ಬಿಜೆಪಿ ಸೇರಿದ 4 TDP ಸಂಸದರು: ನಾಯ್ಡು ಫುಲ್ ಗರಂ!

By Web DeskFirst Published Jun 21, 2019, 1:10 PM IST
Highlights

Z ಪ್ಲಸ್ ಭದ್ರತೆ ಇದ್ದರೂ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಚೆಕ್, ಕಚೇರಿ ಹಾಗೂ ಮನೆಯನ್ನು ಬಿಟ್ಟುಕೊಂಡು ಈಗಾಗಲೇ ಒಂದೊಂದಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಿರುವ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಪಕ್ಷದ ರಾಜ್ಯ ಸಭಾ ಸದಸ್ಯರನ್ನೂ ಕಳೆದುಕೊಂಡು, ವಿಚಲಿತರಾಗಿದ್ದಾರೆ.

ನವದೆಹಲಿ [ಜೂ.21]: ಪ್ರಧಾನಿ ಪಟ್ಟ ಏರುವ ಕನಸು ಕಾಣುತ್ತಿದ್ದ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬೂ ನಾಯ್ಡುಗೆ ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನೂ ಬಿಡಬೇಕಾಯಿತು. ಜನರು ಹೀನಾಯವಾಗಿ ಸೋಲಿಸಿ, ದೊಡ್ಡ ಪೆಟ್ಟು ಕೊಟ್ಟಿದ್ದಾರೆ. ಅಲ್ಲದೇ ಜಗನ್ ಮೋಹನ್ ರೆಡ್ಡಿ ಆಂಧ್ರ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಲ್ಲೇ, ಝಡ್ ಪ್ಲಸ್ ಸೆಕ್ಯುರಿಟಿ ಇದ್ದರೂ ವಿಮಾನ ನಿಲ್ದಾಣದಲ್ಲಿ ಶ್ರೀ ಸಾಮಾನ್ಯನಂತೆ ಫ್ರಿಸ್ಕಿಂಗ್ ಮಾಡಿಸಿಕೊಳ್ಳಬೇಕಾಯಿತು. ನಂತರ ತಮ್ಮ ನೆಚ್ಚಿನ ಮನೆ, ಕಚೇರಿಯನ್ನೂ ಬಿಟ್ಟು ಕೊಡಬೇಕಾಯಿತು. 

ಇದೀಗ ಇದ್ದ ನಾಲ್ವರು ರಾಜ್ಯಸಭಾ ಸಂಸದರೂ ಬಿಜೆಪಿಗೆ ಸೇರಲು ಸಿದ್ಧರಾಗುತ್ತಿದ್ದು, ಏನು ಮಾಡಬೇಕೆಂದು ತೋಚದ ಚಂದ್ರಬಾಬು ನಾಯ್ಡು ಫುಲ್ ಗರಂ ಆಗಿದ್ದಾರೆ. 'ನಮ್ಮ ಪಕ್ಷದ ಶಕ್ತಿ ಕುಂದಿಸಲು ಬಿಜೆಪಿ ಯತ್ನಿಸುತ್ತಿದೆ. ಉದ್ದೇಶಪೂರ್ವಕವಾಗಿ ನಾಯಕರಿಂದಲೇ ಇಂತಹ ಕೃತ್ಯ ನಡೆಯುತ್ತಿದೆ,' ಎಂದು ಅವರು ಗೋಳಾಡುತ್ತಿದ್ದಾರೆ.

'ಬಿಜೆಪಿ ಇಂತಹ ಯತ್ನ ಮಾಡುತ್ತಿರುವುದು ಖಂಡನೀಯ, ಇಂತಹ ಕೃತ್ಯ ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಇಂತಹ ಯತ್ನಗಳು ನಡೆದಿವೆ.  ಆಂಧ್ರ ಪ್ರದೇಶದ ಹಿತದೃಷ್ಟಿಯಿಂದ ನಾವು ನಿರಂತರವಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬಂದೆವು. ಇದರಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ,' ಎಂದರು.

 

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ ಕಲ್ಪಿಸಲು ಕೇಂದ್ರ ಮಂತ್ರಿ ಸ್ಥಾನವನ್ನೂ ತೊರೆದು ಹೊರಬಂದೆವು. ಆದರೆ ಈಗ ನಮ್ಮ ಪಕ್ಷವರನ್ನು ಸೆಳೆಯುವ ಮೂಲಕ ಪಕ್ಷದ ಸಾಮರ್ಥ್ಯವನ್ನು ಕುಂದಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಸಿಎಂ ಕುರ್ಚಿ ಹೋಯ್ತಿ, ಮನೆಯೂ ಖಾಲಿ ಮಾಡ ಬೇಕು

ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಆಂಧ್ರದಲ್ಲಿ ಟಿಡಿಪಿ ಅತೀ ಕಡಿಮೆ ಸಂಖ್ಯೆ ಸ್ಥಾನ ಪಡೆದು ಸೋಲನ್ನು ಅನುಭವಿಸಿದ್ದು, ಇದಾದ ಬೆನ್ನಲ್ಲೇ ಹಲವು ಮುಖಂಡರು ಪಕ್ಷಾಂತರ ಮಾಡಿದ್ದರು.  ಇದೀಗ ಮತ್ತೆ ನಾಲ್ವರು ರಾಜ್ಯಸಭಾ ಸಂಸದರು ಬಿಜೆಪಿ ಕೈ ಹಿಡಿದಿದ್ದರು.

click me!