
ನವದೆಹಲಿ[ಫೆ.15]: ಕಣಿವೆ ಪ್ರದೇಶ ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಗೆ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ತಾವು ಹುತಾತ್ಮ ಯೋಧರ ಕುಟುಂಬ, ಸೇನಾಪಡೆ ಹಾಗೂ ಕೇಂದ್ರ ಸರ್ಕಾರದೊಂದಿಗಿದ್ದೇವೆ ಎಂದಿದೆ.
"
ಪಾಕ್ ಇನ್ನು ಏಕಾಂಗಿ, ಆಪ್ತ ರಾಷ್ಟ್ರ ಪಟ್ಟ ಹಿಂಪಡೆದ ಭಾರತ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಿರಿಯ ನಾಯಕ ಗುಲಾಂ ನಬಿ ಆಜಾದ್ ಜೊತೆಗೆ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಭಯೋತ್ಪಾದನೆ ದೇಶವನ್ನು ವಿಭಜಿಸಿ ಒಡೆಯುವ ಯತ್ನ ಮಾಡುತ್ತದೆ. ಆದರೆ ನಮ್ಮ ದೇಶವನ್ನು ಯಾವುದೇ ಶಕ್ತಿ ಒಡೆಯಲು ಸಾಧ್ಯವಿಲ್ಲ. ದೇಶದ ಆತ್ಮದ ಮೇಲೆ ದಾಳಿಯಾಗಿದೆ. ಇದನ್ನು ಯಾರು ನಡೆಸಿದ್ದಾರೋ ಅವರು ನಮ್ಮ ಆತ್ಮಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ. ದಾಳಿಗೆ ಸಂಬಂಧಿಸಿದಂತೆ ಸೇನೆ ಹಾಗೂ ಸರ್ಕಾರ ಯಾವ ನಿರ್ಧಾರ ಕೈಗೊಂಡರೂ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು ಕೇಂದ್ರ ಸರ್ಕಾರದೊಂದಿಗಿದ್ದೇವೆ. ನಾವೆಲ್ಲಾ ಒಂದಾಗಿದ್ದೇವೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಚರ್ಚೆ ಬೇಡವೇ ಬೇಡ' ಎಂದಿದ್ದಾರೆ.
ಪಾಪಿ ಉಗ್ರರನ್ನು ಸದೆಬಡಿಯಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ: ಮೋದಿ
'ಇದು ಬಹಳ ದುಃಖಕರ ಸಮಯ. ದೇಶದ ವಿಭಜನೆಯೊಂದೇ ಭಯೋತ್ಪಾದಕರ ಗುರಿ. ನ್ಮಮ ಸೇನೆಯ ಮೇಲೆ ವರು ನಡೆಸಿಡುವ ದಾಳಿ ಹಾಗೂ ಹಿಂಸಾತ್ಮಕ ಕೃತ್ಯ ಖಂಡನೀಯ. ಆದರೆ ಇಂತಹ ದಾಳಿಯನ್ನು ನಮ್ಮ ದೇಶ, ಭಾರತೀಯರು ಯಾವತ್ತೂ ಮರೆಯುವುದಿಲ್ಲ ಎಂಬುವುದು ಭಯೋತ್ಪಾದಕರು ನೆನಪಿಟ್ಟುಕೊಳ್ಳಲೇಬೇಕು' ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 'ನಾವು ಹುತಾತ್ಮ ಯೋಧರ ಕುಟುಂಬಸೊಂದಿಗಿದ್ದೇವೆ. ಭಯೋತ್ಪಾದನೆ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಭಯೋತ್ಪಾದನೆ ನಿಗ್ರಹಿಸಲು ದೇಶ ಕೈಗೊಳ್ಳುವ ಕ್ರಮಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ' ಎಂದಿದ್ದಾರೆ.
ಹಲವು ದಿನಗಳ ಹಿಂದೆಯೇ ಗುಪ್ತಚರ ಸಂಘಟನೆಗಳಿಂದ ಎಚ್ಚರಿಕೆ
ವಿಡಿಯೋ ಬಿಡುಗಡೆ ಆಗುವ ವೇಳೆಗೆ ನಾನು ಸ್ವರ್ಗದಲ್ಲಿರುತ್ತೇನೆ ಎಂದಿದ್ದ ಪಾತಕಿ
ರಕ್ತಕ್ಕೆ ರಕ್ತ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಅಂತಿದೆ ಭಾರತ..!
ಭಾರತದ ಬೆಂಬಲಕ್ಕೆ ಬಂತು ಜಗತ್ತು: ಪಾಕ್‌ಗೆ ಕಾದಿದೆ ಆಪತ್ತು!
ಆತ್ಮಾಹುತಿ ದಾಳಿಗೆ ಮಂಡ್ಯದ ವೀರಪುತ್ರ ಹುತಾತ್ಮ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