ಅಂಬಿಯನ್ನು ಬೀಳ್ಕೊಡಲು ಸಿದ್ಧವಾಯ್ತು ಕಂಠೀರವ ಸ್ಟುಡಿಯೋ

By Web DeskFirst Published Nov 26, 2018, 11:07 AM IST
Highlights

ನಟ ಅಂಬರೀಶ್ ಅಂತ್ಯಕ್ರಿಯೆಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆಗಳು ನಡೆದಿವೆ. ಮಧ್ಯಾಹ್ನ 2 ಗಂಟೆಗೆ ರೆಬಲ್ ಸ್ಟಾರ್ ಅಂತ್ಯಕ್ರಿಯೆ ನಡೆಯಲಿದೆ.

ಬೆಂಗಳೂರು[ನ.26]: ಶನಿವಾರದಂದು ವಿಧಿವಶರಾದ ಖ್ಯಾತ ನಟ ಅಂಬರೀಶ್ ಅಂತ್ಯಕ್ರಿಯೆಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆಗಳು ನಡೆದಿವೆ. ಮಧ್ಯಾಹ್ನ 2 ಗಂಟೆಗೆ ರೆಬಲ್ ಸ್ಟಾರ್ ಅಂತ್ಯಕ್ರಿಯೆ ನಡೆಯಲಿದೆ.

ಕಂಠೀರವ ಸ್ಟೇಡಿಯಂ ನಲ್ಲಿ ಪೊಲೀಸ್ ಸರ್ಪಗಾವಲು

ಪೊಲೀಸ್ ಸರ್ಪಗಾವಲಿನಲ್ಲಿ ಅಂಬರೀಶ್ ಅಂತಿಮ ಯಾತ್ರೆ ಮೆರವಣಿಗೆ ಸಾಗಲಿದೆ. ಇಡೀ ಬೆಂಗಳೂರಿನಾದ್ಯಂತ 15 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕೆಎಸ್ ಆರ್ ಪಿ ತುಕಡಿ, ಟ್ರಾಫಿಕ್ ಪೊಲೀಸ್, ಲಾ ಅಂಡ್ ಆರ್ಡರ್ ಪೊಲಿಸರು ಸೇರಿ 1500 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಮೆರವಣಿಗೆ ಸಾಗುವ ವೇಳೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಮೆರವಣಿಗೆ ಉದ್ದಕ್ಕೂ 5 ಮಂದಿ ಹೆಚ್ಚುವರಿ  ಆಯುಕ್ತರು  ಹಾಗೂ 15 ಜನ ಡಿಸಿಪಿ, 30 ಕೆಎಸ್ ಆರ್ ಪಿ, ಭದ್ರತೆಯನ್ನ ಒದಗಿಸಲಿದ್ದಾರೆ. ಚಿರ ಶಾಂತಿ ವಾಹನದ ಎರಡು ಬದಿಯಲ್ಲಿ ಆರ್ ಎ ಎಫ್ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ.

