French Open 2022 : ಜೊಕೋವಿಕ್ ರನ್ನು ಮಣಿಸಿ ಸೆಮಿಫೈನಲ್ ಗೇರಿದ ರಾಫೆಲ್ ನಡಾಲ್!

By Santosh NaikFirst Published Jun 1, 2022, 8:43 AM IST
Highlights

ನಾಲ್ಕು ಸೆಟ್ ಗಳ ಕಾದಾಟದಲ್ಲಿ ತಮ್ಮ ಹಳೆಯ ಪ್ರತಿಸ್ಪರ್ಧಿ ಸೆರ್ಬಿಯಾದ ನೋವಾಕ್ ಜೋಕೊವಿಕ್ ವಿರುದ್ಧ ಗೆಲುವು ಕಂಡ ರಾಫೆಲ್ ನಡಾಲ್, ದಾಖಲೆಯ 15ನೇ ಬಾರಿಗೆ ಫ್ರೆಂಚ್ ಓಪನ್ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. 13 ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್, 4 ಗಂಟೆ 12 ನಿಮಿಷದ ಕಾದಾಟದಲ್ಲಿ ಗೆಲುವು ಸಾಧಿಸಿದರು.

ಪ್ಯಾರಿಸ್ (ಜೂನ್ 1): ಸ್ಪೇನ್‌ನ ಸ್ಟಾರ್ (spain) ಟೆನಿಸ್ ಆಟಗಾರ ರಾಫೆಲ್ ನಡಾಲ್ (Rafael Nadal ) ಅವರು ಫ್ರೆಂಚ್ ಓಪನ್ 2022 ರ ( french open 2022) ಸೆಮಿಫೈನಲ್ ಗೆ (Semi Final) ಲಗ್ಗೆ ಇಟ್ಟಿದ್ದಾರೆ. ಮಂಗಳವಾರ ತಡರಾತ್ರಿ ನಡೆದ ಕ್ವಾರ್ಟರ್ ಫೈನಲ್ (quarter final ) ಪಂದ್ಯದಲ್ಲಿ ಐದನೇ ಶ್ರೇಯಾಂಕದ ನಡಾಲ್ ತನ್ನ ಹಳೆಯ ಎದುರಾಳಿ ನೊವಾಕ್ ಜೊಕೋವಿಕ್ (Novak Djokovic) ಅವರನ್ನು 6-2, 4-6, 6-2, 7-6 ಸೆಟ್‌ಗಳಿಂದ ಸೋಲಿಸಿದರು.

 ಉಭಯ ಆಟಗಾರರ ನಡುವಿನ ಪಂದ್ಯ 4 ಗಂಟೆ 12 ನಿಮಿಷಗಳ ಕಾಲ ನಡೆಯಿತು. ನಡಾಲ್ ಸೆಮಿಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜ್ವೆರೆವ್ ಸ್ಪೇನ್‌ನ ಕಾರ್ಲೋಸ್ ಎಲ್ಕರೆಜ್ ಅವರನ್ನು ಸೋಲಿಸಿದರು.

ವಿಶ್ವ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ರಾಫೆಲ್ ನಡಾಲ್ ಅವರ 29ನೇ ಗೆಲುವು ಇದಾಗಿದೆ. ಇದಕ್ಕೂ ಮೊದಲು ಉಭಯ ಆಟಗಾರರ ನಡುವಿನ 58 ಪಂದ್ಯಗಳಲ್ಲಿ ಜೊಕೊವಿಕ್ 30 ಮತ್ತು ನಡಾಲ್ 28 ಪಂದ್ಯಗಳಲ್ಲಿ ಜಯ ಸಾಧಿಸಿದ್ದರ. ಅಲ್ಲದೆ, ಈ ಗೆಲುವಿನೊಂದಿಗೆ ಕಳೆದ ವರ್ಷದ ಫ್ರೆಂಚ್ ಓಪನ್‌ನ ಸೆಮಿಫೈನಲ್‌ನಲ್ಲಿ ಜೊಕೊವಿಕ್ ಎದುರು ಕಂಡಿದ್ದ ಸೋಲಿಗೆ ನಡಾಲ್ ಸೇಡು ತೀರಿಸಿಕೊಂಡರು. ವಿಶೇಷವೆಂದರೆ ಇದು ಫ್ರೆಂಚ್ ಓಪನ್ ಟೆನಿಸ್‌ನಲ್ಲಿ ರಾಫೆಲ್ ನಡಾಲ್ ಅವರ 110 ನೇ ಗೆಲುವು. ಈ ಟೂರ್ನಿಯಲ್ಲಿ ಕೇವಲ ಮೂರು ಬಾರಿ ಸೋಲು ಕಂಡಿದ್ದಾರೆ.

