ಚೀನಾ-ಪಾಕ್‌ ಡೀಲ್‌, ಡಿಕೆಶಿ ಮಗಳವಿವಾಹಕ್ಕೆ ಡೇಟ್ ಫಿಕ್ಸ್: ಇಲ್ಲಿದೆ ಸೆ. 16ರ ಟಾಪ್ 10 ಸುದ್ದಿ!

By Suvarna News  |  First Published Sep 16, 2020, 6:51 PM IST

ಕೊರೋನಾತಂಕ ಮುಂದುವರೆದಿದ್ದು, ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಐವತ್ತು ಲಕ್ಷ ದಾಟಿದೆ. ಇತ್ತ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲೂ ಮಹತ್ತರ ಬೆಳವಣಿಗೆಗಳಾಗಿದ್ದು, ಮತ್ತಷ್ಟು ನಟ, ನಟಿಯರು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಇನ್ನು ಅತ್ತ ದುಬೈನಲ್ಲಿ ಐಪಿಎಲ್‌ಗೆ ಭರದ ಸಿದ್ಧತೆ ನಡೆಯುತ್ತಿದೆ . ಇನ್ನು ಚಿನ್ನದ ದರವೂ ಏರಿಕೆಯಾಗಿದ್ದು, ಬಂಗಾರ ಪ್ರಿಯರನ್ನು ಆತಂಕಕ್ಕೀಡು ಮಾಡಿದೆ. ಇಲ್ಲಿದೆ ನೋಡಿ ಸಪ್ಟೆಂಬರ್ 26ರ ಟಾಪ್ ಹತ್ತು ಸುದ್ದಿಗಳು


ವೈರಾಣು ಯುದ್ಧಕ್ಕೆ ಚೀನಾ-ಪಾಕ್‌ ಡೀಲ್‌: 5 ವರ್ಷದ ರಹಸ್ಯ ಬಟಾಬಯಲು!

ಭಾರತದ ಸಮಾನ ಶತ್ರುಗಳಾಗಿರುವ ಪಾಕಿಸ್ತಾನ ಹಾಗೂ ಚೀನಾ ದೇಶಗಳು ಹೊಸ ಸಾಂಕ್ರಾಮಿಕ ರೋಗಗಳು, ಅದರಲ್ಲೂ ವಿಶೇಷವಾಗಿ ‘ಅಂಥ್ರಾಕ್ಸ್‌’ ಕುರಿತ ಸಂಶೋಧನೆಗೆ 3 ವರ್ಷಗಳ ಒಪ್ಪಂದನ್ನು ಮಾಡಿಕೊಂಡಿವೆ. ಕೊರೋನಾ ವೈರಸ್‌ ‘ಜನಕ’ ಎಂದು ಹೇಳಲಾಗುವ ವುಹಾನ್‌ ವೈರಾಣು ಸಂಸ್ಥೆಯು, ಪಾಕಿಸ್ತಾನ ಸೇನೆಯ ರಕ್ಷಣಾ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆ (ಡೆಸ್ಟೊ) ನಡುವಿನ ಒಪ್ಪಂದ ಜಾಗತಿಕ ಮಟ್ಟದಲ್ಲಿ ಸಾಕಷ್ಟುಅನುಮಾನಗಳಿಗೆ ಕಾರಣವಾಗಿದೆ.

ಜಯಲಲಿತಾ ಆಪ್ತೆ ಶಶಿಕಲಾ ಜೈಲಿಂದ ಬಿಡುಗಡೆ ದಿನಾಂಕ ಫಿಕ್ಸ್

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರು ಬರುವ ಜನವರಿ 27ರಂದು ಶಿಕ್ಷೆ ಅವಧಿ ಮುಗಿಸಿ ಬಿಡುಗಡೆಯಾಗಲಿದ್ದಾರೆ.

