ಶಾಸಕರ ರಾಜೀನಾಮೆ ಹಿಂದೆ SMK ರೋಲ್, ಫ್ಯಾನ್ಸ್‌ಗೆ ಶಾಕ್ ನೀಡಿದ ಕ್ರಿಸ್ ಗೇಲ್; ನ.27ರ ಟಾಪ್ 10 ಸುದ್ದಿ!

By Web Desk  |  First Published Nov 27, 2019, 4:44 PM IST

ಕಾಂಗ್ರೆಸ್ ತೊರೆದು ಬಿಜೆಪಿ ಆಗಮಿಸಿದ ಬಳಿಕ ಎಸ್ಎಂ ಕೃಷ್ಣ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದೀಗ 17 ಶಾಸಕರ ರಾಜೀನಾಮೆ ಹಿಂದೆ ತನ್ನ ಕೈವಾಡವಿದೆ ಅನ್ನೋ ಹೇಳಿಕೆ ಸಂಚನ ಸೃಷ್ಟಿಸಿದೆ. ಭಾರತಕ್ಕೆ ಆಗಮಿಸಲು ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ನಿರಾಕರಿಸಿದ್ದಾರೆ. ಬೆಡ್ ರೂಂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ ಮಾಜಿ ಶಾಸಕರೊಬ್ಬರ ಅಳಿಯನನ್ನು ಗದಗ ಪೊಲೀಸರು ಬಂಧಿಸಿದ್ದಾರೆ. ಹೀಗೆ ನವೆಂಬರ್ 27 ರಂದು ಗಮಮನಸೆಳೆದ ಟಾಪ್ 10 ಸುದ್ದಿಗಳ ವಿವರ ಇಲ್ಲಿದೆ.


1) 17 ಶಾಸಕರ ರಾಜೀನಾಮೆ ಹಿಂದೆ ನನ್ನ ಪಾತ್ರವೂ ಇದೆ: ಎಸ್‌. ಎಂ. ಕೃಷ್ಣ

Latest Videos

undefined

ರಾಜ್ಯದಲ್ಲಿ ಉದ್ಭವವಾಗಿದ್ದ ಅನಿಷ್ಟಪರಿಸ್ಥಿತಿಯನ್ನು ದೂರ ಮಾಡಲು 17 ಬುದ್ಧಿವಂತ ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಇವರ ರಾಜೀನಾಮೆ ಕೊಡಿಸುವುದರಲ್ಲಿ ನಾನೂ ಕಾರಣನಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ತಿಳಿಸಿದ್ದಾರೆ. ಈ ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

2) ಸೋಶಿಯಲ್ ಮೀಡಿಯಾದಲ್ಲಿ ಬೆಡ್‌ರೂಂ ವಿಡಿಯೋ; ಹನಿಟ್ರ್ಯಾಪ್ ಕಿಂಗ್‌ಪಿನ್ ಅರೆಸ್ಟ್!

ಬೆಡ್‌ರೂಂನ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ ಮಾಜಿ ಶಾಸಕರೊಬ್ಬರ ಅಳಿಯನನ್ನು ಗದಗ ಪೊಲೀಸರು ಬಂಧಿಸಿದ್ದಾರೆ.  ಮಧ್ಯಪ್ರದೇಶ ರೀತಿಯಲ್ಲಿ ರಾಜ್ಯದಲ್ಲೂ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಗ್ಯಾಂಗ್‌ ಬಗ್ಗೆ ಸುವರ್ಣನ್ಯೂಸ್‌ ವರದಿ ಮಾಡಿತ್ತು.

3) ಮಗನ ಮದುವೆಗೆ ಹೋಗದಿದ್ದಕ್ಕೆ ಕಣ್ಣೀರಿಟ್ಟ ಅನರ್ಹ ಶಾಸಕ ಆನಂದ್ ಸಿಂಗ್!

