BJP ನಾಯಕ ಕಾಂಗ್ರೆಸ್‍‌ಗೆ ಆಗಮನ,ರಾಮನಗರದಲ್ಲಿ ಶಂಕಿತರ ಬಂಧನ; ನ.11ರ ಟಾಪ್ 10 ಸುದ್ದಿ!

By Web Desk  |  First Published Nov 11, 2019, 4:44 PM IST

ಉಪ ಚುನಾವಣೆಗೆ ರಾಜ್ಯ ಬಿಜೆಪಿ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಮಾಜಿ ಶಾಸಕ ಪಕ್ಷ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತಿಬ್ಬರು ಬಿಜೆಪಿ ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಬೆಂಗಳೂರು ಸನಿಹದಲ್ಲಿರುವ ರಾಮನಗರದಲ್ಲಿ 8 ಶಂಕಿತರನ್ನು ಆರೆಸ್ಟ್ ಮಾಡಲಾಗಿದೆ. ಕಣ್ ಸನ್ನೆ ಮೂಲಕ ಜನಪ್ರಿಯವಾದ ಪ್ರೀಯಾ ವಾರಿಯರ್ ವಿರುದ್ದ ನಟ ಜಗ್ಗೇಶ್ ಗರಂ, ಜಾರಕಿಹೊಳಿ ಕುಟುಂಬಕ್ಕೆ ಶಾಕ್ ಸೇರಿದಂತೆ ನ.11ರ ಟಾಪ್ 10 ಸುದ್ದಿ ಇಲ್ಲಿವೆ.
 


1) ರಾಮನಗರದಲ್ಲಿ ಇಬ್ಬರು ಮಹಿಳೆಯರು ಸೇರಿ 8 ಶಂಕಿತರು ಅರೆಸ್ಟ್

Latest Videos

undefined

ಇಬ್ಬರು ಮಹಿಳೆಯರೂ ಸೇರಿದಂತೆ ಮನೆಯೊಂದರಲ್ಲಿ ಅಕ್ರಮವಾಗಿ ನೆಲೆಸಿದ್ದ ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿರುವ ಘಟನೆ ನಗರದ ಐಜೂರು ಬಡಾವಣೆಯಲ್ಲಿ ಭಾನುವಾರ ನಡೆದಿದೆ. ಆರೋಪಿಗಳಿಂದ 700 ಗ್ರಾಂ ಚಿನ್ನದ ಬಿಸ್ಕತ್, ಡ್ರ್ಯಾಗರ್, ಲಾಂಗ್, ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಯಾವುದೇ ಅಧಿಕೃತ ಗುರುತಿನ ಚೀಟಿ, ದಾಖಲೆಗಳನ್ನು ಹೊಂದಿರದ ಇವರು ಅಕ್ರಮ ಬಾಂಗ್ಲಾ ವಲಸಿಗರಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ.


 2) ಅನೈತಿಕ ಸಂಬಂಧಕ್ಕೆ ಒಪ್ಪದ ಸೊಸೆಯನ್ನೇ ಕೊಂದ ಮಾವ..!

ಅನೈತಿಕ ಸಂಬಂಧಕ್ಕೆ ಪೀಡುಸುತ್ತಿದ್ದ ಮಾವ ತನ್ನ ಸೊಸೆಯನ್ನೇ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ತನ್ನ ಸೊಸೆ ವೀಣಾ(26) ಎಂಬುವವರನ್ನೇ ಗ್ರಾಮದ ಆರೋಪಿ ನಾಗರಾಜು ಕೊಲೆ ಮಾಡಿದ್ದಾರೆ.

3) ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ SP ರವಿ ಚನ್ನಣ್ಣನವರ್

ಹಲವು ರೀತಿಯ ಸಾಮಾಜಿಕ ಕಾಝಿಯ ಮೂಲಕ ಹೆಸರಾದ ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಮತ್ತೊಂದು ಸಾಮಾಜಿಕ ಕಳಕಳಿಯ ಕೆಲಸ ಮಾಡಿ ಸುದ್ದಿಯಾಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ.

4) ರಂಗೇರಿದ ಉಪಚುನಾವಣಾ ಅಖಾಡ; ಜಾರಕಿಹೊಳಿ ಕುಟುಂಬಕ್ಕೆ ಶಾಕ್!

ಕರ್ನಾಟಕ ಉಪಸಮರ ಕಣ ರಂಗೇರಿದೆ. ಮತದಾನ ನಡೆಯಲಿರುವ 15 ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ರಾಜ್ಯ ರಾಜಕೀಯದ ಕೇಂದ್ರ ಬಿಂದುವಾಗಿರುವ ಬೆಳಗಾವಿಯಲ್ಲಿ ಈಗ ಅನಿರೀಕ್ಷಿತ ಬೆಳವಣಿಗೆಗಳು ನಡೆಯುವ ಲಕ್ಷಣಗಳು ಕಂಡುಬರುತ್ತಿವೆ.  

5)

ಉಪಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ. ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಈಗಾಗಲೆ ಕಾಂಗ್ರೆಸ್ ಸೇರುವುದಾಗಿ ಧಿಕೃತವಾಗಿ ಪ್ರಕಟಿಸಿದ್ದಾರೆ. ಅದರ ಬೆನ್ನಲ್ಲೇ ಮತ್ತಿಬ್ಬರು ಬಿಜೆಪಿ ನಾಯಕರು ಬಂಡಾಯದ ಸುಳಿವು ಕೊಟ್ಟಿದ್ದಾರೆ. 

