ಡಿಕೆಶಿ ಪರ ಪ್ರತಿಭಟನೆ; MTB ಬಾಯಲ್ಲಿ ಉಪಚುನಾವಣೆ; ಇಲ್ಲಿವೆ ಸೆ.11ರ ಟಾಪ್ 10 ಸುದ್ದಿ!

By Web DeskFirst Published Sep 11, 2019, 4:46 PM IST
Highlights

ಇಡಿಯಿಂದ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಪರ ರಾಜ್ಯದಲ್ಲಿಂದು ಒಕ್ಕಲಿಗರ ಸಮುದಾಯ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಡಿಕೆಶಿ ಪರ ಪ್ರತಿಭನೆಯಿಂದ ವಾಹನ ಸವಾರರು ಪರದಾಡಿದ್ದು ಮಾತ್ರವಲ್ಲ ಹಿಡಿ ಶಾಪ ಹಾಕಿದ್ದು ಸುಳ್ಳಲ್ಲ. ರಾಜ್ಯ ರಾಜಕೀಯದಲ್ಲಿ ಡಿಕೆಶಿ ಮಾತ್ರವಲ್ಲ,  ಅನರ್ಹ ಶಾಸಕ MTB ನಾಗರಾಜ್, ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾಗಿ ಸಂಚಲನ ಮೂಡಿಸಿದ್ದಾರೆ. ಸೈಲೆಂಟ್ ಆಗಿದ್ದ ನಟಿ ರಾಧಿಕ ಕುಮಾರಸ್ವಾಮಿ ದಿಢೀರ್ ಪ್ರತ್ಯಕ್ಷಗೊಂಡಿದ್ದಾರೆ. ಸ್ಯಾಂಡಲ್‌ವುಡ್ ಸ್ವೀಟಿ ಹೊಸ ಅವತಾರ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಬೀಚ್ ಫೋಟೋ, ಪ್ರಧಾನಿ ಮೋದಿ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಸೇರಿದಂತೆ ಹಲವು ವಿಚಾರ ಇಂದು ಸದ್ದು ಮಾಡಿದೆ. ಸೆಪ್ಟೆಂಬರ್ 11 ರ ಟಾಪ್ 10 ಸುದ್ದಿಗಳು ಇಲ್ಲಿವೆ.

1) ಇಡಿ ವಶದಲ್ಲಿದ್ದರೂ ಟ್ವೀಟ್ ಮಾಡಿದ ಡಿಕೆಶಿ... ಒಂದೇ ಮಾತು

ರಾಜಕೀಯ ದ್ವೇಷದ ಕಾರಣದಿಂದ ನಾನು ಟಾರ್ಗೆಟ್ ಆಗಿದ್ದೇನೆ ಎಂದು ಡಿಕೆ ಶಿವಕುಮಾರ್ ಟ್ವಿಟ್ ಮಾಡಿದ್ದಾರೆ. ಇಡಿ ವಶದಲ್ಲಿ  ಇದ್ದರೂ ಭೇಟಿಯಾದ ಕುಂಟುಬಸ್ಥರ ಬಳಿ ಹೇಳಿಸಿ  ಟ್ವೀಟ್  ಮಾಡಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.


2) DKS ಪ್ರತಿಭಟನೆ ಜೈ ಎಂದು ಕೊನೆ ಘಳಿಗೆಯಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಉಲ್ಟಾ

ಡಿಕೆಶಿ ಪರ ಕೇಂದ್ರದ ವಿರುದ್ಧದ ಹೋರಾಟಕ್ಕೆ ಕರವೇ ಕರೆ ಕೊಟ್ಟಿಲ್ಲ, ನಾನು ಕೇವಲ ಡಿಕೆಶಿ ಹಿತೈಷಿಯಾಗಿ ಪ್ರತಿಭಟನೆಗೆ ಬೆಂಬಲ ನೀಡುತ್ತೇನೆ ಎನ್ನುವ ಮೂಲಕ ನಾರಾಯಣಗೌಡ ಕೊನೆ ಗಳಿಗೆಯಲ್ಲಿ ಉಲ್ಟಾ ಹೊಡೆದಿದ್ದಾರೆ. ಈ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯಲ್ಲಿ ಭಾಗಿಯಾಗುತ್ತದೆ ಎಂಬ ವಿವಾದಕ್ಕೆ ತೆರೆ ಎಳೆದಿದ್ದಾರೆ.


