ಅನರ್ಹ ಪರ ಮುಕುಲ್ ರೋಹಟಗಿ ವಾದ ಅಂತ್ಯ: ಒಂದುವರೆ ತಾಸು ವಾದದ ಹೈಲೆಟ್ಸ್

By Web Desk  |  First Published Sep 25, 2019, 3:16 PM IST

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಅನರ್ಹ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಸುಮಾರು ಒಂದುವರೆ ಗಂಟೆ ವಾದ ಮಂಡಿಸಿದ್ದಾರೆ. ಹಾಗಾದ್ರೆ ರೋಹಟಗಿ ಏನೆಲ್ಲ  ವಾದ ಮಾಡಿದ್ದಾರೆ ಎನ್ನುವ ಸಂಕ್ಷಿಪ್ತ ಮಾಹಿತಿ ಈ ಕೇಳಗಿನಂತಿದೆ. 


ನವದೆಹಲಿ/ಬೆಂಗಳೂರು, (ಸೆ.25): ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಇಂದು (ಬುಧವಾರ) ಬೆಳಗ್ಗೆ 11ಗಂಟೆಯಿಂದ ಸುಪ್ರೀಂಕೋರ್ಟ್‌ನಲ್ಲಿ  ನಡೆಯುತ್ತಿದೆ. ಅನರ್ಹ ಶಾಸಕರ ಪರ ಮುಕುಲ್ ರೋಹಟಗಿ, ಸುಮಾರು ಒಂದುವರೆ ಗಂಟೆ ಪ್ರಬಲ ವಾದ ಮಂಡನೆ ಮಾಡಿದರು.

ನನ್ನ ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆಯಲ್ಲ: ಸುಪ್ರೀಂ ತೀರ್ಪು ಮುಂಚೆ ಅನರ್ಹ ಶಾಸಕ ಅಚ್ಚರಿ ಹೇಳಿಕೆ

Tap to resize

Latest Videos

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮುಕುಲ್ ರೋಹಟಗಿ ಏನೆಲ್ಲ ವಾದ ಮಾಡಿದ್ದರು ಎನ್ನುವ ಸಂಕ್ಷಿಪ್ತ ಮಾಹಿತಿ ಈ ಕೇಳಗಿನಂತಿದೆ. 

ರೋಹಟಗಿ ವಾದದ ಹೈಲೆಟ್ಸ್

* ಈಗಾಗಲೇ 8 ವಾರ ಕಳೆದುಹೋಗಿದೆ, ತುರ್ತಾಗಿ ಅರ್ಜಿ ಇತ್ಯರ್ಥಪಡಿಸಿ. ಸೆ.30 ನಾಮಪತ್ರ ಸಲ್ಲಿಸಲು ಕೊನೆಯ ದಿನ.
ಆನಂದ್​ ಸಿಂಗ್ ಎಲ್ಲರಿಗಿಂತ ಮೊದಲೇ ರಾಜೀನಾಮೆ ಸಲ್ಲಿಸಿದ್ದಾರೆ. ಆದರೂ, ಆನಂದ್ ಸಿಂಗ್ ರಾಜೀನಾಮೆಯನ್ನೂ ಅಂಗೀಕರಿಸಿಲ್ಲ. ಸ್ಪೀಕರ್ ನ್ಯಾಯಯುತವಾಗಿ ಕೆಲಸ ಮಾಡಿಲ್ಲ. ರೋಷನ್​ ಬೇಗ್​ ಪ್ರಕರಣದಲ್ಲೂ ಸ್ಪೀಕರ್ ಹೀಗೆಯೇ ಮಾಡಿದ್ದಾರೆ. ಶಾಸಕರ ರಾಜೀನಾಮೆ ಅಂಗೀಕರಿಸಿದೇ ಅನರ್ಹಗೊಳಿಸಿದ್ದಾರೆ
