1) ಟ್ರಾಫಿಕ್ ಪೊಲೀಸರಿಗೆ ಸೆಲ್ಫಿ ವಿಡಿಯೋ ಸವಾಲು ಹಾಕಿದ್ದ ಚಾಲಕ ಸೆರೆ
ಎರಡು ದಿನಗಳ ಹಿಂದೆ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಸವಾಲೆಸೆದು ಸಾಮಾಜಿಕ ಜಾಲ ತಾಣಗಳಲ್ಲಿ ‘ಸ್ಟಾರ್’ ಆಗಿದ್ದ ಮೈಸೂರಿನ ಕ್ಯಾಬ್ ಚಾಲಕ ಸೋಮವಾರ ಸಂಜೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹುಣಸೂರು ತಾಲೂಕಿನ ಮಾಚಬಾಯನಹಳ್ಳಿ ನಿವಾಸಿ ರಘು ಬಂಧಿತನಾಗಿದ್ದಾನೆ. ಪೊಲೀಸರಿಗೆ ಸಿಕ್ಕ ಸಣ್ಣ ಸುಳಿವಿನಿಂದ ಪೊಲೀಸರು ಬಂಧಿಸಿದ್ದಾರೆ.
2) ನಿತ್ಯಾನಂದ ವಿರುದ್ಧ ತಿರುಗಿಬಿದ್ದ ಕೆನಡಾ ಭಕ್ತೆ..!
ಬಿಡದಿಯ ನಿತ್ಯಾನಂದ ಸ್ವಾಮಿಜಿಯ ಕರ್ಮಕಾಂಡ ಮತ್ತೊಮ್ಮೆ ಬಟಾಬಯಲಾಗಿದ್ದು, ಕೆನಾಡಾದ ಮಹಿಳೆಯೊಬ್ಬರು ನಿತ್ಯಾ ಪುರಾಣವನ್ನು ಬಯಲು ಮಾಡಿದ್ದಾರೆ. ಸಾರಾ ಲಾಂಡ್ರಿ ಎಂಬ ಕೆನಡಾದ ಪ್ರಜೆ ನಿತ್ಯಾನಂದ ಧರ್ಮದ ಹೆಸರಿನಲ್ಲಿ ನಡೆಸುವ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
3) ಭಾರತದ ಒಪ್ಪಿಗೆ ಇಲ್ಲದೇ ಮಧ್ಯಸ್ಥಿಕೆ ಇಲ್ಲ: ಇಮ್ರಾನ್ ಮುಸಿಡಿಗಿಷ್ಟು ಎಂದ ಟ್ರಂಪ್!
ಕಾಶ್ಮೀರ ವಿಚಾರವಾಗಿ ಭಾರತ-ಪಾಕಿಸ್ತಾನ ಮಧ್ಯೆ ಮಧ್ಯಸ್ಥಿಕೆಗೆ ಸಿದ್ಧ ಎಂದಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇದೀಗ ತಮ್ಮ ಮಾತಿನ ವರಸೆ ಬದಲಿಸಿದ್ದಾರೆ. ಟ್ರಂಪ್ ಮಾತು ಪಾಕ್ ಪ್ರಧಾನಿಗೆ ಆಸೆಗೆ ತಣ್ಣೀರೆರಚಿದೆ.
4) ನೋಡ ನೋಡುತ್ತಲೇ ಕುಸಿದ ಶಾಲಾ ಕಟ್ಟಡ; ಅದೃಷ್ಟವಶಾತ್ ಮಕ್ಕಳು ಪಾರು
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚನ್ನೇನಹಳ್ಳಿ ಶಾಲಾ ಕಟ್ಟಡ ಕುಸಿದಿರುವ ಘಟನೆ ನಡೆದಿದೆ. ಬೆಳಗಿನ ಪ್ರಾರ್ಥನೆ ವೇಳೆ ಶಾಲಾ ಕಟ್ಟಡ ಕುಸಿದಿದೆ. ಮಕ್ಕಳೆಲ್ಲರೂ ಹೊರಗಡೆ ಇದ್ದಿದ್ದರಿಂದ ಭಾರೀ ದುರಂತ ತಪ್ಪಿದೆ. ಕಟ್ಟಡ ದುರಸ್ತಿಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.