Latest Videos

undefined

ಖೊಟ್ಟಿ ನಕ್ಷೆ ತೋರಿಸಿದ ಪಾಕ್‌ಗೆ ಧೋವಲ್‌ ಬಿಸಿ!

ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸದಸ್ಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಭಾರತದ ಭೂಭಾಗಗಳು ತನ್ನವೆಂದು ಸಾರುವ ಖೊಟ್ಟಿನಕ್ಷೆ ಪ್ರದರ್ಶಿಸಿ ಪಾಕಿಸ್ತಾನ ಕಿತಾಪತಿ ತೆಗೆದ ಘಟನೆ ನಡೆದಿದೆ. ತಕ್ಷಣವೇ ಈ ಸಭೆಯಿಂದ ಹೊರನಡೆಯುವ ಮೂಲಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ನೆರೆ ದೇಶಕ್ಕೆ ಭರ್ಜರಿಯಾಗಿ ಬಿಸಿ ಮುಟ್ಟಿಸಿದ್ದಾರೆ.

ಡಿಕೆಶಿ ಪುತ್ರಿ -ಸಿದ್ಧಾರ್ಥ್ ಹೆಗ್ಡೆ ಪುತ್ರನ ವಿವಾಹಕ್ಕೆ ಡೇಟ್ ಫಿಕ್ಸ್?

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪುತ್ರಿ ಐಶ್ವರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಮೊಮ್ಮಗ ಅಮಾತ್ರ್ಯ ಅವರ ವಿವಾಹ ಮುಂದಿನ ಪ್ರೇಮಿಗಳ ದಿನದಂದು (ವ್ಯಾಲಟೈನ್‌ ಡೇ) ನಡೆಯುವುದೇ?

ರಾಜಪ್ಪ ಮೇಷ್ಟ್ರು ನಮ್ಮೂರಿಗೆ ಬರದಿದ್ರೆ ನಾನು ಸಿಎಂ ಆಗ್ತಾ ಇರ್ಲಿಲ್ಲ: ಸಿದ್ದರಾಮಯ್ಯ

ಇಂದಿನ ದಿನಗಳಲ್ಲಿ ಯಾವ ಮಕ್ಕಳೂ ದಡ್ಡರಲ್ಲ. ಮಕ್ಕಳಲ್ಲಿ ಕಲಿಕಾ ಆಸಕ್ತಿ ಬೆಳೆಸಿದರೆ ಅವರು ಭವಿಷ್ಯತ್ತಿನ ಆಸ್ತಿಯಾಗಲು ಸಾಧ್ಯ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇದೊಂದು ಅತ್ಯಂತ ನೋವಿನ ಸಂಗತಿ : ನಟ ಅನಿರುದ್ಧ

‘ಕನ್ನಡ ಚಿತ್ರರಂಗದಲ್ಲಿ ಈ ರೀತಿ ನಡೆಯುತ್ತಿರುವುದು ನೋವಿನ ಸಂಗತಿ. ನಮ್ಮನ್ನು ನೋಡಿ ಸಮಾಜ ಮತ್ತು ಮಕ್ಕಳು ಕಲಿಯುವುದರಿಂದ ಮುಂದಿನ ಪೀಳಿಗೆಗೆ ನಾವು ಒಳ್ಳೆಯದನ್ನು ಬಿಟ್ಟು ಹೋಗಬೇಕು’ ಎಂದು ನಟ ಅನಿರುದ್ಧ ಹೇಳಿದ್ದಾರೆ. 

IPL 2020: RCB ನಾಯಕ ಕೊಹ್ಲಿ ಹೇಳಿದ್ರೆ ಬೌಲಿಂಗ್ ಮಾಡಲು ರೆಡಿ ಎಂದ ಎಬಿಡಿ..!

