French Open 2022 ಕ್ವಾರ್ಟರ್‌ಗೆ ಇಗಾ ಸ್ವಿಯಾಟೆಕ್‌ ಲಗ್ಗೆ!

Published : Jun 01, 2022, 08:57 AM ISTUpdated : Jun 01, 2022, 09:03 AM IST
 French Open 2022 ಕ್ವಾರ್ಟರ್‌ಗೆ ಇಗಾ ಸ್ವಿಯಾಟೆಕ್‌ ಲಗ್ಗೆ!

ಸಾರಾಂಶ

ಸತತ 32ನೇ ಗೆಲುವು ಕಂಡ ವಿಶ್ವ ನಂ.1 ಆಟಗಾರ್ತಿ ಪೋಲೆಂಡ್ ನ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಸಮಯದಲ್ಲಿ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ಸೆಟ್ ಸೋಲು ಕಂಡರೂ ಸ್ವಿಯಾಟೆಕ್ ಪಂದ್ಯದಲ್ಲಿ ಜಯ ಕಾಣುವಲ್ಲಿ ಯಶಸ್ವಿಯಾದರು.  

ಪ್ಯಾರಿಸ್‌ (ಜೂ. 1): ಗ್ರ್ಯಾನ್‌ ಸ್ಲಾಂ (Grand Slam) ಪಂದ್ಯದಲ್ಲಿ ಆಟಗಾರ ಅಥವಾ ಆಟಗಾರ್ತಿ ಒಂದು ಸೆಟ್‌ ಸೋತರೆ ಹೆಚ್ಚು ಸುದ್ದಿಯಾಗುವುದಿಲ್ಲ. ಆದರೆ ಸೋಮವಾರ ಫ್ರೆಂಚ್‌ ಓಪನ್‌ನಲ್ಲಿ ( French Open 2022) ಸುದ್ದಿಯಾಯಿತು. ಏಕೆಂದರೆ ವಿಶ್ವ ನಂ.1 ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ (iga swiatek) ಒಂದು ತಿಂಗಳಿಗೂ ಹೆಚ್ಚು ಸಮಯದಲ್ಲಿ ಮೊದಲ ಬಾರಿಗೆ ಸೆಟ್‌ ಸೋತರು. ಆದರೆ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದ ಅವರು, ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟರು.

2020ರ ಚಾಂಪಿಯನ್‌ ಸ್ವಿಯಾಟೆಕ್‌, ಮಹಿಳಾ ಸಿಂಗಲ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ ಚೀನಾದ ಝೆಂಗ್‌ ಕಿನ್ವೆನ್‌  ( Zheng Qinwen) ವಿರುದ್ಧ 6-7(5), 6-0, 6-2 ಸೆಟ್‌ಗಳಲ್ಲಿ ಜಯಿಸಿದರು. ಮೊದಲ ಸೆಟ್‌ನಲ್ಲಿ ಇಗಾ 5-2ರ ಮುನ್ನಡೆಯಲ್ಲಿದ್ದರು. ಆದರೂ ತಿರುಗಿಬಿದ್ದ ಝೆಂಗ್‌ 6-7(5)ರಲ್ಲಿ ಸೆಟ್‌ ತಮ್ಮದಾಗಿಸಿಕೊಂಡರು. ಬಳಿಕ 2 ಸೆಟ್‌ಗಳಲ್ಲಿ ಪ್ರಾಬಲ್ಯ ಮೆರೆದ ಸ್ವಿಯಾಟೆಕ್‌, ಸತತ 32ನೇ ಗೆಲುವು ದಾಖಲಿಸಿದರು. ಈ ವರ್ಷ 5 ಟೂರ್ನಿಗಳನ್ನು ಗೆದ್ದಿರುವ ಅವರು ಒಂದೂ ಸೋಲು ಕಂಡಿಲ್ಲ. ಕ್ವಾರ್ಟರ್‌ನಲ್ಲಿ ಸ್ವಿಯಾಟೆಕ್‌ಗೆ ಅಮೆರಿಕದ ಜೆಸ್ಸಿಕಾ ಪೆಗುಲಾ ಎದುರಾಗಲಿದ್ದಾರೆ.

ಇನ್ನು ಪುರುಷರ ಸಿಂಗಲ್ಸ್‌ 4ನೇ ಸುತ್ತಿನಲ್ಲಿ ವಿಶ್ವ ನಂ.2, ಹಾಲಿ ಯುಎಸ್‌ ಓಪನ್‌ ಚಾಂಪಿಯನ್‌ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಸೋತು ಆಘಾತ ಅನುಭವಿಸಿದರು. ಕ್ರೊವೇಷಿಯಾದ ಮರಿನ್‌ ಸಿಲಿಚ್‌ ವಿರುದ್ಧ 2-6, 3-6, 2-6 ಸೆಟ್‌ಗಳಲ್ಲಿ ಪರಾಭವಗೊಂಡರು.