---------------------
* ರಾಜೀನಾಮೆ ಮತ್ತು ಅನರ್ಹತೆ ಪ್ರಕರಣ ಎರಡನ್ನೂ ತೀರ್ಮಾನಿಸುವುದಾಗಿ ಸ್ಪೀಕರ್ ಹೇಳಿದ್ದರು. ಎಲ್ಲರೂ ಸ್ವಯಂ ಪ್ರೇರಿತರಾಗಿಯೇ ರಾಜೀನಾಮೆ ಸಲ್ಲಿಸಿದ್ದರು. ಆದರೂ, ಸ್ಪೀಕರ್ ಉದ್ದೇಶ ಪೂರ್ವಕವಾಗಿಯೇ ವಿಳಂಬ ಮಾಡಿದ್ದಾರೆ. ಯಾವುದೇ ಒತ್ತಡಕ್ಕೆ ಒಳಗಾಗಿ ಶಾಸಕರು ರಾಜೀನಾಮೆ ಸಲ್ಲಿಸಿಲ್ಲ. ಶಾಸಕರು ರಾಜೀನಾಮೆಗೆ  ಸೂಕ್ತ, ಸಮಂಜಸ ಕಾರಣ ನೀಡಿದರೂ ಅನರ್ಹಗೊಳಿಸಿದ್ದಾರೆ. ರಾಜೀನಾಮೆ ಪ್ರಕ್ರಿಯೆಯನ್ನು ಎಲ್ಲರೂ ಪಾಲಿಸಿದ್ದಾರೆ, ಖುದ್ದು ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕರು ಯಾವುದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ
---------------------
* ಸ್ಪೀಕರ್​ ರಾಜೀನಾಮೆ ತಿರಸ್ಕರಿಸಿ, ಅನರ್ಹತೆ ದೂರಿನ ಮೇಲೆ ಕ್ರಮ ಕೈಗೊಂಡಿದ್ದಾರೆ. ರಾಜೀನಾಮೆ ಸ್ವಯಂ ಇಚ್ಚೆ ಮತ್ತು ನೈಜ ಎಂಬುದಷ್ಟೇ ಗಮನಿಸಬೇಕು. ಆದರೆ, ಸ್ಪೀಕರ್ ಶಾಸಕರ ಉದ್ದೇಶವನ್ನಷ್ಟೇ ಪರಿಗಣಿಸಿದ್ದಾರೆ
------------
* ಶಾಸಕರು ಅಧಿವೇಶನದಲ್ಲಿ ಭಾಗವಹಿಸುವ ಬಗ್ಗೆ ವಿವೇಚನಾಧಿಕಾರವನ್ನ ಕೋರ್ಟ್ ನೀಡಿತ್ತು. ಶಾಸಕರು ಮುಂಬೈಗೆ ವಿಶೇಷ ವಿಮಾನದಲ್ಲಿ ಹೋದರು . ಖುದ್ದಾಗಿ ನನಗೆ ರಾಜೀನಾಮೆ ಸಲ್ಲಿಸಿಲ್ಲ ಎಂದು ಸ್ಪೀಕರ್ ನೆಪ ಹೇಳಿದರು. ನಂತರ ಶಾಸಕರು ಖುದ್ದಾಗಿ ರಾಜೀನಾಮೆ ಸಲ್ಲಿಸಿದರೂ ಸ್ಪೀಕರ್ ಅಂಗೀಕರಿಸಿಲ್ಲ. ಶಾಸಕರು ಸುಪ್ರೀಂಕೋರ್ಟ್ ಆದೇಶದಂತೆಯೇ ನಡೆದುಕೊಂಡಿದ್ದಾರೆ
-------------
ಶಾಸಕರ ಮೇಲೆ ಒತ್ತಡ ಹೇರಬಾರದೆಂದು ಕೋರ್ಟ್ ಹೇಳಿತ್ತು. ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದು ಮೊದಲು ನಿರಾಕರಿಸಿದರು
2ನೇ ಬಾರಿ ಶಾಸಕರು ಕ್ರಮವಾಗಿ ರಾಜೀನಾಮೆ ಸಲ್ಲಿಸಿದರೂ ಅಂಗೀಕರಿಸಲಿಲ್ಲ
---------------