ಪ್ರತಿಯೊಬ್ಬ ತಂದೆಗೆ ಮಗನ ಮದುವೆ ಪ್ರಮುಖವಾಗಿರುತ್ತದೆ. ಆದ್ರೇ ಮಗನ ಮದುವೆ ನನ್ನ ರಾಜಕೀಯ ಭವಿಷ್ಯ ಒಂದೇ ಬಾರಿ ಬಂದಿದೆ. ನಿನ್ನೆ ನನ್ನ ಮಗನನ್ನು ಮದುಮಗನನ್ನ ಮಾಡಲಾಯಿತು. ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ. ನನ್ನ ಮಗ ಕೇಳಿದ ಮದುವೆ ಮುಖ್ಯನಾ? ಚುನಾವಣೆ  ಮುಖ್ಯನಾ? ಎಂದು ಪ್ರಶ್ನಿಸಿದ್ದಾನೆ. ಸದ್ಯದ ಪರಿಸ್ಥಿತಿಯಲ್ಲಿ ನನಗೆ ಎರಡು ಮುಖ್ಯವಾಗಿದೆ ಯಾವುದನ್ನು ಬಿಡಲಾಗದು ಎಂದು ಅನರ್ಹ ಶಾಸಕ ಆನಂದ ಸಿಂಗ್ ಕಣ್ಣೀರು ಹಾಕಿದ್ದಾರೆ. 

4) BSPಯಿಂದ 6 ಮಂದಿ ಉಚ್ಚಾಟನೆ : ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರ ವಿರುದ್ಧ ಪ್ರತಿಭಟನೆ

 ಮಂದಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

5) ನನ್ನನ್ನು ಸೆಳೆಯಲು BJP ಯತ್ನಿಸಿತ್ತು: ಲಕ್ಷ್ಮೀ ಹೆಬ್ಬಾಳ್ಕರ್

ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಗೂ ಮುನ್ನ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ದೊಡ್ಡವರು ಬಿಜೆಪಿಗೆ  ಸೇರಲು ನಿರ್ಧರಿಸಿದ್ದರು. ಬಿಜೆಪಿಗೆ ನನ್ನನ್ನು ಸೆಳೆಯಲು ಯತ್ನವೂ ನಡೆದಿತ್ತು, ಈ ನಿಟ್ಟಿನಲ್ಲಿ ನಮ್ಮೊಂದಿಗೆ ಸಭೆಯನ್ನೂ ಮಾಡಿದ್ದರು. ಬಿಜೆಪಿಗೆ ಹೋಗೋಣ ಅಂದ್ರು, ಆಗ ಯವ್ವಾ ನಂಗ ಆಗೋದಿಲ್ಲ ಅಂತ ಹೇಳಿ ಸಭೆಯನ್ನು ಮೊಟಕುಗೊಳಿಸಿ ಹೊರ ಬಂದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಹೇಳಿದ್ದಾರೆ. 

6) ಅಭಿಮಾನಿಗಳಿಗೆ ಶಾಕ್; ಭಾರತಕ್ಕೆ ಬರಲ್ಲ ಎಂದ ಕ್ರಿಸ್ ಗೇಲ್!

ಸತತ ಲೀಗ್ ಕ್ರಿಕೆಟ್ ಆಡುತ್ತಿರುವ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತೆಗೆದುಕೊಂಡಿರುವ ನಿರ್ಧಾರ ಭಾರತೀಯರಿಗೆ ಅಚ್ಚರಿ ನೀಡಿದೆ. ಐಪಿಎಲ್ ಟೂರ್ನಿ ಮೂಲಕ ಭಾರತೀಯರ ನೆಚ್ಚಿನ ಕ್ರಿಕೆಟಿಗನಾಗಿರುವ ಗೇಲ್, ಭಾರತ ಪ್ರವಾಸಕ್ಕೆ ನಿರಾಕರಿಸಿದ್ದಾರೆ. ಮುಂದಿನ ತಿಂಗಳು ಭಾರತ ವಿರುದ್ಧ ನಡೆಯಲಿರುವ ದ್ವಿಪಕ್ಷೀಯ ಸರಣಿ ಆಡದಿರಲು ಗೇಲ್ ನಿರ್ಧರಿಸಿದ್ದಾರೆ.

7) ಈ ನಟಿಯನ್ನು ಮದುವೆಯಾಗ್ಬೇಕು ಅಂದ್ರೆ ಹುಡುಗನಿಗೆ ಈ ಕ್ವಾಲಿಟಿಗಳಿರಬೇಕಂತೆ!