5) ಚೊಚ್ಚಲ ಟಿ20 ವಿಶ್ವಕಪ್ ಗೆದ್ದು 12 ವರ್ಷ, ಚಿಯರ್ಸ್ ಟೀಂ ಇಂಡಿಯಾ..!
ಸೆಪ್ಟೆಂಬರ್ 24, 2007 ಭಾರತ ಕ್ರಿಕೆಟ್ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನ. ಭಾರತದ ಕ್ರಿಕೆಟ್ ಹೊಸ ದಿಕ್ಕು ಸಿಕ್ಕ ದಿನ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದ ದಿನ. ಹೌದು ಇಂದಿಗೆ 12 ವರ್ಷದ ಹಿಂದೆ ಇದೇ ದಿನ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಫೈನಲ್’ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಗೆದ್ದು ವಿಶ್ವ ಚಾಂಪಿಯನ್ ಆದ ದಿನ.
6) 'ಮಿಥುನ ರಾಶಿ' ವಿಲನ್ ಕೋಳಿ ಹಿಡಿಯುವುದರಲ್ಲಿ ಸೂಪರ್ ಡೂಪರ್!
ಮಿಥುನ ರಾಶಿ' ಯಲ್ಲಿ ಒಂದೇ ಏಟಲ್ಲಿ ರಾಶಿ ರಾಶಿ ಕೋಳಿ ಹಿಡಿಯುತ್ತಾ ಕೋಳಿ ರಮ್ಯಾ ಎಂದೇ ಖ್ಯಾತರಾದ ಬ್ಯೂಟಿಫುಲ್ ಆ್ಯಂಡ್ ಬೋಲ್ಡ್ ಪಾತ್ರಧಾರಿ ರಮ್ಯಾ ವಸ್ತ್ರಾವಿನ್ಯಾಸ ಪ್ರೇಕ್ಷಕರ ಮನ ಗೆದ್ದಿದೆ. ರಮ್ಯಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ.
7) ಅಯ್ಯಯ್ಯೋ! ಮೀಟೂ ನಾಯಕಿ ಆದ್ರಾ 'ಕಪಟನಾಟಕ ಪಾತ್ರಧಾರಿ'?
ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಟಿಗಳಲ್ಲಿ ನಾಯಕ, ನಾಯಕಿ ಇಬ್ಬರಲ್ಲಿ ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ. ಆದರೆ, ‘ಕಟಪಟನಾಟಕ ಪಾತ್ರದಾರಿ’ ಚಿತ್ರದ ಪರಿಸ್ಥಿತಿಯೇ ಬೇರೆ. ನಾಯಕ ಬಾಲುನಾಗೇಂದ್ರ, ನಾಯಕಿ ಸಂಗೀತಾ ಭಟ್ ಇಬ್ಬರೂ ನಾಪತ್ತೆ. ನಾಯಕ ಬಿಜಿ, ನಾಯಕಿ ಜರ್ಮನಿ. ನಾಯಕಿ ವಿಡಿಯೋ ಕಾನ್ಫರೆನ್ಸಿಂಗಿನಲ್ಲಿ ಮಾತಾಡುತ್ತೇನೆ ಅಂದರೂ ಇಂಟರ್‌ನೆಟ್ ಕೈ ಕೊಟ್ಟಿತು. ಹೀಗಾಗಿ ಅವರ ವಿಡಿಯೋ ಮಾತಾಡಿತು.