ಒತ್ತಡದಿಂದಲೇ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂಬುದು ಸ್ಪೀಕರ್ ವಾದ. ಆದರೆ, ಶಾಸಕರು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ
ಶಾಸಕರು ಸ್ವಯಂಪ್ರೇರಿತವಾಗಿ, ಖುದ್ದು ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಿದ್ದಾರೆ
----------------
191/2 ಪ್ರಕಾರ ಅನರ್ಹ ಮಾಡಿದರೆ ಮರು ಆಯ್ಕೆ ಬಗ್ಗೆ ಸ್ಪಷ್ಟನೆ ಇಲ್ಲ. ಇಲ್ಲಿ ಶಾಸಕರು ಕ್ರಿಮಿನಲ್​ ಪ್ರಕರಣದಲ್ಲಿ ಜೈಲು ಸೇರಿರಬಹುದು
ಇಲ್ಲವೇ ಮಾನಸಿಕವಾಗಿ ಅಸ್ವಸ್ಥರಾಗಿರಬಹುದು
-------------
ರಾಜೀನಾಮೆಗೆ ಏನೇ ಕಾರಣ ಇರಲಿ, ಅಂಗೀಕರಿಸುವುದು ಸ್ಪೀಕರ್​ ಧರ್ಮ. ಸಂವಿಧಾನದ ಆರ್ಟಿಕಲ್ 191/1 ಓದಿದ ವಕೀಲ ರೋಹಟಗಿ. ಕೆಲವು ಕಾರಣಗಳಿಂದ ಅನರ್ಹ ಮಾಡಿದರೆ ಸ್ಪರ್ಧೆ ಸಾಧ್ಯವಿಲ್ಲ. ಆದರೆ, ಎಲ್ಲ ಅನರ್ಹರಿಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು
-------------
ಸಂವಿಧಾನದ 10ನೇ ಶೆಡ್ಯೂಲ್ ಉಲ್ಲೇಖಿಸಿದ ರೋಹಟಗಿ. ರಾಜೀನಾಮೆ, ಅನರ್ಹತೆ ಬಗ್ಗೆ ತೀರ್ಮಾನಿಸಲು ಸ್ಪೀಕರ್​ ಅನುಸರಿಸಬೇಕಾದ ಕ್ರಮದ ಬಗ್ಗೆ ವಿವರಣೆ. ರಾಜೀನಾಮೆ ಸ್ವಇಚ್ಚೆ ಹಾಗೂ ನೈಜ ಎಂಬುದನ್ನು ಕೋರ್ಟ ಪರಿಗಣಿಸಬೇಕು
-----------------------
ಪಕ್ಷ ವಿರೋಧಿ ಚಟುವಟಿಕೆ ಈ ಪ್ರಕರಣದಲ್ಲಿ ಅನ್ವಯ ಆಗಲ್ಲ. ಏಕೆಂದರೆ ಶಾಸಕರು ಸ್ವಇಚ್ಚೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆ
ಯಾವುದೇ ಒತ್ತಡಕ್ಕೆ ಒಳಗಾಗಿ ಶಾಸಕರು ರಾಜೀನಾಮೆ ಸಲ್ಲಿಸಿಲ್ಲ
----------------------
361/B ಪ್ರಕಾರ ರಾಜೀನಾಮೆ ಸಲ್ಲಿಸಿ 6 ತಿಂಗಳೊಳಗೆ ಮಂತ್ರಿಯಾದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ
--------------------
