
ಬೆಂಗಳೂರು, (ಮಾ. 01): ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು [ಸಿಸಿಬಿ] ಬೆಂಗಳೂರಿಲ್ಲಿ ಸೆಕ್ಸ್ ರಾಕೆಟ್ ಭೇದಿಸಿದ್ದಾರೆ. ಬೆಂಗಳೂರಿನ HSR ಲೇಔಟ್‌ನ ಸ್ಪಾವೊಂದರ ಮೇಲೆ ಇಂದು [ಭಾನುವಾರ] ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ, 6 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ಪೀಟರ್ ಸುನವರ್ (34), ರಾಜ್‍ಕುಮಾರ್ (48) ಬಂಧಿತ ಆರೋಪಿಗಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದು, ನಾಪತ್ತೆಯಾಗಿರುವ ಸ್ಪಾ ಮಾಲೀಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಚಿಕ್ಕಮಗಳೂರು: ಆಸ್ಪತ್ರೆಯಲ್ಲೇ ಬೆತ್ತಲಾಗಿ ಮಲಗಿದ ಸರ್ಕಾರಿ ಡಾಕ್ಟರ್!
ಮೇಲ್ನೋಟಕ್ಕೆ ಸ್ಪಾ, ಮಸಾಜ್ ನಡೆಸುವಂತೆ ನಾಟಕವಾಡುತ್ತಾ ಒಳಗೊಳಗೆ ವೇಶ್ಯಾವಾಟಿಕೆ ನಡೆಯುತ್ತಿತ್ತು. ಈ ವಿಷಯದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸ್ ದಾಳಿ ಮಾಡಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೊಂದೇ ಪ್ರಕರಣವಲ್ಲ. ಸ್ಪಾ, ಮಸಾಜ್ ಸೆಂಟರ್ ಬೋರ್ಡ್ ಹಾಕಿಕೊಂಡು ಒಳಗೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಎಗ್ಗಿಲ್ಲದೇ ನಡೆಯುತ್ತಿವೆ.
ಇನ್ನು ದುರದೃಷ್ಟಕರ ಅಂದ್ರೆ ಕೆಲ ಕಡೆಗಳಲ್ಲಿ ಈ ರೀತಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಪೊಲೀಸರಿಗೆ ಗೊತ್ತಿದ್ದರೂ ಕಮಿಷನ್ ಪಡೆದು ಏನು ಗೊತ್ತಿಲ್ಲದಂತೆ ತೆಪ್ಪೆಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