ಬೈ ಹೇಳ್ತಾರಾ ಕಂಗನಾ? ನಟಿಯ ಹೇಳಿಕೆಗೆ ಅಭಿಮಾನಿಗಳು ಏನಂತಿದ್ದಾರೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