ಟೆಸ್ಟ್‌ ಫೈನಲ್‌ಗೆ ಕೊಹ್ಲಿ ಬಾಯ್ಸ್, ತೈಲ ಬೆಲೆ ಇಳಿಕೆಗೆ ಸೌದಿ ಟಿಪ್ಸ್; ಮಾ.6ರ ಟಾಪ್ 10 ಸುದ್ದಿ!

By Suvarna News  |  First Published Mar 6, 2021, 4:57 PM IST

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಲಸಿಕೆ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ತೆಗೆಯಲು ಚುನಾವಣಾ ಆಯೋಗ ಸೂಚಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಭಾರತಕ್ಕೆ ಸೌದಿ ಆರೇಬಿಯಾ ಸಲಹೆ ನೀಡಿದೆ.  ನಟಿ ಅನುಪಮಾ ವಿವಾಹ, ಐಪಿಎಲ್ ದಿನಾಂಕ ಘೋಷಣೆ ಸೇರಿದಂತೆ ಮಾರ್ಚ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


75ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಪ್ರಧಾನಿ, ಸಿಎಂ ಸೇರಿದ 259 ಜನರ ಸಮಿತಿ...

Latest Videos

undefined

022ರಲ್ಲಿ ದೇಶವು ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ 259 ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿದೆ.

ವ್ಯಾಕ್ಸೀನ್ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ಬೇಡ: ಚುನಾವಣಾ ಆಯೋಗ ಸೂಚನೆ...

ವಿಧಾನಸಭಾ ಚುನಾವಣೆಗೇ ಕೆಲವೇ ವಾರ ಮುನ್ನ ಚುನಾವಣಾ ಆಯೋಗ ಕೊರೋನಾ ವೈರಸ್ ವ್ಯಾಕ್ಸೀನ್ ಸರ್ಟಿಫಿಕೇಟ್ನಿಂದ ಮೋದಿಯ ಫೋಟೋ ತೆಗೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಭಾರತದಲ್ಲಿ ಎಪ್ರಿಲ್ 9 ರಿಂದ ಮೇ.30ರ ವರೆಗೆ IPL 2021 ಟೂರ್ನಿ?...

IPL 2021 ಟೂರ್ನಿಗೆ ಬಿಸಿಸಿಐ ಭರ್ಜರಿ ತಯಾರಿ ನಡೆಸುತ್ತಿದೆ. 6 ನಗರಗಳಲ್ಲಿ ಈ ಬಾರಿ ಟೂರ್ನಿ ಆಯೋಜಿಸಲು ಈಗಾಗಲೇ ಬಿಸಿಸಿಐ ಚಿಂತಿಸಿತ್ತು. ಇದೀಗ ಎಪ್ರಿಲ್ 9 ರಿಂದ ಐಪಿಎಲ್ ಟೂರ್ನಿ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಟೀಂ ಇಂಡಿಯಾ ದಿಗ್ವಿಜಯ; ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಿದ ಭಾರತ...

ಇಂಗ್ಲೆಂಡ್‌ ವಿರುದ್ದ ಟೀಂ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 25 ರನ್‌ಗಳ ಗೆಲುವು ದಾಖಲಿಸುವ ಮೂಲಕ 3-1 ಅಂತರದಲ್ಲಿ ಟೆಸ್ಟ್ ಸರಣಿ ಕೈವಶ ಮಾಡಿಕೊಂಡಿದೆ. ಇದರ ಜತೆಗೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿದೆ. 

ಕ್ರಿಕಟರ್ ಜೊತೆ ಅನುಪಮಾ ವಿವಾಹ..? ಶ್ರೀಮತಿಯಾಗ್ತಿದ್ದಾರೆ ನಟಸಾರ್ವಭಮದ ನಟಿ...

ಫಾಸ್ಟ್ ಬೌಲರ್ ಜಸ್ಪ್ರೀತ್  ಬೂಮ್ರಾ ಮತ್ತು ಸೌತ್ ನಟಿ ಅನುಪಮ ಪರಮೇಶ್ವರನ್ ಡೇಟ್ ಮಾಡ್ತಿರೋದು ಎಲ್ಲರಿಗೂ ಗೊತ್ತು.ಇವರಿಬ್ಬರ ನಡುವಿನ ಗೆಳೆಯನ ಪ್ರೀತಿಗೆ ತಿರುಗಿ ಇದೀಗ ಈ ಜೋಡಿ ಮದುವೆಯಾಗುತ್ತಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಇದೆಲ್ಲಾ ನಡೆಯಲ್ಲ: ಸಿಎಂಗೆ ಶಾಸಕ ಖಡಕ್ ಎಚ್ಚರಿಕೆ...

