ರಾಗಿಣಿಗೆ ಉರುಳಾದ ರವಿಶಂಕರ್; CSKಯಿಂದ ಹೊರ ನಡೆದ ಟರ್ಭನೇಟರ್: ಸೆ.4ರ ಟಾಪ್ 10 ಸುದ್ದಿ!

By Suvarna NewsFirst Published Sep 4, 2020, 5:05 PM IST
Highlights

ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ತನಿಖೆ ತೀವ್ರಗೊಳ್ಳುತ್ತಿದಂದೆ ಹೊಸ ಮಾಹಿತಿ ಬಯಲಾಗುತ್ತಿದೆ. ರಾಜಕಾರಣಕ್ಕೂ ಡ್ರಗ್ಸ್ ಘಾಟು ಬಡಿಯುತ್ತಿದೆ ಅನ್ನೋ ಆರೋಪವೂ ಕೇಳಿ ಬಂದಿದೆ. ಇತ್ತ ನಟಿ ರಾಗಿಣಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಅನ್ನೋ ಆಪ್ತನ ಹೇಳಿಕೆ ಸಂಚಲನ ಮೂಡಿಸಿದೆ. ಸಿಎಸ್‌ಕೆ ತಂಡದಿಂದ ಹರ್ಭಜನ್ ಸಿಂಗ್ ಹೊರನಡೆದಿದ್ದಾರೆ. ಭಾರತದ ಮರದ ಸೈಕಲ್‌ಗೆ ವಿದೇಶಿದಿಂದ ಬೇಡಿಕೆ, ನಿರ್ದೇಶಕನಾಗುವತ್ತ ಶಿವರಾಜ್‌ಕುಮಾರ್ ಸೇರಿದಂತೆ ಸೆಪ್ಟೆಂಬರ್ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

'ರಾಗಿಣಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು'; ಕೊನೆಗೂ ಬಾಯ್ಬಿಟ್ಟ ಆಪ್ತ ರವಿಶಂಕರ್..!...

'ತುಪ್ಪದ ಹುಡುಗಿ'ಗೆ ಆಪ್ತನಿಂದಲೇ ಸಂಕಷ್ಟ ಎದುರಾಗಿದೆ. ರಾಗಿಣಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬ ಸ್ಫೋಟಕ ವಿಚಾರವನ್ನು ರವಿಶಂಕರ್ ಬಾಯ್ಬಿಟ್ಟಿದ್ಧಾರೆ. 


ಆ್ಯಪ್‌ ನಿಷೇಧಿಸಿದ್ದಕ್ಕೆ ಚೀನಾ ಸಿಡಿಮಿಡಿ..!...

118 ಚೀನಿ ಆ್ಯಪ್‌ಗಳನ್ನು ನಿಷೇಧಿಸಿದ ಭಾರತದ ಕ್ರಮವು ಚೀನಾ ಹೂಡಿಕೆದಾರರ ಮತ್ತು ಸೇವಾದಾರರ ಕಾನೂನು ಹಿತಾಸಕ್ತಿಗಳನ್ನು ಉಲ್ಲಂಘಿಸುತ್ತದೆ. ರಾಷ್ಟ್ರೀಯ ಭದ್ರತೆಯ ಪರಿಕಲ್ಪನೆಯನ್ನು ಭಾರತ ಸರ್ಕಾರವು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ರಧಾನಿ ಮೋದಿಗೆ ಜೀವ ಬೆದರಿಕೆ: ಭಾರೀ ಭದ್ರತೆ ನಿಯೋಜನೆ...

ಪ್ರಧಾನಿ ಮೋದಿಗೆ ಜೀವಕ್ಕೆ ಬೆದರಿಕೆ ಒಡ್ಡುವ ಇ- ಮೇಲ್‌ವೊಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಲಭ್ಯವಾಗಿದ್ದು, ಭಾರಿ ಸಂಚಲನಕ್ಕೆ ಕಾರಣವಾಗಿದೆ. 

ಧೋನಿ ಪಡೆಗೆ ಮತ್ತೊಂದು ಶಾಕ್: ಸಿಎಸ್‌ಕೆ ತಂಡದಿಂದ ಹೊರಬಿದ್ದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ..!...

ಸುರೇಶ್ ರೈನಾ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದ ಆಘಾತದಿಂದ ಹೊರಬರುವ ಮುನ್ನವೇ ಇದೀಗ ಮತ್ತೊಬ್ಬ ಅನುಭವಿ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ. 

ನಿರ್ದೇಶಕನಾಗುವ ನನ್ನ ಕನಸಿಗೆ ಉಪ್ಪಿ ಸ್ಫೂರ್ತಿ: ಶಿವರಾಜ್‌ಕುಮಾರ್...