ಈ ಪ್ರಕರಣದಲ್ಲೂ ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇದೆ. ರಾಜೀನಾಮೆ ಸರಿ ಇದ್ದರೆ ಅಂಗೀಕರಿಸಬೇಕು, ಅನರ್ಹಗೊಳಿಸಬಾರದು. ಸಂವಿಧಾನದ 10ನೇ ಶೆಡ್ಯೂಲ್​ನಲ್ಲಿ ಅನರ್ಹತೆಗೆ ಅವಕಾಶವೇ ಇಲ್ಲ
---------------
ಸ್ವಇಚ್ಚೆಯಿಂದ ರಾಜೀನಾಮೆ ಸಲ್ಲಿಸಿ ರಾಜೀನಾಮೆ ಚುನಾವಣೆಗೆ ಸ್ಪರ್ಧಿಸುವ ಹಕ್ಕಿದೆ. ಮುಂಬೈಗೆ ಸ್ಪೆಷಲ್ ಫ್ಲೈಟ್​ನಲ್ಲಿ ಹೋಗಿದ್ರೆ ಎಂದು ಹೇಳಿ ರಾಜೀನಾಮೆ ತಿರಸ್ಕರಿಸುವಂತಿಲ್ಲ. ಶಾಸಕರಿಗೆ ಮರು ಆಯ್ಕೆಯಾಗುವ ಎಲ್ಲ ಅವಕಾಶ ಇದೆ
------------------------
ಚುನಾವಣೆಗೆ ತಡೆ ನೀಡಿ, ಇಲ್ಲವೇ ಸ್ಪರ್ಧಿಸಲು ಅವಕಾಶ ಕೊಡಿ. ಪ್ರಕರಣ ಇತ್ಯರ್ಥವಾಗುವವರೆಗೂ ಚುನಾವಣೆಗೆ ತಡೆ ನೀಡಿ ಸಂವಿಧಾನದ ಆರ್ಟಿಕಲ್ 164/1B ಪ್ರಕಾರ ಅನರ್ಹರು ಚುನಾವಣೆಗೆ ಸ್ಪರ್ಧಿಸುವ ಅವಕಾಶ ಇದೆ.
-------------
ಆದರೆ ಸ್ಪೀಕರ್ 2023ರವರೆಗೆ ಚುನಾವಣೆ ಸ್ಪರ್ಧಿಸುವಂತಿಲ್ಲ ಎಂದಿದ್ದಾರೆ. ಮೊದಲು ಉಪ ಚುನಾವಣೆಗೆ ತಡೆ ನೀಡಿ - ರೋಹಟಗಿ 
ನಾಮಪತ್ರ ಸಲ್ಲಿಸಲು ಇನ್ನು ಕೇವಲ 5 ದಿನ ಮಾತ್ರ ಇದೆ.
-------
ಚುನಾವಣಾ ಆಯೋಗ ಪ್ರತಿವಾದಿಯಾಗಿಸುವಂತೆ ಅನರ್ಹರು ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲೂ ಆಯೋಗವನ್ನು ಪ್ರತಿವಾದಿ ಮಾಡುವುದು ಸೂಕ್ತ
----------------
ರಾಜೀನಾಮೆ ನೈಜವಲ್ಲ, ಸ್ವಇಚ್ಚೆಯಿಂದ ಕೂಡಿಲ್ಲ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ರಾಜೀನಾಮೆ ತಿರಸ್ಕರಿಸಲೂ ಸ್ಪೀಕರ್ ಸಮರ್ಪಕ ಉತ್ತರ ನೀಡಿಲ್ಲ. ವಿಶೇಷ ವಿಮಾನದಲ್ಲಿ ಹೋಗಿದ್ದು ರಾಜೀನಾಮೆ ತಿರಸ್ಕಾರಕ್ಕೆ ಕಾರಣವಾಗಲ್ಲ
-----------------
ಸಾಕ್ಷ್ಯಗಳೇ ಇಲ್ಲದೇ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಚುನಾವಣಾ ಪ್ರಕ್ರಿಯೆಯನ್ನು 2 ರಿಂದ 3 ತಿಂಗಳು ಮುಂದೂಡಿ ಇಲ್ಲವೇ ಚುನಾವಣೆಗೆ ತಡೆ ನೀಡಿ ಅಥವಾ ಅನರ್ಹರಿಗೆ ಸ್ಪರ್ಧಿಸಲು ಅವಕಾಶ ಕೊಡಿ
