ಮಿಗ್-21 ತರಬೇತಿ ಯುದ್ಧ ವಿಮಾನ ಪತನ: ಇಬ್ಬರು ಪೈಲೆಟ್ ಸುರಕ್ಷಿತ!

By Web DeskFirst Published Sep 25, 2019, 3:37 PM IST
Highlights

ವಾಯುಸೇನೆಯ ಮಿಗ್-21 ತರಬೇತಿ ಯುದ್ಧ ವಿಮಾನ ಪತನ| ಮಧ್ಯಪ್ರದೇಶದ ಗ್ವಾಲಿಯರ್’ನಲ್ಲಿ ಪತನಗೊಂಡ ಮಿಗ್-21| ತರಬೇತಿ ನಿರತ ಇಬ್ಬರು ಪೈಲೆಟ್’ಗಳು ಸುರಕ್ಷಿತ| ವಿಮಾನ ಪತನಕ್ಕೆ ಸಂಬಂಧಿಸಿದಂತೆ ವಾಯುಸೇನೆ ತನಿಖೆಗೆ ಆದೇಶ| 2016ರಿಂದ ಈ ವರೆಗೆ ಒಟ್ಟು 27 ವಿಮಾನಗಳು ಅಪಘಾತದಲ್ಲಿ ಪತನ|

ಲಕ್ನೋ(ಸೆ.25): ಭಾರತೀಯ ವಾಯುಪಡೆಯ ಮಿಗ್ 21 ತರಬೇತಿ ಯುದ್ಧ ವಿಮಾನ ಪತನವಾಗಿ, ಪೈಲೆಟ್’ಗಳು ಸುರಕ್ಷಿತವಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್’ನಲ್ಲಿ ನಡೆದಿದೆ.  

ಅಪಾಯದ ಮುನ್ಸೂಚನೆ ದೊರೆಯುತ್ತಿದ್ದಂತೆ ತರಬೇತಿ ಯುದ್ಧ ವಿಮಾನದಲ್ಲಿದ್ದ ಇಬ್ಬರು ಪೈಲೆಟ್’ಗಳು  ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಸುರಕ್ಷಿತವಾಗಿ ಹೊರ ಜಿಗಿದಿದ್ದಾರೆ.

Madhya Pradesh: MiG 21 Trainer aircraft of the Indian Air Force crashed in Gwalior, today. Both the pilots, including a Group Captain and a squadron leader, managed to eject safely. pic.twitter.com/Gdmik5RhTN

— ANI (@ANI)

ಇನ್ನು ವಿಮಾನ ಪತನಕ್ಕೆ ಸಂಬಂಧಿಸಿದಂತೆ ವಾಯುಸೇನೆ ತನಿಖೆಗೆ ಆದೇಶಿಸಿದ್ದು, ಸ್ಥಳೀಯರಿಂದ ರಕ್ಷಿಸಲ್ಪಟ್ಟ ಪೈಲೆಟ್’ಗಳನ್ನು ಸೇನಾ ಆಸ್ಪತ್ರೆಗೆ ದಾಖಲಿಸಿದೆ.

2016ರಿಂದ ಈ ವರೆಗೆ ಒಟ್ಟು 27 ವಿಮಾನಗಳು ಅಪಘಾತಕ್ಕೀಡಾಗಿದ್ದು, ತರಬೇತಿ ಸಮಯದಲ್ಲಿ ಮಿಗ್-21 ಯುದ್ಧ ವಿಮಾನಗಳು ಅಪಘಾತಕ್ಕೀಡಾಗುವುದು ಸಾಮಾನ್ಯ  ಸಂಗತಿಯಾಗಿದೆ.

click me!