ನಾನು ಗಂಡಾಗಿ ಹುಟ್ಟಬೇಕಿತ್ತು ಎಂದ ಚೀನಾ ಆಟಗಾರ್ತಿ ಝೆಂಗ್‌!: ಸ್ವಿಯಾಟೆಕ್‌ ವಿರುದ್ಧದ ಪಂದ್ಯದಲ್ಲಿ ಮೊದಲ ಸೆಟ್‌ ಗೆದ್ದು ಮುನ್ನುಗ್ಗುತಿದ್ದ ಝೆಂಗ್‌, 2ನೇ ಸೆಟ್‌ ವೇಳೆ ತೀವ್ರ ಹೊಟ್ಟೆನೋವಿನಿಂದ ನರಳಿದರು. ಋುತುಸ್ರಾವದ ಸಮಯದಲ್ಲಿ ಪಂದ್ಯವಾಡುತ್ತಿದ್ದ ಅವರಿಗೆ ವೈದ್ಯಕೀಯ ಸಹಾಯವೂ ಬೇಕಾಯಿತು. ಈ ಬಗ್ಗೆ ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯಿಸಿದ ಝೆಂಗ್‌, ‘ಇದು ಹುಡುಗಿಯರ ಸಮಸ್ಯೆ. ಇಂಥ ಸಮಯದಲ್ಲಿ ಆಡುವುದು ಬಹಳ ಕಷ್ಟ. ನಾನು ಗಂಡಸಾಗಿ ಹುಟ್ಟಬಾರದಿತ್ತೇ ಎಂದು ಅನಿಸುತ್ತದೆ. ಯಾವುದೇ ನೋವು, ಸಮಸ್ಯೆ ಇಲ್ಲದೆ ಆಡಬಹುದಿತ್ತು’ ಎಂದರು.

French Open 2022 : ಜೊಕೋವಿಕ್ ರನ್ನು ಮಣಿಸಿ ಸೆಮಿಫೈನಲ್ ಗೇರಿದ ರಾಫೆಲ್ ನಡಾಲ್!

2015ರ ಬಳಿಕ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಸೆಮೀಸ್‌ಗೆ ಬೋಪಣ್ಣ:
ಕರ್ನಾಟಕದ ರೋಹನ್‌ ಬೋಪಣ್ಣ 7 ವರ್ಷಗಳಲ್ಲಿ ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಫ್ರೆಂಚ್‌ ಓಪನ್‌ ಪುರುಷರ ಡಬಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಬೋಪಣ್ಣ ಮತ್ತು ನೆದರ್‌ಲೆಂಡ್‌್ಸನ ಮಾಟ್ವೆ ಮಿಡ್ಡೆಲ್ಕೊಪ್‌ ಜೋಡಿಯು ಬ್ರಿಟನ್‌ನ ಲಾಯ್ಡ್‌ ಗ್ಲಾಸ್‌ಪೂಲ್‌ ಮತ್ತು ಫಿನ್‌ಲ್ಯಾಂಡ್‌ನ ಹೆನ್ರಿ ಹೆಲಿಯೊವಾರಾ ವಿರುದ್ಧ 4-6, 6-4, 7-6(3) ಸೆಟ್‌ಗಳಲ್ಲಿ ಜಯಿಸಿತು.

khelo india ಖೇಲೋ ಇಂಡಿಯಾಗೆ ಕರ್ನಾಟಕ ಭರ್ಜರಿ ತಯಾರಿ, ಅಗ್ರಸ್ಥಾನದ ಗುರಿ

ಬೋಪಣ್ಣಗೆ ಇದು ಫ್ರೆಂಚ್‌ ಓಪನ್‌ನಲ್ಲಿ ಮೊದಲ ಸೆಮಿಫೈನಲ್‌. 42 ವರ್ಷದ ಬೋಪಣ್ಣ ಮತ್ತು 38 ವರ್ಷದ ಮಿಡ್ಡೆಲ್ಕೊಪ್‌ ಜೋಡಿಯು ಗುರುವಾರ ಸೆಮೀಸ್‌ನಲ್ಲಿ ನೆದರ್‌ಲೆಂಡ್‌್ಸನ ಜೂಲಿಯನ್‌ ರೋಜರ್‌ ಮತ್ತು ಸಾಲ್ವಾಡೊರ್‌ನ ಮಾರ್ಸೆಲೊ ಆರೆವಾಲೊ ವಿರುದ್ಧ ಸೆಣಸಲಿದ್ದಾರೆ. ರೋಹನ್‌ ಇದಕ್ಕೂ ಮೊದಲು ಗ್ರ್ಯಾನ್‌ ಸ್ಲಾಂ ಸೆಮೀಸ್‌ಗೇರಿದ್ದು 2015ರ ವಿಂಬಲ್ಡನ್‌ನಲ್ಲಿ. ರೊಮೇನಿಯಾದ ಫ್ಲಾರಿನ್‌ ಮರ್ಗೆಯಾ ಜೊತೆ ಆಡಿದ್ದ ಅವರು ಸೆಮೀಸ್‌ನಲ್ಲಿ ಸೋತಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!