----------------
ಶಾಸಕರು ಈಗಿರುವ ಪಕ್ಷದಿಂದ ಬೇಸತ್ತಿರಬಹುದು. ಬೇರೆ ಪಕ್ಷ ಸೇರಲು ಅಣಿಯಾಗಿರಬಹುದು ಅಥವಾ ತಾವೇ ಹೊಸ ಪಕ್ಷ ಕಟ್ಟಬಹುದು
ಆದರೆ ರಾಜೀನಾಮೆ ಅಂಗೀಕರಿಸದರೆ ಅನರ್ಹ ಮಾಡಿದ್ದು ಸರಿಯಲ್ಲ. ಮೊದಲು ಶಾಸಕರು ರಾಜೀನಾಮೆ ನೀಡಿದ್ದಾರೆ, ಅನಂತರ ಅನರ್ಹತೆ ದೂರು ಸಲ್ಲಿಕೆಯಾಗಿದೆ. ಸ್ಪೀಕರ್ ಮೊದಲು ರಾಜೀನಾಮೆ ಬಗ್ಗೆ ತೀರ್ಮಾನಿಸಬೇಕಿತ್ತು. ಆದರೆ ರಾಜೀನಾಮೆ ಅಂಗೀಕರಿಸದರೇ ಅನರ್ಹಗೊಳಿಸಿದ್ದು ಸರಿಯಲ್ಲ
----------------
ಚುನಾವಣಾ ಅಧಿಸೂಚನೆಯನ್ನು ನಾವು ಪ್ರಶ್ನಿಸುತ್ತಿಲ್ಲ. ನಾವು ಸ್ಪೀಕರ್ ಆದೇಶವನ್ನಷ್ಟೇ ಪ್ರಶ್ನಿಸುತ್ತಿದ್ದೇವೆ. ಅನರ್ಹರಿಗೆ ಚುನಾವಣೆಗೆ ಸ್ಪರ್ಧೆಗೆ ಅವಕಾಶ ಕೊಡಿ
---------------------
ಶಾಸಕರು ಎಲ್ಲಿ ರಾಜೀನಾಮೆ ನೀಡಿದ್ದಾರೆ ಅನ್ನೋದು ಮುಖ್ಯವಲ್ಲ . ನಿಯಮ ಉಲ್ಲಂಘಿಸಿ ಅನರ್ಹಗೊಳಿಸಿದರೆ ಹೇಗೆ ಅನ್ನೋದು ಪ್ರಶ್ನೆ
------------------
2023ರವರೆಗೆ ಸ್ಪರ್ಧಿಸದಂತೆ ಸ್ಪೀಕರ್ ತೀರ್ಪು ನೀಡಿದ್ದಾರೆ. ಹೀಗಾಗಿ, ಚುನಾವಣೆಗೆ ತಡೆ ನೀಡುವಂತೆ ನಮ್ಮ ಮನವಿ. ಹಿಂದಿನ ಕೋರ್ಟ್ ಆದೇಶಗಳನ್ನು ಉಲ್ಲೇಖಸಿದ ರೋಹಟಗಿ
------------------
ಶಾಸಕರಿಗೆ ಕೇವಲ 3 ದಿನಗಳ ನೋಟಿಸ್​ ನೀಡಿ ಅನರ್ಹಗೊಳಿಸಿದ್ದಾರೆ. ಕನಿಷ್ಟ ದಾಖಲೆಗಳನ್ನು ಸಂಗ್ರಹಿಸಲು ಕೂಡ ಸಮಯಾವಕಾಶ ನೀಡಲ್ಲ. ನಿಯಮದ ಪ್ರಕಾರ 7 ದಿನಗಳ ಸಮಯ ನೀಡಲೇ ಬೇಕಿತ್ತು
------------------
ಶಾಸಕರ ರಾಜೀನಾಮೆ ಬಗ್ಗೆ ರಾಜ್ಯಪಾಲರ ಗಮನಕ್ಕೂ ತರಲಾಗಿದೆ. ಶಾಸಕರು ಅಭಿಪ್ರಾಯ ಮಂಡಿಸಲು ಸ್ಪೀಕರ್ ಅವಕಾಶ ನೀಡಿಲ್ಲ
ಇಡೀ ಪ್ರಕರಣದಲ್ಲಿ ಸ್ಪೀಕರ್​ ದುರುದ್ದೇಶದಿಂದ ವರ್ತಿಸಿದ್ದಾರೆ. ಇದು ಕಾನೂನು ಬಾಹಿರವಲ್ಲದೇ ಮತ್ತೇನು ?
