ನೇಪಾಳದ ಕಾಲಾ ಪತ್ತರ್‌ ಏರಿದ ಪುಣೆಯ 13 ವರ್ಷದ ಬಾಲಕ

By Anusha Kb  |  First Published Jun 1, 2022, 6:22 PM IST

ವಯಸ್ಸು ಕೇವಲ ಸಂಖ್ಯೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈಗ ಇದಕ್ಕೆ ಮತ್ತೊಂದು ಉದಾಹರಣೆ ಪುಣೆಯ ಈ ಬಾಲಕ  13 ವರ್ಷದ ಬಾಲಕ ವರ್ಷದ ಬಾಲಕ ಅತ್ಯಂತ ಕಠಿಣವೆನಿಸಿದ ನೇಪಾಳ ಕಾಲ ಪತ್ತರ್‌ ಶಿಖರವನ್ನು ಏರಿದ್ದಾನೆ. 
 


ವಯಸ್ಸು ಕೇವಲ ಸಂಖ್ಯೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈಗ ಇದಕ್ಕೆ ಮತ್ತೊಂದು ಉದಾಹರಣೆ ಪುಣೆಯ ಈ ಬಾಲಕ  13 ವರ್ಷದ ಬಾಲಕ ವರ್ಷದ ಬಾಲಕ ಅತ್ಯಂತ ಕಠಿಣವೆನಿಸಿದ ನೇಪಾಳ ಕಾಲ ಪತ್ತರ್‌ ಶಿಖರವನ್ನು ಏರಿದ್ದಾನೆ. 

ಪುಣೆಯ 13 ವರ್ಷದ ಬಾಲಕನೋರ್ವ ನೇಪಾಳದ ಅತ್ಯಂತ ಎತ್ತರದ ಹಾಗೂ ಏರಲು ತುಂಬಾ ಕಠಿಣವಾದ ಪರ್ವತವನ್ನು ಏರಿದ್ದಾನೆ. ಮೇ 27 ರಂದು, ಬಾಲಕ ಸುಧೀರ್‌ ಕವಾಡೆ 5,364 ಮೀಟರ್ ಎತ್ತರದಲ್ಲಿರುವ ಎವರೆಸ್ಟ್ ಬೇಸ್ ಕ್ಯಾಂಪ್ ಅನ್ನು ತಲುಪಿದ್ದ ಮತ್ತು ಮೇ 28 ರಂದು 5,644.5 ಮೀಟರ್ ಎತ್ತರದ ಕಾಲಾ ಪತ್ತರ್ ಮ್ಯಾರಥಾನ್ ಅನ್ನು ಮುಗಿಸಿದ್ದಾನೆ. 

Tap to resize

Latest Videos

11 ದಿನದಲ್ಲಿ ಮೌಂಟ್ ಎವರೆಸ್ಟ್ ಏರಿದ 10 ವರ್ಷದ ಬಾಲಕಿ
 

13 ವರ್ಷದ ಸಾಯಿ ಸುಧೀರ್ ಕವಾಡೆ (Sai Sudhir Kawade) ಅವರು ಮೇ 29 ರಂದು ತೇನ್ಸಿಂಗ್ ಹಿಲರಿ ಎವರೆಸ್ಟ್ ಮ್ಯಾರಥಾನ್ ಮುಗಿಸಿ ವಿಜಯದ ನಗೆ ಬೀರಿದ್ದಾರೆ. ವಾರ್ಷಿಕವಾಗಿ ನಡೆಯುವ ಈ ಮ್ಯಾರಥಾನ್‌ನಲ್ಲಿ ಸುಮಾರು 45 ದೇಶದ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.  ಮತ್ತು ಸುಧೀರ್‌ ಕವಾಡೆ ಈ ಇವೆಂಟ್‌ನಲ್ಲಿ ಭಾಗವಹಿಸಿದ ಅತ್ಯಂತ ಕಿರಿಯ ಪರ್ವತಾರೋಹಿಯಾಗಿದ್ದಾರೆ. 

1953ರಲ್ಲಿ ಎವರೆಸ್ಟ್ ಏರಿದ ತೇನ್ಸಿಂಗ್ ನಾರ್ಗೆ (Tenzing Norgay) ಮತ್ತು ಸರ್ ಎಡ್ಮಂಡ್ ಹಿಲರಿ (Edmund Hillary) ಅವರು ಮೌಂಟ್ ಎವರೆಸ್ಟ್ ಎರಿದ್ದರ ಸ್ಮರಣಾರ್ಥ ಅವರ ಮೊದಲ ಆರೋಹಣದ ವಾರ್ಷಿಕೋತ್ಸವವನ್ನು ಆಚರಿಸಲು ಈ ಮ್ಯಾರಥಾನ್ ಅನ್ನು ಪ್ರತಿ ವರ್ಷ ಆಯೋಜಿಸಲಾಗುತ್ತದೆ.

ಪೂರಕ ಆಕ್ಸಿಜನ್ ಇಲ್ಲದೆ ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡಿದ ಪಿಯಾಲಿ ಬಾಸಕ್!
 

ಮೇ 27 ರಂದು ಕವಾಡೆ ಅವರು 5,364 ಮೀಟರ್ ಎತ್ತರದಲ್ಲಿರುವ ಎವರೆಸ್ಟ್ ಬೇಸ್ ಕ್ಯಾಂಪ್ ಅನ್ನು ತಲುಪಿದರು ಮತ್ತು ಮೇ 28 ರಂದು 5,644.5 ಮೀಟರ್ ಎತ್ತರದ ಕಾಲಾ ಪತ್ಥಾರ್ ಅನ್ನು ಏರಿದರು. ಇವರ ಜೊತೆ ಇವರ ತಂದೆಯ ಸ್ನೇಹಿತರು ಮತ್ತು ಸಹ ಪರ್ವತಾರೋಹಿಗಳಾದ ತುಷಾರ್ ಪವಾರ್ ಮತ್ತು ವಿನೋದ್ ಸುರದ್ಕರ್ ಅವರು ಕೂಡ ಇದ್ದರು. ನಂತರ ಅವರು 175 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಸುಧೀರ್ ಕವಾಡೆ ಅವರು ಪುಣೆಯ  ಭಾರತಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಯಾಗಿದ್ದು, ಪರ್ವತಾರೋಹಣದಲ್ಲಿ ಒಲವು ತೋರಿದ್ದಾರೆ. ಸ್ಟೋಕ್ ಕಂಗ್ರಿ ಶಿಖರ ಸೇರಿದಂತೆ ಆಫ್ರಿಕಾದ (Africa)  ಕಿಲಿಮಂಜಾರೋ(Kilimanjaro peak) ಶಿಖರ ಮತ್ತು ಯುರೋಪ್‌ನ ಎಲ್ಬ್ರಸ್ ಶಿಖರ(Elbrus peak) ವನ್ನು ಕೂಡ ಏರಿದ್ದಾನೆ.

click me!