ಬಹುಭಾಷಾ ನಟಿ ಅದಾ ಶರ್ಮಾ ಹುಡುಗನನ್ನು ಹುಡುಕುತ್ತಿದ್ದಾರಂತೆ! ತಾನು ಮದುವೆಯಾಗುವ ಹುಡುಗನಲ್ಲಿ ಈ ಎಲ್ಲಾ ಕ್ವಾಲಿಟಿಗಳಿರಬೇಕು ಎಂದು ಒಂದಷ್ಟು ಪಟ್ಟಿ ಮಾಡಿದ್ದಾರೆ. ಈ ಕ್ವಾಲಿಟಿಗಳು ನಿಮ್ಮಲ್ಲಿದ್ದರೆ ನೀವೂ ಅಪ್ಲೈ ಮಾಡಬಹುದು. 


8) ಇತಿಹಾಸ ಕೊರೆದ ಇಸ್ರೋ: ನಭಕ್ಕೆ ಚಿಮ್ಮಿದ ಕಾರ್ಟೊಸ್ಯಾಟ್-3!

ಸುಧಾರಿತ ಭೂ ವೀಕ್ಷಣೆ ಉಪಗ್ರಹ ಕಾರ್ಟೊಸ್ಯಾಟ್-3 ಹಾಗೂ 13 ಯುಎಸ್ ನ್ಯಾನೊ ಸ್ಯಾಟಲೈಟ್‌ಗಳನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಭೂಮಿಯ ಚಿತ್ರಣ ಹಾಗೂ ಮ್ಯಾಪ್‌ಗೆ ಸಂಬಂಧಿಸಿದ ಅಧ್ಯಯನಕ್ಕೆ ಸಹಾಯಕಾರಿಯಾಗುವ ಕಾರ್ಟೊಸ್ಯಾಟ್‌-3 ಉಪಗ್ರಹ ಸೇರಿದಂತೆ, ಅಮೆರಿಕದ 13 ಮೈಕ್ರೋ ಉಪಗ್ರಹಗಳನ್ನು ಇಸ್ರೋ ನಭಕ್ಕೆ ಕಳುಹಿಸಿದೆ. 

9) ಬೌನ್ಸ್ ಸ್ಕೂಟರ್‌ಗೆ ಬೆಂಕಿ; ಆರೋಪಿಗಳನ್ನು ಬಂಧಿಸಿದ ಪೊಲೀಸ್!

ಬೆಂಗಳೂರಿನಲ್ಲಿ ಬೌನ್ಸ್ ಆ್ಯಪ್ ಆಧಾರಿತ ಸ್ಕೂಟರ್ ಸೇವೆ ಹೆಚ್ಚು ಜನಪ್ರೀಯವಾಗಿದೆ. ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ  ಸ್ಕೂಟರ್ ಸೇವೆ ನೀಡುತ್ತಿರುವ ಬೌನ್ಸ್, ದಿನ ನಿತ್ಯದ ಬದುಕಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಆದರೆ ಬೌನ್ಸ್ ಸ್ಕೂಟರ್ ಎಲ್ಲೆಂದರಲ್ಲಿ ನಿಲ್ಲಿಸುವುದು, ಟೈಯರ್ ಸೇರಿದಂತೆ ಬಿಡಿ ಭಾಗಗಳನ್ನು ಕದ್ದೊಯ್ಯು ಪ್ರಕರಣದ ಬೆನ್ನಲ್ಲೇ ಸ್ಕೂಟರ್‌ಗೆ ಬೆಂಕಿ ಹಚ್ಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಬೌನ್ಸ್ ಸ್ಕೂಟರ್‌ಗೆ ಬೆಂಕಿ ಹಚ್ಚಿದ  ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

10) ಚೆಲುವೆಯ ಅಂದದ ಮೊಗಕೆ: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ!

ಏರಿಕೆಯತ್ತ ಮುಖ ಮಾಡಿದ್ದ ಚಿನ್ನದ ದರ ಇಂದು ದೇಶೀಯ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ. ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.20ರಷ್ಟು ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 37,650 ರೂ. ಆಗಿದೆ. 
 

click me!