13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲಾ ತಂಡಗಳು ನೆಟ್ಸ್‌ನಲ್ಲಿ ಸಾಕಷ್ಟು ಬೆವರು ಹರಿಸಲಾರಂಭಿಸಿವೆ. ಕಳೆದ 12 ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗುತ್ತ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಹುರುಪಿನೊಂದಿಗೆ ಮಿಲಿಯನ್ ಡಾಲರ್ ಟೂರ್ನಿಗೆ ಸಜ್ಜಾಗಿದೆ.

ಬಚ್ಚನ್ ದಂಪತಿಗೆ ಭದ್ರತೆ ನೀಡಿದ ಮಹಾರಾಷ್ಟ್ರ ಸರ್ಕಾರ..!

ಮಹಾರಾಷ್ಟ್ರ ಸರ್ಕಾರ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಪತ್ನಿ ನಟಿ, ಸಂಸದೆ ಜಯಾ ಬಚ್ಚನ್‌ಗೆ ಭದ್ರತೆ ನೀಡಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಬೆದರಿಕೆ ಬಂದುದರಿಂದ ಸೆಲೆಬ್ರಿಟಿ ಕಪಲ್‌ಗೆ ಸರ್ಕಾರ ಪಾರಾಮೀಟರ್ ಭದ್ರತೆ ನೀಡಿದೆ.

ಚಿನ್ನಕ್ಕೆ ಕಡಿಮೆಯಾದ ಡಿಮ್ಯಾಂಡ್, ದರದಲ್ಲಿ ಭಾರೀ ಬದಲಾವಣೆ!

ಕೊರೋನಾತಂಕ ನಡುವೆ ಚಿನ್ನದ ಬೇಡಿಕೆ ಕುಡಿಸಿದಿದೆ, ಹೀಗಿದ್ದರೂ ದರ ಏರಿಕೆ ಬಿಸಿ ಮಾತ್ರ ಕುಸಿದಿಲ್ಲ. ಹಳದಿ ಲೋಹದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದು ಬಂಗಾರ ಪ್ರಿಯರನ್ನು ಕಂಗಾಲಾಗಿಸಿದೆ. ಇಲ್ಲಿದೆ  ನೋಡಿ ಸಪ್ಟೆಂಬರ್ 16ರ ಗೋಲ್ಡ್ ರೇಟ್

33 ಪತ್ನಿಯರು, 181 ಸದಸ್ಯರ ವಿಶ್ವದ ದೊಡ್ಡ ಕುಟುಂಬವಿದು, ದಿನಕ್ಕೆಷ್ಟು ಅಕ್ಕಿ ಬೇಕಾ ಇವರಿಗೆ?

ಈ ದಿನಗಳಲ್ಲಿ ಜಾಯಿಂಟ್‌ ಫ್ಯಾಮಿಲಿ ಕಂಡು ಬರುವುದು ತುಂಬಾ ವಿರಳ. ಆದರೆ ಭಾರತದ ಮಿಜೋರಾಂನಲ್ಲಿ ವಾಸಿಸುವ ಕುಟುಂಬ ಇಂದಿಗೂ ಸಹ ಜಾಯಿಟ್‌ ಫ್ಯಾಮಿಲಿಯ ಅಭ್ಯಾಸವನ್ನು ಉಳಿಸಿಕೊಂಡಿದೆ. ಈ ಕುಟುಂಬದಲ್ಲಿ ಒಟ್ಟು 181 ಸದಸ್ಯರಿದ್ದಾರೆ. ಇದನ್ನು ವಿಶ್ವದ ಅತಿದೊಡ್ಡ ಕುಟುಂಬವೆಂದು ಪರಿಗಣಿಸಲಾಗಿದೆ. 100 ಕೋಣೆಗಳ ಮನೆಯಲ್ಲಿ ವಾಸಿಸುತ್ತಿರುವ ಈ ದೊಡ್ಡ ಕುಟುಂಬದ ಬಗ್ಗೆ ಮಾಹಿತಿ ಇಲ್ಲಿದೆ.

click me!