------------------
ರಾಜೀನಾಮೆ ವಾಪಸ್ ಪಡೆಯುವಂತೆ ಶಾಸಕರ ಮೇಲೆ ಒತ್ತಡ ಹೇರಲಾಗಿದೆ. ರಾಜೀನಾಮೆ ಹಿಂಪಡೆಯಲು ಒಪ್ಪದಿದ್ದಾಗ ಅನರ್ಹತೆ ಅಸ್ತ್ರ ಪ್ರಯೋಗಿಸಿದ್ದಾರೆ. ಇದು ಅನರ್ಹತೆ ಪ್ರಕರಣ ಅಲ್ಲವೇ ಅಲ್ಲ.
------------------
ರಾಜೀನಾಮೆ ನೀಡಿರುವ ಬಗ್ಗೆ ಸರಿ-ತಪ್ಪುಗಳನ್ನು ಸುಪ್ರೀಂಕೋರ್ಟ್ ನಿರ್ಧರಿಸಲಿದೆ. ಎಲ್ಲಿಂದ ಬಂದ್ರು, ಹೇಗೆ ಬಂದ್ರು ಅನ್ನೋದು ರಾಜೀನಾಮೆ ಸ್ವೀಕಾರ, ನಕಾರಕ್ಕೆ ಕಾರಣವಲ್ಲ. ರಾಜೀನಾಮೆ ತಿರಸ್ಕಾರಕ್ಕೆ ಮುಂಬೈಗೆ ಹೋಗಿದ್ದನ್ನೇ ಕಾರಣ ಕೊಡಲಾಗಿದೆ
----------------
ರಾಜೀನಾಮೆ ಮತ್ತು ಅನರ್ಹತೆಯಿಂದ ಶಾಸಕ ಸ್ಥಾನ ತೆರವಾಗುತ್ತೆ. ಅನರ್ಹತೆ ಪ್ರಶ್ನಿಸಿರುವ ಅರ್ಜಿ ವಿಚಾರಣೆ ಬಾಕಿ ಇದೆ. ಈಗಾಗಲೇ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅನರ್ಹರು ಚುನಾವಣೆಯಿಂದ ವಂಚಿತರಾಗಬಾರದು
----------------
ಸ್ಪೀಕರ್ ಕಸ್ಟೋಡಿಯನ್ ಆಫ್​ ಹೌಸ್ ಮಾತ್ರ. ರಾಜೀನಾಮೆ ಅಂಗೀಕರಿಸುವ ಬಗ್ಗೆ ಮಾತ್ರ ಸ್ಪೀಕರ್ ಯೋಚಿಸಬೇಕಿತ್ತು. ಮುಂಬೈಗೆ ಹೋಗಿದ್ದ ಕಾರಣಕ್ಕೆ ಶಾಸಕರನ್ನು ಅನರ್ಹಗೊಳಿಸುವುದು ಎಷ್ಟುಸರಿ ?
------------------
ಶಾಸಕರ ನಿರ್ಧಾರವನ್ನು ಪ್ರಶ್ನಿಸುವ ಹಕ್ಕು ಸ್ಪೀಕರ್​ಗೆ ಇಲ್ಲ. ಸ್ಪೀಕರ್ ಹೆಡ್ ಮಾಸ್ಟರ್ ಅಲ್ಲ, ಸ್ಪೀಕರ್ ಇದನ್ನೆಲ್ಲ ಏಕೆ ಕೇಳಬೇಕು ?
