41ರ ವಸಂತಕ್ಕೆ ಮುತ್ತಿಟ್ಟ ಜಹೀರ್, ಟರ್ಕಿ ಅಧ್ಯಕ್ಷ ಹೊರಹಾಕಿದ 'ಜೆಹರ್': ಟಾಪ್ 10 ಸುದ್ದಿಯೊಂದಿಗೆ ನಾವ್ ಹಾಜರ್!

By Web DeskFirst Published Oct 7, 2019, 5:59 PM IST
Highlights

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯನ್ನು ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಅ.07ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

ಬೆಂಗಳೂರು(ಅ.07): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. 

ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ

'ಯಡಿಯೂರಪ್ಪನವರೇ ಕುಗ್ಗದಿರಿ, ಅಂಜದಿರಿ'..! ಸಿಎಂಗೆ ಸ್ವಾಮೀಜಿ ಪತ್ರ

ಬಿ. ಎಸ್. ಯಡಿಯೂರಪ್ಪ ಅವರಿಗೆ ದಾಬಸ್‌ಪೇಟೆಯ ಸ್ವಾಮೀಜಿ ಒಬ್ಬರು ಪತ್ರ ಬರೆದಿದ್ದಾರೆ. ಸಿಎಂಗೆ ಸ್ವಾಮೀನಿ ಬರೆದಿರೋ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಪತ್ರದಲ್ಲೇನಿದೆ, ಸ್ವಾಮೀಜಿ ಪತ್ರ ಬರೆದಿದ್ದೇಕೆ ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.

ರಾತ್ರಿ ಹೇಳದೇ ಬರ್ತಿವಿ: ಟರ್ಕಿ ಅಧ್ಯಕ್ಷರ ಬೆದರಿಕೆ ಕೇಳಿ ಹೇಳ್ತಿವಿ!

ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎಂಬಂತೆ ಇಸ್ಲಾಮಿಕ್ ಬಂಡುಕೋರರ ಹಾವಳಿ ಇನ್ನೇನು ತಪ್ಪಿತು ಎಂದು ನಿಟ್ಟುಸಿರು ಬಿಟ್ಟ ಸಿರಿಯಾಗೆ ಇದೀಗ ಟರ್ಕಿ ದಾಳಿಯ ಭೀತಿ ಎದುರಾಗಿದೆ. ಐಸಿಸ್ ಉಗ್ರರನ್ನು ಸದೆಬಡಿಯುವಲ್ಲಿ ಅಮೆರಿಕನ್ ಸೇನೆ ಮತ್ತು ಕುರ್ದಿಷ್ ಹೋರಾಟಗಾರರಿಗೆ ಬೆಂಬಲ ನೀಡಿದ್ದ ಟರ್ಕಿ, ಇದೀಗ ಕುರ್ದಿಷ್ ಹೋರಾಟಗಾರರ ವಿರುದ್ಧ ತಿರುಗಿ ಬಿದ್ದಿದೆ.

ಮುಖ ಮುಚ್ಕೊಂಡು ಮೆಟ್ರೋಲಿ ಸಂಚರಿಸಿದ ಡಿಂಪಲ್ ಹುಡುಗಿ

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಖತ್ ಸಿಂಪಲ್ ನಟಿ. ಚಿಕ್ಕ ಪುಟ್ಟ ಖುಷಿಗಳಲ್ಲಿ ಸಂಭ್ರಮಿಸುತ್ತಾರೆ. ಮೆಟ್ರೋ ರೈಡ್ ಮಾಡಬೇಕೆಂಬುದು ಇವರ ಕನಸಾಗಿತ್ತಂತೆ. ಮುಖ ಮುಚ್ಚಿಕೊಂಡು ಮೆಟ್ರೋ ಸವಾರಿ ಮಾಡಿದ್ದಾರೆ ಡಿಂಪಲ್ ಕ್ವೀನ್. ರಚಿತಾ ರಾಮ್ ಸ್ನೇಹಿತೆ ತೇಜು ಕ್ರಾಂತಿ ಇವರನ್ನು ಮೆಟ್ರೋ ಸವಾರಿಗೆ ಕರೆದುಕೊಂಡು ಹೋಗಿದ್ದಾರೆ. ಮುಖಕ್ಕೆ ಸ್ಕಾರ್ಪ್ ಕಟ್ಟಿಕೊಂಡಿದ್ದರಿಂದ ಸಾರ್ವಜನಿಕರಿಗೆ ಇವರ ಗುರುತು ಸಿಕ್ಕಿಲ್ಲ.

ಮೋದಿ-ಶಾ ಆಡಿದ್ದ ’ಮಂಡಲದ ಆಟದ’ ಪರಿಣಾಮವೇ ಆರ್ಟಿಕಲ್ 370 ರದ್ದು!

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಮಹತ್ವದ ಹೆಜ್ಜೆಯನ್ನು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತಮ್ಮದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

ಮೈಸೂರು: ಕರಿಕಲ್ಲು ತೊಟ್ಟಿಯಲ್ಲಿ ಜೆಟ್ಟಿಕಾಳಗ

ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಅ. 8 ರಂದು ವಿಜಯದಶಮಿಯಂದು ನಡೆಯುವ ಜೆಟ್ಟಿಕಾಳಗಕ್ಕೆ ಜಗಜೆಟ್ಟಿಗಳು ಸಿದ್ಧವಾಗಿದ್ದಾರೆ. ಈ ಬಾರಿ ಮೈಸೂರಿನ ಬಲರಾಂ ಜೆಟ್ಟಿ- ಚನ್ನಪಟ್ಟಣದ ನರಸಿಂಹ ಜೆಟ್ಟಿ, ಬೆಂಗಳೂರಿನ ನಾರಾಯಣ ಜೆಟ್ಟಿ- ಚಾಮರಾಜನಗರದ ಗಿರೀಶ್‌ ಜೆಟ್ಟಿ ಸೆಣಸಾಡಲಿದ್ದಾರೆ.