3) ರಾಜಕೀಯ ಹೈಡ್ರಾಮಾ: ಗೃಹ ಬಂಧನದಲ್ಲಿ ಮಾಜಿ ಮುಖ್ಯಮಂತ್ರಿ!

 


ಆಂಧ್ರದ ದ್ವೇಷ ರಾಜಕಾರಣ ಮತ್ತೊಂದು ಮಜಲು ತಲುಪಿದ್ದು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಗೃಹ ಬಂಧನಕ್ಕೆ ಗುರಿಪಡಿಸಲಾಗಿದೆ. 

4) ಸಿಎಂ ಭೇಟಿಯಾದ ಎಂಟಿಬಿ : ಉಲ್ಟಾ ಹೊಡೆದ ಅನರ್ಹ ಶಾಸಕ

ಶೀಘ್ರದಲ್ಲಿ ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದ್ದಾರೆ. 

 

5) #INDvSA ಸರಣಿಗೂ ಮುನ್ನ ವಿರುಷ್ಕಾ ರಿಲ್ಯಾಕ್ಸ್; ಬೀಚ್ ಫೋಟೋಗೆ ಫ್ಯಾನ್ಸ್ ಟ್ವೀಟ್ !

ವೆಸ್ಟ್ ಇಂಡೀಸ್ ಸರಣಿ ಮುಗಿಸಿದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಕೆರಿಬಿಯನ್ ನಾಡಿನಲ್ಲಿ ಸುತ್ತಾಟ ನಡೆಸಿದ್ದರು.  ಕೆಲ ದಿನಗಳ ಹಿಂದೆ ತವರಿಗೆ ಆಗಮಿಸಿದ ವಿರುಷ್ಕಾ ಜೋಡಿ ಮುಂಬೈನಲ್ಲಿ ತಂಗಿತ್ತು. ಇದೀಗ ಸೌತ್ ಆಫ್ರಿಕಾ ಸರಣಿಗೆ ಕೆಲ ದಿನ ಬಾಕಿ ಇರುವಾಗಲೇ ಸಾಮಾಜಿಕ ಜಾಲತಾಣದಲ್ಲಿನ ಫೋಟೋ ಸಖತ್ ಸದ್ದು ಮಾಡುತ್ತಿದೆ.

6) ರಾಧಿಕಾ ಕುಮಾರಸ್ವಾಮಿಯ ದಮಯಂತಿ ಟೀಸರ್‌ ಲಾಂಚ್‌‌ಗೆ ಡೇಟ್ ಫಿಕ್ಸ್

ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಎಲ್ಲರಿಗೂ ನೆರವಾಗುವ ಅಮ್ಮನಂಥ ಪಾತ್ರದಲ್ಲಿ ನಟಿಸಿರುವ ದಮಯಂತಿ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಈಗ್ಗೆ ಕೆಲವು ವರ್ಷಗಳಿಂದ ಅಜ್ಞಾತವಾಗಿದ್ದ ರಾಧಿಕಾ ಅವರು ನಾಲ್ಕು ಚಿತ್ರಗಳು ಒಂದರ ನಂತರ ಬಿಡುಗಡೆಗೆ ಸಿದ್ಧವಾಗಿದ್ದು, ಅಭಿಮಾನಿಗಳು ಫುಲ್ ನಿರೀಕ್ಷೆಯಲ್ಲಿದ್ದಾರೆ. 

