ಪೊಲೀಸರ ಮೇಲೆ ಸುಪ್ರೀಂ ಸಿಸಿಟಿವಿ ಕಣ್ಣು, ಹೇಳಿದ್ದ ಕೆಲಸ ಏನಾಯ್ತು?

By Suvarna NewsFirst Published Sep 16, 2020, 6:39 PM IST
Highlights

ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ/ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕೆಲಸದ ಮಾಹಿತಿ ನೀಡಿ/ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ

ನವದೆಹಲಿ( ಸೆ. 16)  ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಮಾಡಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. 

ವ್ಯಾಪ್ತಿಯ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಕೆ ಕೆಲಸ ಹೇಗೆ ನಡೆಯುತ್ತಿದ್ದು ಮಾಹಿತಿ ಒದಗಿಸಿ  ಎಂದು  ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ನಿರ್ದೇಶನ ನೀಡಿದೆ.

ಸಲಿಂಗಿ ವಿವಾಹ ಕಾನೂನು ಬದ್ಧ ಮಾಡಲು ಅಸಾಧ್ಯ!

ನಾಗರಿಕರ ಮೂಲಭೂತ ಹಕ್ಕು ರಕ್ಷಣೆ ವಿಚಾರದಲ್ಲಿ ಈ ಆದೇಶ ಬಹಳ ಮುಖ್ಯವಾದದ್ದಾಗಿದೆ.   ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ಹೇಗೆ ಅನುಷ್ಠಾನವಾಗುತ್ತಿದೆ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಬಳಿ ಸುಪ್ರೀಂ ಕಳೆದ ತಿಂಗಳು ಮಾಹಿತಿ ಕೇಳಿತ್ತು.

2018 ರ ಆದೇಶವನ್ನು ಉಲ್ಲೇಖ ಮಾಡಿದ್ದು ಎಲ್ಲ ಪೊಲೀಸ್ ಠಾಣೆಗಳಲ್ಲಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಇರಬೇಕು. ನಾಗರಿಕರ ಮೂಲಭೂತ ಹಕ್ಕಿಗೆ ಧಕ್ಕೆಯಾಗಬಾರದು ಎಂದು ಹೇಳಿದೆ. 

 

click me!