ರಾತ್ರಿ ಹೇಳದೇ ಬರ್ತಿವಿ: ಟರ್ಕಿ ಅಧ್ಯಕ್ಷರ ಬೆದರಿಕೆ ಕೇಳಿ ಹೇಳ್ತಿವಿ!

By Web Desk  |  First Published Oct 7, 2019, 4:26 PM IST

ಟರ್ಕಿ ಅಧ್ಯಕ್ಷರ ಧಮ್ಕಿಗೆ ಬೆಚ್ಚಿದ ಸಿರಿಯಾ| ರಾತ್ರಿ ನುಗ್ತಿವಿ ಎಂದ ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್| ಕುರ್ದಿಷ್ ಹೋರಾಟಗಾರರ ನೆಲೆಗಳ ಮೇಲೆ ದಾಳಿ ಮಾಡುವ ಬೆದರಿಕೆ| ಬಂಧನದಲ್ಲಿರುವ ಐಸಿಸ್ ಉಗ್ರರನ್ನು ಬಿಡುಗಡೆಗೊಳಿಸುವುದಾಗಿ ಹೇಳಿದ ಎರ್ಡೋಗಾನ್| ಉತ್ತರ ಸಿರಿಯಾದೊಳಗೆ ಸೇನೆ ನುಗ್ಗಿಸಲು ಟರ್ಕಿ ಚಿಂತನೆ|


ಇಸ್ತಾಂಬುಲ್(ಅ.07): ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎಂಬಂತೆ ಇಸ್ಲಾಮಿಕ್ ಬಂಡುಕೋರರ ಹಾವಳಿ ಇನ್ನೇನು ತಪ್ಪಿತು ಎಂದು ನಿಟ್ಟುಸಿರು ಬಿಟ್ಟ ಸಿರಿಯಾಗೆ ಇದೀಗ ಟರ್ಕಿ ದಾಳಿಯ ಭೀತಿ ಎದುರಾಗಿದೆ.

ಐಸಿಸ್ ಉಗ್ರರನ್ನು ಸದೆಬಡಿಯುವಲ್ಲಿ ಅಮೆರಿಕನ್ ಸೇನೆ ಮತ್ತು ಕುರ್ದಿಷ್ ಹೋರಾಟಗಾರರಿಗೆ ಬೆಂಬಲ ನೀಡಿದ್ದ ಟರ್ಕಿ, ಇದೀಗ ಕುರ್ದಿಷ್ ಹೋರಾಟಗಾರರ ವಿರುದ್ಧ ತಿರುಗಿ ಬಿದ್ದಿದೆ.

Latest Videos

ಕುರ್ದಿಷ್ ಹೋರಾಟಗಾರರ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆಯೊಡ್ಡಿರುವ ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್, ರಾತ್ರಿ ವೇಳೆ ಎಚ್ಚರಿಕೆಯೂ ನೀಡದೇ ಒಳ ನುಗ್ಗುವುದಾಗಿ ಗುಡುಗಿದ್ದಾರೆ.

ಅಲ್ಲದೇ ಟರ್ಕಿ ವಶದಲ್ಲಿರುವ ಐಸಿಸ್ ಉಗ್ರರನ್ನು ಬಬಿಡುಗಡೆಗೊಳಿಸುವುದಾಗಿ ಬೆದರಿಸಿರುವ ಎರ್ಡೋಗಾನ್, ಟರ್ಕಿ ಗಡಿಯೊಳಗೆ ಕಾರ್ಯಾಚರಣೆ ನಡೆಸುತ್ತಿರುವ ಕುರ್ದಿಷ್ ಹೋರಾಟಗಾರರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದಿದ್ದಾರೆ.

ಇನ್ನು ಟರ್ಕಿ ಅಧ್ಯಕ್ಷರ ಬೆದರಿಕೆಗೆ ಪ್ರತಿಕ್ರಿಯೆ ನೀಡಿರುವ ಕುರ್ದಿಷ್ ಸೇನೆ, ಟರ್ಕಿ ನಡೆಯಿಂದ ಐಸಿಸ್ ಉಗ್ರರು ಮತ್ತೆ ಬಲ ಪಡೆಯಲಿದ್ದು, ಇಷ್ಟು ವರ್ಷಗಳ ಹೋರಾಟ ಮಣ್ಣುಪಾಲಾಗಲಿದೆ ಎಂದು ಎಚ್ಚರಿಸಿದೆ.

ಇದೇ ವೇಳೆ ಟರ್ಕಿ ತನ್ನ ಸೇನೆಯನ್ನು ಉತ್ತರ ಸಿರಿಯಾದೊಳಗೆ ನುಗ್ಗಿಸಲು ಸಿದ್ಧತೆ ನಡೆಸಿದೆ ಎಂದು ಅಮೆರಿಕ ಕೂಡ ಮಾಹಿತಿ ನೀಡಿದ್ದು, ಮತ್ತೊಂದು ದೀರ್ಘ ಸಮರಕ್ಕೆ ಮುನ್ನುಡಿ ಬರೆಯುವ ಲಕ್ಷಣ ಕಾಣುತ್ತಿದೆ.

click me!