ಪ್ರಧಾನಿ ಮೋದಿ ‘ಫಾದರ್ ಆಫ್ ಇಂಡಿಯಾ’ ಇದ್ದಂಗೆ ಎಂದ ಟ್ರಂಪ್!

By Web Desk  |  First Published Sep 25, 2019, 4:06 PM IST

ಪ್ರಧಾನಿ ಮೋದಿ ‘ಫಾದರ್ ಆಫ್ ಇಂಡಿಯಾ’ ಇದ್ದಂಗೆ ಎಂದ ಟ್ರಂಪ್| ‘ಪ್ರಧಾನಿ ಮೋದಿ ಭಾರತವನ್ನು ಒಗ್ಗಟ್ಟಿನ ಪಥದಲ್ಲಿ ಮುನ್ನಡೆಸುತ್ತಿದ್ದಾರೆ’| ಈ ಹಿಂದೆ ಭಾರತ ಗೊಂದಲದ ಗೂಡಾಗಿತ್ತು ಎಂದ ಅಮೆರಿಕ ಅಧ್ಯಕ್ಷ| ಮೋದಿ ಅವರ ಕೈಯಲ್ಲಿ ಭಾರತ ಸುರಕ್ಷಿತವಾಗಿದೆ ಎಂದ ಟ್ರಂಪ್| 


ನ್ಯೂಯಾರ್ಕ್(ಸೆ.25): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಫಾದರ್ ಆಫ್ ಇಂಡಿಯಾ’ ಎಂದು ಸಂಭೋಧಿಸಿದ್ದಾರೆ.

ಭಾರತವನ್ನು ಒಗ್ಗಟ್ಟಿನ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ, ತಂದೆಯ ಸ್ಥಾನದಲ್ಲಿ ನಿಮತು ಭಾರತವನ್ನು ಪೋಷಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

Tap to resize

Latest Videos

undefined

ನಾನು ಈ ಹಿಂದೆ ಬಲ್ಲಂತೆ ಭಾರತದ ಅನೇಕ ಭಿನ್ನಾಭಿಪ್ರಾಯಗಳ ಗೂಡಾಗಿದ್ದು, ಪರಸ್ಪರ ಅಪನಂಬಿಕೆ ಹಾಗೂ ಗೊಂದಲ ಮನೆ ಮಾಡಿತ್ತು. ಆದರೆ ಮೋದಿ ತಂದೆಯ ಸ್ಥಾನದಲ್ಲಿ ನಿಂತು ದೇಶವನ್ನು ಒಗ್ಗೂಡಿಸಿದ್ದಾರೆ ಎಂದು ಟ್ರಂಪ್ ನುಡಿದಿದ್ದಾರೆ.

ಮೋದಿ ಅವರ ಕೈಯಲ್ಲಿ ಭಾರತ ಸುರಕ್ಷಿತವಾಗಿದ್ದು, ಭವಿಷ್ಯದತ್ತ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ಅಮೆರಿಕ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

click me!