ಇದೇನು ಸ್ಕೂಲಾ ? ಸರ್ಕಾರ ಬೀಳುತ್ತೋ, ಇರುತ್ತೋ ಎಂಬುದು ಸ್ಪೀಕರ್​ಗೆ ಸಂಬಂಧಿಸಿದ್ದಲ್ಲ
----------
ಸರ್ಕಾರ ಇರಬೇಕೋ ? ಇರಬಾರದೋ ಅನ್ನೋದನ್ನ ಸದನದ ಸದಸ್ಯರು ನಿರ್ಧರಿಸ್ತಾರೆ. ಮುಂಬೈಗೆ ಹೋದರು ಸರ್ಕಾರದ ಬಗ್ಗೆ ನಿರ್ಧರಿಸಲ್ಲ. ಸ್ಪೀಕರ್ ಈ ಪ್ರಕರಣದಲ್ಲಿ ತಮ್ಮ ಕಾರ್ಯ ವ್ಯಾಪ್ತಿ ಮೀರಿದ್ದಾರೆ
------------------
ಉಮೇಶ್ ಜಾಧವ್ ಪ್ರಕರಣದ ವಿವರಣೆ ನೀಡಿದ ರೋಹಟಗಿ, ಉಮೇಶ್ ಜಾಧವ್ ಅನರ್ಹತೆ ಮನವಿ ಮಾಡಲಾಗಿತ್ತು. ಆದರೆ, ಸ್ಪೀಕರ್ ಉಮೇಶ್ ಜಾಧವ್ ರಾಜೀನಾಮೆ ಅಂಗೀಕರಿಸಿದ್ರು. ಉಮೇಶ್​ ಜಾಧವ್ ಅನರ್ಹತೆ ಬಗ್ಗೆ ಸ್ಪೀಕರ್ ಆಲೋಚಿಸಲೇ ಇಲ್ಲ. ಉಮೇಶ್ ಜಾಧವ್ ಪ್ರಕರಣದಂತೆ 17 ಶಾಸಕರ ಪ್ರಕರಣದಲ್ಲೂ ಸ್ಪೀಕರ್ ನಿರ್ಧರಿಸಬೇಕಿತ್ತು
-----------------
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಪ್ರಕರಣ ಉಲ್ಲೇಖಿಸಿದ ರೋಹಟಗಿ. ನಾಗೇಂದ್ರ ಮತ್ತು ಉಮೇಶ್​ ಜಾಧವ್​ ಮೇಲೂ ಅನರ್ಹತೆ ದೂರು ದಾಖಲಾಗಿತ್ತು. ಆದರೆ, ಉಮೇಶ್ ಜಾಧವ್ ರಾಜೀನಾಮೆ ಮಾತ್ರ ಸ್ವೀಕಾರ ಆಗಿದೆ. ಇವರೆಲ್ಲ ಮೇಲೂ ಒಂದೇ ರೀತಿಯ ಆರೋಪಗಳಿದ್ದವು. ಜಾಧವ್ ಪ್ರಕರಣ ಬಿಟ್ಟು ಉಳಿದ ಯಾವ ಪ್ರಕರಣವನ್ನೂ ಸ್ಪೀಕರ್ ಇತ್ಯರ್ಥಪಡಿಸಿಲ್ಲ. ಜಾಧವ್​ ರಾಜೀನಾಮೆ ಅಂಗೀಕರಿಸಿ, ಜಾರಕಿಹೊಳಿ ಅನರ್ಹಗೊಳಿಸಲಾಗಿದೆ. ಆದರೆ, ಜಾಧವ್ ಅನರ್ಹತೆ ಬಗ್ಗೆ ಸ್ಪೀಕರ್ ಗಮನವನ್ನೇ ಹರಿಸಿಲ್ಲ
-------------------
ಒಂದೇ ಪ್ರಕರಣದಲ್ಲಿ ಸ್ಪೀಕರ್ ಸಾಕಷ್ಟು ಗೊಂದಲ ಸೃಷ್ಟಿಸಿದ್ದಾರೆ. ಎರಡೂ ಒಂದೇ ಪ್ರಕರಣ, ಆದರೆ ಸ್ಪೀಕರ್ ನಿರ್ಧಾರ ಬೇರೆ ಬೇರೆಯಾಗಿದೆ. ಸ್ಪೀಕರ್ ರಾಜಕೀಯ ಪಕ್ಷಗಳ ಪರ ವಕಾಲತ್ತು ವಹಿಸಬಾರದು . ಸರ್ಕಾರ ಪತನಗೊಳ್ಳಲಿ ಬಿಡಲಿ, ಅದು ಸ್ಪೀಕರ್​ಗೆ ಸಂಬಂಧಿಸಿದ್ದಲ್ಲ. ಸ್ಪೀಕರ್ ತಾರತಮ್ಯ ನೀತಿ ಅನುಸರಿಸಿದ್ದು ಸರಿಯಲ್ಲ. ರಾಜೀನಾಮೆಯನ್ನು ಇತ್ಯರ್ಥಪಡಿಸದೇ ಅನರ್ಹತೆ ಬಗ್ಗೆ ಕ್ರಮ ಕೈಗೊಂಡಿದ್ದಾರೆ