ಜೊಕೋವಿಕ್ ವಿರುದ್ಧದ ಪಂದ್ಯದಲ್ಲಿ ನಡಾಲ್ ಅತ್ಯುತ್ತಮ ಆರಂಭ ಕಂಡಿದ್ದರು. ಮೊದಲ ಗೇಮ್ ನಲ್ಲಿಯಯೇ ಸರ್ವೀಸ್ ಬ್ರೇಕ್ ಮಾಡಿದ್ದರು. ಇದರಿಂದಾಗಿ ನಡಾಲ್ ಮೊದಲ ಸೆಟ್ ಅನ್ನು ಸಲೀಸಾಗಿ ಜಯಿಸಿದ್ದರು. ಆ ನಂತರ ನಡೆದ 2ನೇ ಸೆಟ್ 88 ನಿಮಿಷಗಳ ಕಾಲ ನಡೆಯಿತು. ಜೊಕೋವಿಕ್ ಇದರಲ್ಲಿ ಪುನರಾಗಮನ ಕಾಣುವ ಮೂಲಕ ಸಮಬಲ ಸಾಧಿಸಿದ್ದರು. ಆದರೆ 35 ವರ್ಷದ ನಡಾಲ್ ಮೂರು ಮತ್ತು ನಾಲ್ಕನೇ ಸೆಟ್‌ಗಳನ್ನು ಗೆದ್ದು ಜೊಕೊವಿಕ್ ಅವರನ್ನು ಪಂದ್ಯಾವಳಿಯಿಂದ ಹೊರಹಾಕಿದರು, ನಾಲ್ಕನೇ ಸೆಟ್‌ನಲ್ಲಿ ನಡಾಲ್ ಅವರ ಸರ್ವ್ ಮುರಿದ ಜೊಕೊವಿಕ್ ಅವರು ನಡಾಲ್ ಅವರನ್ನು ಸೋಲಿಸಿ 2-2 ರಿಂದ ಸಮಬಲ ಸಾಧಿಸುವ ಅವಕಾಶವನ್ನು ಹೊಂದಿದ್ದರೂ, ಜೊಕೊವಿಕ್ ತಮ್ಮ ಸ್ಥಿರ ಆಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

FRENCH OPEN 2022 ಕ್ವಾರ್ಟರ್‌ಗೆ ಇಗಾ ಸ್ವಿಯಾಟೆಕ್‌ ಲಗ್ಗೆ!

ಕ್ಲೇ ಕೋರ್ಟ್ ಗಳಲ್ಲಿ  ಅದ್ಬುತ ಆಟವಾಡುವ ರಾಫೆಲ್ ನಡಾಲ್ ಅವರನ್ನು ಕಿಂಗ್ ಆಫ್ ಕ್ಲೇ ಎಂದೇ ಕರೆಯಲಾಗುತ್ತದೆ. ಸಾರ್ವಕಾಲಿಕ ದಾಖಲೆಯ 13 ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ಆಟಗಾರ ಇವರಾಗಿದ್ದಾರೆ. ಒಂದೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಯನ್ನು ಗರಿಷ್ಠ ಬಾರಿ ಜಯಿಸಿದ ಪುರುಷ ಟೆನಿಸ್ ಆಟಗಾರ ಎನ್ನುವ ದಾಖಲೆಯನ್ನೂ ಇವರು ಹೊಂದಿದ್ದಾರೆ. ಅದಲ್ಲದೆ, ಗರಿಷ್ಠ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸಿದ ಆಟಗಾರ ಕೂಡ ಇವರಾಗಿದ್ದಾರೆ. ನಡಾಲ್ ದಾಖಲೆಯ 21 ಗ್ರ್ಯಾನ್ ಸ್ಲಾಂ ಗೆದ್ದಿದ್ದರೆ, ತಲಾ 20 ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದಿರುವ ಸ್ವಿಜರ್ಲೆಂಡ್ ನ ರೋಜರ್ ಫೆಡಡರ್ ಹಾಗೂ ನೊವಾಕ್ ಜೊಕೋವಿಕ್ ನಂತರದ ಸ್ಥಾನಗಳಲ್ಲಿದ್ದಾರೆ.

French Open: ಇಂದು ರಾಫಾ vs ಜೋಕೋ ಕ್ವಾರ್ಟರ್‌ ಫೈನಲ್‌ ಫೈಟ್

ಪ್ರಮುಖ ಕ್ಷಣಗಳಲ್ಲಿ ನಡಾಲ್ ಅತ್ಯುತ್ತಮ ಆಟಗಾರ ಎಂದು ಜೊಕೋವಿಕ್ ಪಂದ್ಯದ ಬಳಿಕ ಹೇಳಿದರು. "ಅವರು ಏಕೆ ಶ್ರೇಷ್ಠ ಚಾಂಪಿಯನ್ ಎಂಬುದನ್ನು ತೋರಿಸಿದರು. ಮಾನಸಿಕವಾಗಿ ಬಹಳ ಕಠಿಣವಾಗಿ ಉಳಿದುಕೊಂಡರು ಮತ್ತು ಅವರು ಅಂದುಕೊಂಡ ರೀತಿಯಲ್ಲಿ ಪಂದ್ಯವನ್ನು ಮುಗಿಸಿದರು. ಅವರಿಗೆ ಮತ್ತು ಅವರ ತಂಡಕ್ಕೆ ಅಭಿನಂದನೆಗಳು. ಅವರು ಈ ಗೆಲುವಿಗೆ ಅರ್ಹರು ಎಂಬುದರಲ್ಲಿ ಸಂದೇಹವಿಲ್ಲ' ಎಂದು ಹೇಳಿದರು.

click me!