ಶಿವಣ್ಣ ಮಾತಿಗೆ ಕೂತರೆ ಹಳೆಯದು, ಹೊಸದು ಮತ್ತು ಭವಿಷ್ಯದ ಕನಸು ಎಲ್ಲವೂ ಬಂದು ಹೋಗುತ್ತವೆ. ‘ಕಬ್ಜ’ ಚಿತ್ರದ ವೆಬ್‌ಸೈಟ್‌ ಅನಾವರಣ ಕಾರ್ಯಕ್ರಮದಲ್ಲಿ ಮಾತಿಗೆ ಸಿಕ್ಕಾಗ ಹಲವು ಆಸಕ್ತಿ ವಿಷಯಗಳನ್ನು ಹಂಚಿಕೊಂಡರು. ಈ ಪೈಕಿ ತಾವು ನಿರ್ದೇಶಕನಾಗಬೇಕು ಎನ್ನುವ ಕನಸು ಹುಟ್ಟಿಕೊಂಡಿದ್ದು ಹೇಗೆ ಎನ್ನುವುದನ್ನೂ ತೆರೆದಿಟ್ಟಿದ್ದಾರೆ.

ಕಾರ್ಪೆಂಟರ್ ನಿರ್ಮಿಸಿದ ಮರದ ಸೈಕಲ್‌ಗೆ ಭಾರಿ ಬೇಡಿಕೆ; ಕೆನಡ, ಸೌತ್ಆಫ್ರಿಕಾದಿಂದ ಆರ್ಡರ್!

ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ವೇಳೆ ಸ್ಥಳೀಯ ಉತ್ಪನ್ನಗಳ ಬಳಕೆ ಹಾಗೂ ಪೋತ್ಸಾಹಕ್ಕೆ ಕರೆ ನೀಡಿದ್ದರು. ಬಳಿಕ ಆತ್ಮನಿರ್ಭರ್ ಭಾರತ ಮೂಲಕ ಹೊಸ ಪರಿಕಲ್ಪನೆ ಜಾರಿಗೆ ತಂದಿದ್ದಾರೆ. ಇದೀಗ ಕಾರ್ಪೆಂಟರ್ ಇದೇ ಲಾಕ್‌ಡೌನ್ ಸಂದರ್ಭದಲ್ಲಿ ಮರದಿಂದ ನಿರ್ಮಿಸಿದ ಸೈಕಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಮಯ ಸದುಪಯೋಗಪಡಿಸಿಕೊಳ್ಳಲು ಮಾಡಿದ ಮರದ ಸೈಕಲ್ ಇದೀಗ ಅತೀ ದೊಡ್ಡ ಉದ್ಯಮವಾಗಿದೆ. ಕೆನಡಾ, ಸೌತ್ ಆಫ್ರಿಕಾದಿಂದ  ಸೈಕಲ್ ಆರ್ಡರ್ ಬಂದಿದೆ.

ಹೆಣ್ಣನ್ನು ಕೂಡಿ ಸಾಯುವ ಎರಡೇ ವಾರದ ಬದುಕಿನ ಅಟ್ಲಾಸ್ ಮೊತ್ ಪತ್ತೆ...

ನಮ್ಮ ಭೂಮಿಯ ಮೇಲೆ ಅತ್ಯಂತ ವಿಶೇಷ ಜೀವಸಂಕುಲ ವಿದ್ದು, ಅದರಲ್ಲಿ ಅಟ್ಲಾಸ್ ಮೂಸ್ ಕೂಡ ಒಂದು.ಅಪರೂಪದ ಈ ಚಿಟ್ಟೆ ಇದೀಗ ಉಡುಪಿಯಲ್ಲಿ ಪತ್ತೆಯಾಗಿದೆ.

ಸಿನಿಮಾ ಜೊತೆ ರಾಜಕೀಯಕ್ಕೂ ಡ್ರಗ್ಸ್ ನಂಟು : ಸಚಿವ ಸಿ.ಟಿ.ರವಿ...

ಡ್ರಗ್ಸ್ ಮಾಫಿಯಾ ಎನ್ನುವುದು ಸಿನಿಮಾ ರಂಗ ಹಾಗೂ ರಾಜಕೀಯದೊಂದಿಗೆ ನಂಟು ಹೊಂದಿದ್ದು, ಇದೀಗ ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಸಚಿವ ಸಿ. ಟಿ ರವಿ ಹೇಳಿದರು. 

1558 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ...

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) 2020ನೇ ಸಾಲಿನ ನೇಮಕಾತಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಸುದ್ದಿಯಲ್ಲಿದೆ.

ಈತನಿಗೆ ಮನೆಯಲ್ಲಿ ಹೆಂಡತಿ, ಊರು ತುಂಬಾ ಗರ್ಲ್‌ಫ್ರೆಂಡ್ಸ್..!...

ಅವನೊಬ್ಬ ಶೋಕಿಲಾಲ. ಡೇಟಿಂಗ್ ಆಪ್‌ನಲ್ಲಿ ಚಂದ ಚಂದದ ಹುಡುಗಿಯರು ಕಂಡರೆ ಸಾಕು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಫಾರಿನ್‌ನಲ್ಲಿ ಬ್ಯುಸಿನೆಸ್‌ ಅಂತ ಕಥೆ ಕಟ್ಟಿ ಮದುವೆಯೂ ಆಗುತ್ತಿದ್ದ. ಹುಡುಗಿಯರ ದುಡ್ಡಲ್ಲಿ ಮಸ್ತ್ ಮಜಾ ಮಾಡುತ್ತಿದ್ದ. ಮನೆಯಲ್ಲಿ ಹೆಂಡತಿ, ಊರ ತುಂಬಾ ಈತನಿಗೆ ಗರ್ಲ್‌ಫ್ರೆಂಡ್ಸ್. 

click me!