ಬಿಜೆಪಿ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವರು ಬದಲಾಗಲಿದ್ದಾರೆ ಎಂದು ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಸಿಎಂ ಯಡಿಯೂರಪ್ಪ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯಗೆ ಸ್ವಪಕ್ಷದಲ್ಲಿ ಅಸಮಧಾನ ವ್ಯಕ್ತವಾಗಿದೆ. ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಸೈನ್ಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಅನನ್ಯ ಜೊತೆ ದೇವರಕೊಂಡ ರೋಮ್ಯಾನ್ಸ್, ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನಾವರಣ ಸೇರಿದಂತೆ ಮಾರ್ಚ್ 1 ರ ಟಾಪ್ 10 ಸುದ್ದಿ ಇಲ್ಲಿವೆ.
ಮತ್ತೊಮ್ಮೆ ಸಚಿವ ಶಾಸಕರು ಬದಲಾಗ್ತಾರಾ..? ಡಿಕೆಶಿ ನುಡಿದ್ರು BJP ಭವಿಷ್ಯ...
undefined
ಬಿಜೆಪಿಯಲ್ಲಿ ಮತ್ತೊಮ್ಮೆ ರೀಷಫಲ್ ಆಗಲಿದೆ ಎಂದು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ನೆರಳನ್ನು ನಾನು ನಂಬಲು ಆಗುತ್ತಿಲ್ಲ. ಬೇರೆ ಕ್ಷೇತ್ರದವರಂತೆ ರಾಜಕಾರಣಿಗಳೂ ಬದಲಾಗಿದ್ದಾರೆ ಎಂದಿದ್ದಾರೆ.
ಬಿಎಸ್‌ವೈ ಹುಟ್ಟುಹಬ್ಬಕ್ಕೆ ಹೋದ ಸಿದ್ದುಗೆ ಕಾಂಗ್ರೆಸ್ಸಲ್ಲೇ ವಿರೋಧ...
ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಹೋಗಿದ್ದ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸಿನಕ್ಕೇ ವಿರೋಧ ವ್ಯಕ್ತವಾಗಿದೆ. ಹಲವು ನಾಯಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೇಶಮುಂಡನದಿಂದ ತಿಮ್ಮಪ್ಪಗೆ 106 ಕೋಟಿ ರೂ ಆದಾಯ
ತಿರುಪತಿ-ತಿರುಮಲ ವೆಂಕಟೇಶ್ವರ ದೇವಸ್ಥಾನದ 2020-21ನೇ ಸಾಲಿನ ಬಜೆಟ್‌ಅನ್ನು ಶನಿವಾರ ಮಂಡಿಸಲಾಯಿತು. ಬಜೆಟ್ 3,310 ಕೋಟಿ ರು. ಗಾತ್ರದ್ದಾಗಿದೆ.
2ನೇ ಟೆಸ್ಟ್: ಮತ್ತೊಂದು ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್ ಮುಂದುವರೆದಿದೆ. ಎರಡನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 90 ರನ್ ಬಾರಿಸಿದೆ. ಇದರೊಂದಿಗೆ ಒಟ್ಟಾರೆ 97 ರನ್‌ಗಳ ಮುನ್ನಡೆ ಪಡೆದಿದೆ. ಒಂದೇ ದಿನ ಉಭಯ ತಂಡಗಳ ಒಟ್ಟು 16 ವಿಕೆಟ್‌ಗಳು ಉರುಳಿವೆ.
ಹೆಲ್ಮೆಟ್ ಇಲ್ಲದೆ ದೇವರಕೊಂಡ ಸ್ಟಂಟ್; ಅನನ್ಯ ಪಾಂಡೆ ಜೊತೆ ರೋಡಲ್ಲೇ ರೊಮ್ಯಾನ್ಸ್!
ಬಾಲಿವುಡ್‌ನಲ್ಲಿ ವಿಜಯ್‌ಗೆ ಅವಕಾಶಗಳು ಕೈ ಬೀಸಿ ಕರೆಯುತ್ತಿದೆ. ಕರಣ್ ಜೊಹಾರ್ ನಿರ್ಮಾಣದಲ್ಲಿ ಅನನ್ಯಾ ಪಾಂಡೆಗೆ ಜೋಡಿಯಾಗಿ ಮಿಂಚಲಿರುವ ವಿಜಯ್ ಹೊಸ ಸಾಹಸಕ್ಕೆ ಸೈ ಎಂದಿದ್ದಾರೆ. ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ಮೇಲೆ ಅನನ್ಯಾ ಪಾಂಡೆ ಹಿಂತಿರುಗಿ ಕೂತರೆ ವಿಜಯ್ ರೈಡ್ ಮಾಡುತ್ತಿದ್ದಾರೆ.