------------------
ಅನರ್ಹಗೊಂಡು ಜನರ ಬಳಿ ಹೋಗಲು ಇಷ್ಟವಿಲ್ಲ. ರಾಜೀನಾಮೆ ನೀಡಿದರೂ, ಅನರ್ಹರಾದರೂ ಮತದಾರರ ಬಳಿ ಹೋಗಬೇಕು
---------------------
ನಾಗೇಂದ್ರ, ಮಹೇಶ್ ಕಮಟಳ್ಳಿ, ರಮೇಶ್ ಜಾರಕಿಹೊಳಿ. ಜಾಧವ್​ ಸೇರಿ ನಾಲ್ವರ ವಿರುದ್ಧ ಅನರ್ಹತೆ ದೂರು ದಾಖಲಾಗಿತ್ತು. ಆದರೆ, ಸ್ಪೀಕರ್ ಒಬ್ಬರ ಪರ ತೀರ್ಪು ನೀಡಿದ್ದಾರೆ. ನಾಲ್ವರ ಪ್ರಕರಣ ಒಂದೇ ಆಗಿದ್ದರೂ ಸ್ಪೀಕರ್​ ಒಬ್ಬರಿಗೊಂದು ತೀರ್ಪು ನೀಡಿದ್ದಾರೆ 
-----------
ಇದು ಅಯಾ ರಾಮ್​, ಗಯಾ ರಾಮ್ ಪ್ರಕರಣ ಅಲ್ಲ. ಅನರ್ಹರು ಚುನಾವಣೆ ಎದುರಿಸಲು ಸಿದ್ಧರಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ಅನರ್ಹರಿಗೆ ಅವಕಾಶ ಕೊಡಬೇಕು. ಮೊದಲು ರಾಜೀನಾಮೆ ಬಗ್ಗೆ ವಿಚಾರಣೆ ನಡೆಸಬೇಕಿತ್ತು. ಆನಂತರವಷ್ಟೇ ಅನರ್ಹತೆ ಬಗ್ಗೆ ವಿಚಾರಣೆ ಮಾಡಬೇಕಿತ್ತು
--------------------
ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು, ಆಯೋಗದ ಹೇಳಿಕೆ ಉಲ್ಲೇಖಿಸಿದ ರೋಹಟಗಿ. ಅನರ್ಹರು ಸ್ಪರ್ಧಿಸಬಹುದು ಎಂದು ಕೇಂದ್ರ ಆಯೋಗ ಹೇಳುತ್ತೆ . ರಾಜ್ಯ ಚುನಾವಣಾ ಆಯೋಗ ಸ್ಪರ್ಧೆಗೆ ಅವಕಾಶ ಇಲ್ಲ ಎನ್ನುತ್ತದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿ ರೋಹಟಗಿ ಚುನಾವಣಾ ಆಯೋಗವೇ ಸುಪ್ರೀಂಕೋರ್ಟ್​ನಲ್ಲಿ ಸ್ಪಷ್ಟೀಕರಣ ನೀಡಿದೆ. ರಾಜ್ಯ ಚುನಾವಣಾ ಆಯುಕ್ತರ ಪತ್ರಿಕಾ ಹೇಳಿಕೆ ಉಲ್ಲೇಖಿಸಿದ ರೋಹಟಗಿ. ರಾಜ್ಯ ಚುನಾವಣಾ ಆಯುಕ್ತರ ಹೇಳಿಕೆ ಸರಿಯಲ್ಲ, ಇದು ಆಯೋಗದ ದ್ವಂದ್ವ ನೀತಿ

click me!