ಇದನ್ನೂ ಓದಿ: ಯಾವನಿಗೆ ಬೇಕು ಸಿಎಂ ಹುದ್ದೆ ಅಂದಿದ್ದರು ಅಂಬಿ

6 ಸಾವಿರ ಆಸನ ವ್ಯವಸ್ಥೆ

ವಿವಿಐಪಿ, ವಿಐಪಿ, ಚಿತ್ರರಂಗದ ಗಣ್ಯರು ಸೇರಿದಂತೆ ಸಾರ್ವಜನಿಕರಿಗೆ ಐದು ಸಾವಿರ ಆಸನಗಳು ಹಾಗೂ ಅಂಬಿ ಕುಟುಂಬ ವರ್ಗ,  ರಾಜಕೀಯ ನಾಯಕರು, ಸಿನಿಮಾ ನಟ ನಟಿಯರಿಗಾಗಿ ಪ್ರತ್ಯೇಕ ಒಂದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಕಂಠೀರವ ಸ್ಟುಡಿಯೋಗೆ ಎರಡು ಗೇಟ್ ಮುಖಾಂತರ ಎಂಟ್ರಿ ಮಾಡಲಾಗಿದೆ. ಸಾರ್ವಜನಿಕರಿಗಾಗಿ ನಂದಿನಿ ಲೇಔಟ್ ನ ಹಿಂಬದಿ ಗೇಟ್ ಮೂಲಕ ಪ್ರವೇಶ ಕಲ್ಪಿಸಿದ್ದರೆ. ರಿಂಗ್ ರಸ್ತೆಯ ಮುಖ್ಯದ್ವಾರದಲ್ಲಿ ವಿಐಪಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಚಿತೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ನಡೆಸಿದೆ. 
ಅಂತ್ಯಕ್ರಿಯೆ ನಡೆಯುವ ಸ್ಥಳದ ನಾಲ್ಕು ದಿಕ್ಕುಗಳಲ್ಲಿ ಎಲ್ ಇಡಿ ವ್ಯವಸ್ಥೆಯನ್ನೂ ನಿರ್ಮಿಸಲಾಗಿದೆ. ಅಂತ್ಯಕ್ರಿಯೆ ನಡೆಯುವ ಸ್ಥಳ ಸುತ್ತಲೂ ಸಾರ್ವಜನಿಕರು ನುಗ್ಗದಂತೆ ಬ್ಯಾರಿಕೇಡ್ ಹಾಕಿ‌ ಬಂದೋಬಸ್ತ್ ಮಾಡಲಾಗಿದ್ದು, ಅಂತ್ಯಕ್ರಿಯೆ ನಡೆಯುವ ಸ್ಥಳ ಹಾಗೂ ಸುತ್ತಮುತ್ತ ಸಿಸಿಟಿವಿಗಳ ಅಳವಡಿಸಿದ್ದಾರೆ.

ಇದನ್ನೂ ಓದಿ: ಅಂಬಿ ಮಾಮನಿಗೆ ಸು'ದೀಪು' ನಮನ...!: ವೈರಲ್ ಆಯ್ತು ಕಿಚ್ಚನ ಪತ್ರ

ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳು: 

ನೀಲಗಿರಿ, ಉಣಸೆ ,ಹತ್ತಿ ಸಾರ್ವೆ, ಗಂಧದ ಕಡ್ಡಿಗಳು ತಯಾರಿಡಲಾಗಿದೆ. ಗಂಧದ ಚೆಕ್ಕೆ 13 ಕೆಜಿ,  ಕೊಬ್ಬರಿ ಹತ್ತು ಕೆಜಿ, ತುಪ್ಪ 30 ಕೆಜಿ, ಕರ್ಪೂರ 5 ಕೆಜಿ, ಒಂದು ಚೀಲ ಹಸುವಿನ ಒಣಗಿದ ಬೆರಣಿ ತರಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಕಟ್ಟೆಯನ್ನು ಕಟ್ಟಲಾಗಿದ್ದು, ಅದಕ್ಕೆ ಬಿಳಿ ಬಣ್ಣ ಬಳಿಯಲಾಗಿದೆ. 

ಇದನ್ನೂ ಓದಿ: ’ಮಂಡ್ಯದ ಗಂಡು’ ಅಂಬಿಗೆ ಮುದ್ದೆ- ಕೋಳಿ ಸಾರು ತಂದ ಅಭಿಮಾನಿ!

ಒಕ್ಕಲಿಗರ ಸಂಪ್ರದಾಯದ ಪ್ರಕಾರ ಅಗ್ನಿ ಸ್ಪರ್ಶ

ಮಧ್ಯಾಹ್ನ 2 ಗಂಟೆಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಅಂಬರೀಶ್ ಪುತ್ರ ಅಭಿಷೇಕ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಿದ್ದಾರೆ. ಸಂಸ್ಕಾರಕ್ಕೆ ಮೂರುವರೆ ಅಡಿ ಎತ್ತರದ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಖ್ಯಾತ ವೈಧಿಕ ಡಾ. ಭಾನುಪ್ರಕಾಶ್ ಶಿಷ್ಯರ ತಂಡದಿಂದ ಅಂತಿಮ ವಿಧಿವಿಧಾನ ನೆರವೇರಲಿದೆ. ಭಾನುಪ್ರಕಾಶ್ ಅಮೆರಿಕದಲ್ಲಿರುವುದರಿಂದ ಶಿಷ್ಯರಿಗೆ ಫೋನ್ ಮೂಲಕ ಮಾರ್ಗದರ್ಶನ ನೀಡಲಿದ್ದಾರೆ. 

ನಟ ಅಂಬರೀಶ್‌ಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: RIP ಅಂಬಿ

click me!