75ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಪ್ರಧಾನಿ, ಸಿಎಂ ಸೇರಿದ 259 ಜನರ ಸಮಿತಿ

By Suvarna News  |  First Published Mar 6, 2021, 4:01 PM IST

2022ರಲ್ಲಿ ದೇಶವು ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ| 75ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಪ್ರಧಾನಿ, ಸಿಎಂ ಸೇರಿದ 259 ಜನರ ಸಮಿತಿ


ನವದೆಹಲಿ(ಮಾ.06): 2022ರಲ್ಲಿ ದೇಶವು ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ 259 ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಮಿತಿಯಲ್ಲಿ ಸುಪ್ರೀಂ ಸಿಜೆಐ ಎಸ್‌.ಎ.ಬೋಬ್ಡೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌, 28 ರಾಜ್ಯಗಳ ಮುಖ್ಯಮಂತ್ರಿಗಳು, ಹಲವು ರಾಜ್ಯಪಾಲರು, ಕಾಂಗ್ರೆಸ್‌ ಸೋನಿಯಾ ಗಾಂಧಿ ಸೇರಿದಂತೆ ಹಲವು ವಿಪಕ್ಷ ನಾಯಕರು, ಕೇಂದ್ರ ಸಚಿವರಿದ್ದಾರೆ.

Tap to resize

Latest Videos

ಅಲ್ಲದೇ ಹಲವು ರಾಜ್ಯಪಾಲರು, ಮಾಜಿ ಉಪಪ್ರಧಾನಿ ಎಲ್‌.ಕೆ.ಅಡ್ವಾಣಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌, ಕಲಾವಿದರಾದ ಲತಾ ಮಂಗೇಷ್ಕರ್‌, ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಸೇರಿದಂತೆ 259 ಜನರು ಸದಸ್ಯರಾಗಿದ್ದಾರೆ.

click me!