ವಿಶ್ವದ ನಂ.9 ಶ್ರೀಮಂತ ; ಪ್ರತಿ ಗಂಟೆಗೆ ಅಂಬಾನಿ ಗಳಿಕೆ 7 ಕೋಟಿ!
‘ಹುರುನ್ ಜಾಗತಿಕ ಶ್ರೀಮಂತರ ಪಟ್ಟಿ-2020’ರಲ್ಲಿ ಅಂಬಾನಿ ಅವರು 4.8 ಲಕ್ಷ ಕೋಟಿ ರು. ಆಸ್ತಿಯ ಧನಿಕರು ಎಂದು ತಿಳಿಸಲಾಗಿದೆ. ಅವರ ಆಸ್ತಿ ಮೌಲ್ಯ ಕಳೆದ ಸಲಕ್ಕಿಂತ ಸುಮಾರು 93 ಸಾವಿರ ಕೋಟಿ ರು. ಹೆಚ್ಚಿದೆ.
ಬಿಗ್‌ಬಾಸ್‌ನಿಂದ ಹೊರಬಿದ್ದ ಮೇಲೆ ಶುರುವಾಯ್ತು ಮೋಜು-ಮಸ್ತಿ; ಇದಕ್ಕೆ ದೀಪಿಕಾ ದಾಸ್ ಕಾರಣ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-7 ಸ್ಪರ್ಧಿಗಳು ಮನೆ ಹೊರಗೆ ಒಟ್ಟಾಗಿ ಸೇರಿ ಮೋಜು ಮಸ್ತಿ ಮಾಡಿದ್ದಾರೆ. ಇದಕ್ಕೆ ಕಾರಣ ನಾಗಿಣಿ ಅಲಿಯಾಸ್ ದೀಪಿಕಾ ದಾಸ್!
ವಿಶ್ವದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನಾವರಣ, ತಿಂಗಳಿಗೆ 1,500 ರೂ!
ಭಾರತ ಸೇರಿದಂತೆ ವಿಶ್ವವೇ ಇದೀಗ ಎಲೆಕ್ಟ್ರಿಕ್ ಕಾರಿನತ್ತ ಚಿತ್ತ ಹರಿಸಿದೆ. ಇದೀಗ ಫ್ರೆಂಚ್ ಆಟೋಮೇಕರ್ ಸಿಟ್ರೋನ್ ವಿಶ್ವದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಸಣ್ಣ ಎಲೆಕ್ಟ್ರಿಕ್ ಕಾರು ಇದೀಗ ಸಂಚಲನ ಮೂಡಿಸಿದೆ. ಕಾರಣ ತಿಂಗಳಿಗೆ 1500 ರೂಪಾಯಿ ಪಾವತಿಸಿದರೆ ಈ ಕಾರು ನಿಮ್ಮದಾಗಲಿದೆ.
ಕರ್ನಾಟಕ ಅಂಚೆ ವೃತ್ತದಲ್ಲಿ ವಿವಿಧ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
ಕರ್ನಾಟಕ ಪೋಸ್ಟಲ್ ಸರ್ಕಲ್ ನಲ್ಲಿ ಕ್ರೀಡಾ ಕೋಟಾದಡಿಯಲ್ಲಿ 44 ಜ್ಯೂನಿಯರ್ ಅಕೌಂಟೆಂಟ್, ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್ ಮತ್ತು ಪೋಸ್ಟ್‌ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ.
ಚಿಕ್ಕಮಗಳೂರು: ಆಸ್ಪತ್ರೆಯಲ್ಲೇ ಬೆತ್ತಲಾಗಿ ಮಲಗಿದ ಸರ್ಕಾರಿ ಡಾಕ್ಟರ್!...
ಈ ವೈದ್ಯನ ಅವಾಂತರಕ್ಕೆ ರೋಗಿಗಳು ಕಂಗಾಲಾಗಿದ್ದಾರೆ. ಚಿಕಿತ್ಸೆ ನೀಡಪ್ಪಾ ಎಂದು ಹೋದರೆ ವೈದ್ಯ ಫುಲ್ ಟೈಟಾಗಿ ಆಸ್ಪತ್ರೆಯಲ್ಲೆ ಬೆತ್ತಲಾಗಿ ಮಲಗಿದ್ದಾನೆ.