8) ಪ್ರಧಾನಿ ಕಾರ‍್ಯಕ್ರಮಕ್ಕೆ ಹುಬ್ಬಳ್ಳಿ ಪೌರಕಾರ್ಮಿಕನಿಗೂ ಆಹ್ವಾನ
ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಜನರಿಗೆ ತಿಳಿವಳಿಕೆ ಹೇಳಿ ಸ್ವಚ್ಛತಾ ಅಭಿಯಾನದ ಯಶಸ್ಸಿಗೆ ತನ್ನದೇ ಆದ ಕೊಡುಗೆ ನೀಡಿದ ಹುಬ್ಬಳ್ಳಿಯ ಗುತ್ತಿಗೆ ಪೌರಕಾರ್ಮಿಕನಿಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಾವಕಾಶ ಸಿಕ್ಕಿದೆ.
9) ಫಿಂಗರ್ ಪ್ರಿಂಟ್ ಆಯ್ತು, ಭಾರತದಲ್ಲೀಗ ಚಹರೆ ಗುರುತಿನ ವ್ಯವಸ್ಥೆ ಜಾರಿ!
ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದಂತೆ ಹೊಸ ಹೊಸ ವ್ಯವಸ್ಥೆಗಳು ಜಾರಿಗೆ ಬರುತ್ತವೆ. ಜೊತೆಗೆ, ಅವುಗಳ ಬಳಕೆ ಹೇಗಾಗ್ಬೇಕು? ಹೇಗಾಗಬಾರದು? ಅದನ್ನು ಯಾರು ಬಳಸಬೇಕು? ಯಾರು ಬಳಸಬಾರದು? ಎಷ್ಟರ ಮಟ್ಟಿಗೆ ಬಳಸ್ಬೇಕು? ಎಂಬಿತ್ಯಾದಿ ವಿಚಾರಗಳೂ ಚರ್ಚೆಗೀಡಾಗುತ್ತಿವೆ. ಅಂತಹದ್ದೇ ಒಂದು ಪ್ರಶ್ನೆಯನ್ನು ಹುಟ್ಟುಹಾಕುವ ಹೊಸ ವ್ಯವಸ್ಥೆಯನ್ನು ಜಾರಿ ಮಾಡಲು ಸರ್ಕಾರ ಹೊರಟಿದೆ.
10) ಸೆ.26, 27 ಕ್ಕೆ ಬ್ಯಾಂಕ್ ನೌಕರರ ಮುಷ್ಕರವಿಲ್ಲ
ಬ್ಯಾಂಕ್‌ಗಳ ವಿಲೀನ ವಿರೋಧಿಸಿ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಕರೆಕೊಟ್ಟಿದ್ದ 2 ದಿನ ಗಳ ಬ್ಯಾಂಕ್ ಮುಷ್ಕರವನ್ನು ಮುಂದೂಡಿದೆ. ಬ್ಯಾಂಕ್ ವಿಲೀನ ಸಂಬಂಧ ಉದ್ಭವಿಸಿರುವ ಸಮಸ್ಯೆ ಪರಿಹರಿಸಲು ವಿಲೀನ ಗೊಳ್ಳುತ್ತಿರುವ ಬ್ಯಾಂಕ್‌ಗಳ ಅಧಿಕಾರಿಗಳನ್ನೊಳ ಗೊಂಡ ಸಮಿತಿ ರಚನೆ ಮಾಡಿ ಪರಿಹಾರ ಸೂಚಿಸಲಾಗುವುದು ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಭರವಸೆ ನೀಡಿದ್ದರಿಂದ ಸೆ. 26 ಹಾಗೂ 27 ರಂದು ನಡೆಸಲು ತೀರ್ಮಾನಿಸಲಾಗಿದ್ದ 48 ಗಂಟೆಗಳ ಮುಷ್ಕರ ಮುಂದೂಡಲಾಗಿದೆ ಎಂದು ಸಂಘ ತಿಳಿಸಿದೆ.
Subscribe to get breaking news alertsSubscribe ಕರ್ನಾಟಕ, ಭಾರತ (India News ) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News ) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News ), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live ) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.