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಶಾಸಕ ಗರಂ ಆಗಿದ್ದು, ಯಡಿಯೂರಪ್ಪ ಇದೆಲ್ಲಾ ನಡೆಯಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಜಿಯೋ ಲ್ಯಾಪ್‌ಟ್ಯಾಪ್..! ಇದರ ಬೆಲೆ ಭಾರೀ ಕಮ್ಮಿ...

ಟೆಲಿಕಾಂ ವಲಯದಲ್ಲಿ ಜಿಯೋ ಮೂಲಕ ಬಿರುಗಾಳಿ ಎಬ್ಬಿಸಿದ್ದ ರಿಲಯನ್ಸ್ ಕಂಪನಿ ಇದೀಗ ಜಿಯೋಬುಕ್ ಎಂಬ ಲ್ಯಾಪ್‌ಟ್ಯಾಪ್‌ಗಳ ಮೂಲಕ ಮತ್ತೊಂದು ಸನ್ಷೇಷನ್ ಕ್ರಿಯೇಟ್ ಮಾಡಲು ಮುಂದಾಗುತ್ತಿದೆ. ಈಗಾಗಲೇ ಅಗ್ಗದ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿರುವ ಜಿಯೋ ಇದೀಗ ಕಡಿಮೆ ಬೆಲೆಗೆ ಜಿಯೋಬುಕ್ ಲ್ಯಾಪ್‌ಟ್ಯಾಪ್‌ಗಳನ್ನು ತಯಾರಿಸುತ್ತಿದೆ ಎನ್ನುತ್ತಿವೆ ವರದಿಗಳು.

ಅಗ್ಗದ ಬೆಲೆಗೆ ಪಡೆದಿದ್ದ ತೈಲ ಬಳಸಿ: ಭಾರತಕ್ಕೆ ಸೌದಿ ಅರೇಬಿಯಾ ‘ಬುದ್ಧಿಮಾತು’!...

ದಿನೇ ದಿನೇ ಏರುತ್ತಿರುವ ತೈಲ ಬೆಲೆಯನ್ನು ಹತೋಟಿಗೆ ತರಲು ತೈಲ ಪೂರೈಕೆ ಮೇಲಿನ ನಿರ್ಬಂಧ ಹಿಂಪಡೆಯುವಂತೆ ಒತ್ತಾಯ ಮಾಡುತ್ತಿರುವ ಭಾರತಕ್ಕೆ ಸೌದಿ ಅರೇಬಿಯಾ ಗುರುವಾರ ತಿರುಗೇಟು ನೀಡಿದೆ. 

ವಾಹನ ಸುರಕ್ಷತೆಯಲ್ಲಿ ರಾಜಿ ಇಲ್ಲ; ಎಪ್ರಿಲ್ 1 ರಿಂದ ಹೊಸ ನಿಯಮ ಜಾರಿ!...

ಆಟವಾಡ್ತಾ ಆದರ್ಶ ಮರೆತ ದೀದಿ: ಬಿಜೆಪಿಗೆ ಸೇರಿದ ಮಾಜಿ ಟಿಎಂಸಿ ನಾಯಕ ತ್ರಿವೇದಿ!...

ಪಶ್ಚಿಮ ಬಂಗಾಳ ಚುನಾವಣೆಗೂ ಮೊದಲೇ ರಾಜಕೀಯ ಏರಿಳಿತಗಳು ಸಂಭವಿಸುತ್ತಲೇ ಇವೆ. ಸದ್ಯ ಇಲ್ಲಿನ ಸಿಎಂ ಮಮತಾ ಬ್ಯಾನರ್ಜಿಯ ಆಪ್ತರಾಗಿದ್ದ, ಮಾಜಿ ರೈಲ್ವೇ ಸಚಿವರಾಗಿದ್ದ ದಿನೇಶ್ ತ್ರಿವೇದಿ ಶನಿವಾರದಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 

click me!