ನವರಾತ್ರಿ ಹಬ್ಬದಲ್ಲಿ ರುಚಿ ನೋಡಲೇಬೇಕಾದ ತಿಂಡಿಗಳ ರೆಸಿಪಿ

ನವರಾತ್ರಿ ಹಬ್ಬದಲ್ಲಿ ಏನೇನು ತಿಂಡಿ ಮಾಡಬೇಕು ಎಂದು ಯೋಚಿಸುತ್ತಿದ್ದರೆ ಇಲ್ಲಿ ಒಂದು ಪಟ್ಟಿ ಮತ್ತು ರೆಸಿಪಿ ಇದೆ. ಹಬ್ಬ ರುಚಿಕರವಾಗಿರಲಿ. ಹಬ್ಬದ ರಜೆಯಲ್ಲಿ ಯಾರು ಅಡುಗೆ ಮಾಡ್ತಾರೆ ಅಂತ ಗೊಣಗಬೇಡಿ. ಮನೆಯವರೆಲ್ಲ ಕೂಡಿ ಅಡುಗೆ ಮಾಡಿ ಉಣ್ಣೋ ಮಜಾನೇ ಬೇರೆ ಹಬ್ಬವನ್ನು ಸಂಭ್ರಮಿಸೋಣ.

ದೇವೇಗೌಡ ಏಕತಾ ಪ್ರತಿಮೆ ಸಂದರ್ಶನಕ್ಕೆ ಪ್ರಧಾನಿ ಹರ್ಷ!

ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ವಿಶ್ವದ ಅತೀ ಎತ್ತರದ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ಏಕತಾ ಪ್ರತಿಮೆ ಸಂದರ್ಶಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ, ಮಾಜಿ ಪ್ರಧಾನಿ ದೇವೇಗೌಡಜಿ ಅವರು ಏಕಾತಾ ಪ್ರತಿಮೆ ಸಂದರ್ಶಿಸಿದ್ದನ್ನು ನೋಡಿ ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಬಹುವಿವಾದಿತ ರಫೇಲ್ 12 ವರ್ಷದ ನಂತರ ಕೊನೆಗೂ ಇಂಡಿಯಾಕ್ಕೆ ಲಭ್ಯ

ಬಹು ನಿರೀಕ್ಷಿತ ರಫೇಲ್‌ ಯುದ್ಧ ವಿಮಾನವನ್ನು ಫ್ರಾನ್ಸ್‌ ಇದೇ ಅಕ್ಟೋಬರ್‌ 8ರಂದು ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರಿಸಲಿದೆ. ಖರೀದಿಯ ಒಪ್ಪಂದ ಏರ್ಪಟ್ಟ12 ವರ್ಷಗಳ ನಂತರ ವಿವಾದಿತ ರಫೇಲ್‌ ಯುದ್ಧ ವಿಮಾನಗಳು ಭಾರತದ ವಾಯುಪಡೆಗೆ ಸೇರಲು ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ರಫೇಲ್‌ ಒಪ್ಪಂದ, ವಿವಾದ, ರಫೇಲ್‌ ವಿಶೇಷತೆ, ಭಾರತಕ್ಕೆ ಅದರ ಅಗತ್ಯ ಮತ್ತಿತರ ಮಾಹಿತಿ ಇಲ್ಲಿದೆ.

ಜಹೀರ್ ಖಾನ್‌ಗಿಂದು 41ನೇ ಹುಟ್ಟುಹಬ್ಬದ ಸಂಭ್ರಮ

ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಸೋಮವಾರ[ಅ.07] 41ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜ್ಯಾಕ್ ಹುಟ್ಟುಹಬ್ಬಕ್ಕೆ ಅಭಿನಂದನೆಗಳ ಮಹಾಪುರವೇ ಹರಿದು ಬಂದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

ರಾಮದುರ್ಗದಲ್ಲಿ ಭಾವೈಕ್ಯತೆ ಸಾರಿದ ದುರ್ಗಾಮಾತಾ ದೌಡ್

ಪಟ್ಟಣದಲ್ಲಿ ನವರಾತ್ರಿ ಉತ್ಸವ ಕಮಿಟಿ, ಸ್ವಾತಂತ್ರ್ಯ ಸೇನಾನಿ ವೀರ ಸಾವರಕರ ಪ್ರತಿಷ್ಠಾನದ ನೇತೃತ್ವದಲ್ಲಿ ಸುಮಾರು 9 ದಿನಗಳವರೆಗೆ ನಡೆಯುತ್ತಿರುವ ದುರ್ಗಾಮಾತಾ ದೌಡ್‌ ಕಾರ್ಯಕ್ರಮ ದಿನೇ ದಿನೆ ಹಲವು ಭಕ್ತಿಪೂರ್ವಕ ವಿಶೇಷತೆ ಸಾರುತ್ತಿದ್ದು, ಭಾನುವಾರ ದೌಡ ಮೆರವಣಿಗೆಯಲ್ಲಿ ಪಾಲ್ಗೊಂಡ ಯುವಕರು ಭಾವೈಕ್ಯತೆ ಮೆರೆದರು.

click me!