ನಟಿ ಸಂಜನಾಗೂ ಪರಪ್ಪನ ಅಗ್ರಹಾರ ಜೈಲೇ ದಾರಿ, ಎರಡೇ ದಿನ ಯಾಕೆ?

By Suvarna News  |  First Published Sep 16, 2020, 6:08 PM IST

ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು/ ನಟಿ ಸಂಜನಾಗೆ ನ್ಯಾಯಾಂಗ ಬಂಧನ/ ಪರಪ್ಪನ ಅಗ್ರಹಾರ ದಾರಿ ಹಿಡಿದ ಸಂಜನಾ/ ಉಳಿದ ಆರೋಪಿಗಳಿಗೂ ನ್ಯಾಯಾಂಗ ಬಂಧನ


ಬೆಂಗಳೂರು( ಸೆ. 16) ಡ್ರಗ್ಸ್ ಕೇಸಿನಲ್ಲಿ  ಸಿಸಿಬಿ ಪೊಲೀಸರ ವಶದಲ್ಲಿ ವಿಚಾರಣೆ ಎದುರಿಸುತ್ತಿದ್ದ ಸಂಜನಾ ಗರ್ಲಾನಿ ರಾಗಿಣಿಯಂತೆ ಪರಪ್ಪನ ಅಗ್ರಹಾರಕ್ಕೆ ತೆರಳಬೇಕಿದೆ. ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ.

"

Tap to resize

Latest Videos

2 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಗಿಣಿ ದ್ವಿವೇದಿ ಬಳಿಕ ಸಂಜನಾ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ವಿರೇನ್ ಖನ್ನ ಹಾಗೂ ರವಿಶಂಕರ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ  ವಿಧಿಸಲಾಗಿದೆ.

ಇದು ದೊಡ್ಡವರ ಮಕ್ಕಳ ಡರ್ಟಿ ಪಿಕ್ಚರ್, ಇರೋದೆ ಹೀಗಾ?

ಸಂಜನಾ ಗರ್ಲಾನಿಗೆ ವಿಧಿಸಿದ್ದ  ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನಲೆಯಲ್ಲಿ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಸಿಬಿ ಪೊಲೀಸರು ನ್ಯಾಯಾಲಯ ಮುಂದೆ ಹಾಜರುಪಡಿಸಿದರು. 1ನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತು.

ಅನಿಕಾ ಡಿ ಎಂಬಾಕೆಯ ಬಂಧನದ ನಂತರ  ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು ಹುಟ್ಟಿಕೊಂಡಿತು. ಒಬ್ಬೊಬ್ಬರ ಹೆಸರು ಹೊರಗೆ ಬರತೊಡಗಿತು. ನಟಿ ರಾಗಿಣಿಯನ್ನು ಮೊದಲು ಬಂಧನ ಮಾಡಲಾಗಿತ್ತು. ನಂತರ ಸಂಜನಾ ಅವರನ್ನು ಬಂಧಿಸಲಾಗಿತ್ತು. 

ಇನ್ನೊಂದು ಕಡೆ  ಸಂಜನಾ ಬೇಲ್ ಅರ್ಜಿಯನ್ನು ಸೆಷನ್ಸ್ ಕೋರ್ಟ್ ಗೆ ಟ್ರಾನ್ಸ್ ಫರ್  ಮಾಡಲಾಗಿದೆ.  ಕೇಸ್ ವಿವರವನ್ನು ಎನ್ ಡಿಪಿಎಸ್ ಕೋರ್ಟ್ ಗೆ ಕಳುಹಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ.

"

 

click me!