6) ಚೀನಾ: ಮನುಷ್ಯ ಮುಖ ಹೋಲುವ ಮೀನು ಪತ್ತೆ!

ಪ್ರಾಣಿಗಳು ಮನುಷ್ಯ ರೂಪ ತಾಳುವುದನ್ನು ಸಿನಿಮಾಗಳಲ್ಲಿ ಮಾತ್ರ ಕಾಣುತ್ತೇವೆ. ಆದರೆ, ಚೀನಾದ ಸರೋವರವೊಂದರಲ್ಲಿ ಮೀನೊಂದು ಮನುಷ್ಯನಂತೆಯೇ ಮುಖ, ಮೂಗು, ಬಾಯಿ, 2 ಕಣ್ಣು ಹೊಂದಿದ್ದು, ನೋಡುಗರ ಅಚ್ಚರಿಗೆ ಕಾರಣವಾಗಿದೆ.

7) ಗಣ್ಯರ ಜೊತೆ ವೇದಿಕೆ ಹಂಚಿಕೊಂಡ ಪ್ರಿಯಾ ವಾರಿಯರ್‌ಗೆ ಕ್ಲಾಸ್ ತೆಗೆದುಕೊಂಡ ಜಗ್ಗೇಶ್

ಒಕ್ಕಲಿಗ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್‌ಗೆ ಮೇಲೆ ನವರಸ ನಾಯಕ ಗರಂ ಆಗಿದ್ದಾರೆ. ಕೇವಲ ಕಣ್ ಸನ್ನೆ ಮೂಲಕ ಫೇಮಸ್‌ ಆದ ನಟಿ ವೇದಿಕೆ ಮೇಲೆ ಕೂರಲು ಅರ್ಹಳಾ? ಎಂಬುವುದು ನಟ ಜಗ್ಗೇಶ್ ಪ್ರಶ್ನೆಯಾಗಿದೆ. ಇದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


8) ದರ್ಶನ್ ಜೊತೆಗಿನ ನಂಟು ಬಿಚ್ಚಿಟ್ಟ 'ಜೊತೆ ಜೊತೆಯಲಿ' ಅನು!

ಇನೋಸೆಂಟ್ ಆ್ಯಂಡ್ ಆಟ್ರಾಕ್ಟಿವ್ ಹುಡುಗಿ ಅನು ಸಿರಿಮನೆ ದರ್ಶನ್ ಬಗ್ಗೆ ಕೊಟ್ಟ ಹೇಳಿಕೆ ಈಗ ಸ್ಯಾಂಡಲ್‌ವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಸಂದರ್ಶನದಲ್ಲಿ ಅನು ನೀಡಿರುವ ಹೇಳಿಕೆ ಇದೀಗ ಸ್ಯಾಂಡಲ್‌ವುಡ್‌ನಲ್ಲೂ ಸಂಚಲನ ಸೃಷ್ಟಿಸಿದೆ.


9) ಭಾರತಕ್ಕೆ ಕಾಲಿಡುತ್ತಿದೆ ಚೀನಾ ಗ್ರೇಟ್ ವಾಲ್ ಕಾರು; ಕರ್ನಾಟಕದಲ್ಲಿ ಘಟಕ?

ಚೀನಾ ಮೂಲಕ ಗ್ರೇಟ್ ವಾಲ್ ಮೋಟಾರ್ಸ್ ಭಾರತದಲ್ಲಿ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಭಾರತದಲ್ಲೇ ಉತ್ಪದನಾ ಘಟಕ ನಿರ್ಮಿಸಿ ಕಾರು ವಹಿವಾಟ ನಡೆಸಲು ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 7,000 ಕೋಟಿ ರೂಪಾಯಿ ಬಂಡವಾಳ ಹೂಡುತ್ತಿದೆ.

10) ಮಹಾರಾಷ್ಟ್ರ ಬಿಕ್ಕಟ್ಟಿನ ಬೆನ್ನಲ್ಲೇ ಮೋದಿ ಸರ್ಕಾರಕ್ಕೆ ಮತ್ತೊಂದು ಆಘಾತ

ಮಹಾರಾಷ್ಟ್ರ ರಾಜಕೀಯದಲ್ಲಿ ಹೈಡ್ರಾಮಾ ಶುರುವಾಗಿದೆ. ಸರ್ಕಾರ ರಚನೆಯಾಗುವ ಮುನ್ನವೇ ಬಿಜೆಪಿ ಮತ್ತು ಶಿವಸೇನೆ ಮೈತ್ರಿ  ಅಂತ್ಯಕಾಣುವ ಲಕ್ಷಣಗಳು ಗೋಚರಿಸಿವೆ. ವಿಧಾನಸಭೆ ಫಲಿತಾಂಶ ಪ್ರಕಟವಾಗಿ 17 ದಿನಗಳು ಕಳೆದಿದ್ದರೂ,  ಬಿಜೆಪಿ-ಶಿವಸೇನೆ ಸಂಬಂಧ ಇನ್ನೂ ಹದಗೆಡುತ್ತಲೇ ಇದೆ. ಈ ನಡುವೆ ಶಿವಸೇನೆಯ ಕೇಂದ್ರ ಸಚಿವ ರಾಜೀನಾಮೆ ನೀಡಿದ್ದಾರೆ.

click me!