ಯೋಗವು ಧರ್ಮ, ನಂಬಿಕೆ ಎಲ್ಲವನ್ನೂ ಮೀರಿದ್ದು : ಪ್ರಧಾನಿ ಮೋದಿ

By Web DeskFirst Published Jun 21, 2019, 2:42 PM IST
Highlights

ವಿಶ್ವದಾದ್ಯಂತ ಇದಂದು 5ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರಾಂಚಿಯಲ್ಲಿ ನಡೆದ ಯೋಗ ದಿನದಲ್ಲಿ ಪಾಲ್ಗೊಂಡು ಯೋಗದ ಮಹತ್ವಚನ್ನು ಜನತೆಗೆ ತಿಳಿಸಿದರು. 

ರಾಂಚಿ [ಜೂ.21] : ಯೋಗವು ಎಲ್ಲಕ್ಕಿಂತಲೂ ಮಿಗಿಲಾದುದು. ಆದ್ದರಿಂದ ಎಲ್ಲರೂ ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು  ಪ್ರಧಾನಿ ನರೇಂದ್ರ ಮೋದಿ ಹೇಳಿದರು.

5ನೇ ವಿಶ್ವ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ 40 ಸಾವಿರ ಜನರ ಸಮ್ಮುಖದಲ್ಲಿ ರಾಂಚಿಯಲ್ಲಿ ಯೋಗ ಮಾಡಿ ಮಾತನಾಡಿದ್ದು,  ಈ ವೇಳೆ ಯೋಗವನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು. 

ಧ್ಯಾನ, ಮನಸ್ಸು: ಯೋಗ ದಿನಾಚರಣೆ ನಡೆದು ಬಂದ ಹಾದಿ

ಯೋಗವನ್ನು ನಗರ, ಹಳ್ಳಿ, ಆದಿವಾಸಿ ಸಮುದಾಯಗಳು ಇರುವ ಪ್ರದೇಶಗಳಿಗೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡುತಿದ್ದೇವೆ.  ಯೋಗಕ್ಕೆ ಯಾವುದೇ ಧರ್ಮವಿಲ್ಲ.  ಜಾತಿ ಇಲ್ಲ, ಲಿಂಗವಿಲ್ಲ, ಸಮುದಾಯವಿಲ್ಲ. ಯೋಗ ಎನ್ನುವುದು ಇದೆಲ್ಲವನ್ನೂ ಕೂಡ ಮೀರಿದ್ದು ಎಂದು ಪ್ರಧಾನಿ ಮೋದಿ ಯೋಗ ಅಳವಡಿಕೆಗೆ ಕರೆ ನೀಡಿದರು. 

ಯೋಗ: ನಿಮಗೆ ಗೊತ್ತಿರದ ವಿಶೇಷತೆಗಳು

ಭಾರತದಲ್ಲಿ ಜನಿಸಿದ ಯೋಗವು ಅನಾದಿ ಕಾಲದಿಂದಲೂ ಇರುವಂತದ್ದು. ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗವೆಂದಿಗೂ ಪೂರಕ. ಯೋಗದಿಂದ ಹೆಚ್ಚಿನ ಜ್ಞಾನ ಸಂಪಾದನೆ ಮಾಡಬಹುದು.

ಯೋಗ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದ್ದು, ಯುಜನತೆ ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.  ಆಲ್ಕೋಹಾಲ್ ಸೇವನೆ.ಡಯಾಬಿಟೀಸ್ ನಂತಹ ರೋಗಗಳು ಇಂದಿನ ದಿನದಲ್ಲಿ ಸಾಮಾನ್ಯವಾಗಿದ್ದು, ಈ ಎಲ್ಲಾ ರೋಗಗಳಿಗೂ ಯೋಗ ಮದ್ದಾಗುವ ಸಾಮರ್ಥ್ಯ ಹೊಂದಿದೆ. 

ಹೃದಯದ ಆರೋಗ್ಯಕ್ಕೆ ಪೂರಕ ಆಸನಗಳಿವು

ಶಾಂತಿ ಮತ್ತು ಸೌಹಾರ್ಧತೆಗೂ ಯೋಗಕ್ಕೂ ನಿಕಟ ಬಂಧವಿದ್ದು, ವಿಶ್ವದಾದ್ಯಂತ ಜನರು ಯೋಗ ಅಳವಡಿಸಿಕೊಳ್ಳಲಿ ಎಂದರು.

"

click me!