7) ನನ್ನನ್ನು ಯಾರೂ ಆಹ್ವಾನಿಸಿಲ್ಲ : ಅದಕ್ಕೆ ಪ್ರತಿಭಟನೆಗೆ ಹೋಗಿಲ್ಲ

ರಾತ್ರಿ ಹೊತ್ತು ಎಣ್ಣೆ ಪಾರ್ಟಿ ಮಾಡೋದು ಕಾಮನ್. ಇದೀಗ ಹಾಡಹಗಲೇ, ಅದೂ ನಡು ರಸ್ತೆಯಲ್ಲೇ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ರೂ ಕುಡುಕ ಮಹಾಶಯ ಮಾತ್ರ ಒಂದಿಷ್ಟೂ ವಿಚಲಿತನಾಗದೆ ರಸ್ತೆಯಲ್ಲೇ ಪಾರ್ಟಿ ಮಾಡ್ತಿದ್ದಾನೆ.


8) ಮೋದಿಗೀಗ 5 ಕೋಟಿ ಟ್ವಿಟರ್ ಹಿಂಬಾಲಕರು: ವಿಶ್ವದ 3ನೇ ನಾಯಕ!

ಮಾಜಿಕ ಜಾಲತಾಣಗಳ ಮೂಲಕ ಜನ ಸಮುದಾಯವನ್ನು ತಲುಪುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಟ್ವೀಟರ್‌ನಲ್ಲಿ 5 ಕೋಟಿಗೂ ಅಧಿಕ ಹಿಂಬಾಲಕರನ್ನು ಸಂಪಾದಿಸಿದ್ದಾರೆ. ಈ ಮೂಲಕ ಟ್ವಿಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

9) ಲುಂಗಿ ಧರಿಸಿದರೆ ಲಾರಿ ಚಾಲಕರಿಗೆ 2000 ರು. ದಂಡ!

ದೂರದ ಸ್ಥಳಗಳಿಗೆ ತೆರಳುವ ಟ್ರಕ್ ಹಾಗೂ ಲಾರಿ ಚಾಲಕರು ಆರಾಮದಾಯಕವಾಗಿರಲಿದೆ ಎಂಬ ಕಾರಣಕ್ಕೆ ಲುಂಗಿ ಧರಿಸುವುದು ಮಾಮೂಲಿ ಸಂಗತಿ. ಆದರೆ, ಉತ್ತರ ಪ್ರದೇಶದಲ್ಲಿ ಇನ್ನುಮುಂದೆ ಲಾರಿ ಚಾಲಕರು ಲುಂಗಿ ಧರಿಸುವಂತೆ ಇಲ್ಲ.

10) ವಾಹನ ಸವಾರರಿಗೆ ಗುಡ್‌ ನ್ಯೂಸ್: ಕರ್ನಾಟಕದಲ್ಲೂ ದುಬಾರಿ ದಂಡಕ್ಕೆ ಬ್ರೇಕ್?


ಗುಜರಾತ್ ಸರ್ಕಾರ ಈಗಾಗಲೇ ದುಬಾರಿ ದಂಡಕ್ಕೆ ಶೇ. 50ರಷ್ಟು ಬ್ರೇಕ್ ಹಾಕಲಾಗಿದೆ. ಇದೀಗ ವಾಹನ ಸವಾರರ ತೀವ್ರ ವಿರೋಧದ ಬೆನ್ನಲ್ಲಿ ಕರ್ನಾಟಕವೂ ದುಬಾರಿ ದಂಡಕ್ಕೆ ಮುಕ್ತಿ ನೀಡುವ ಸಾಧ್ಯತೆಗಳಿವೆ. ದಂಡದ ಮೊತ್ತದಲ್ಲಿ ಗಣನೀಯ ಕಡಿತ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸುವ ಎಲ್ಲಾ ಸಾಧ್ಯತೆಗಳು ಇವೆ.

click me!