ಜನೌಷಧಿ ಫಲಾನುಭವಿಯಾಗಿರುವ ಡೆಹ್ರಡೂನ್ ಮಹಿಳೆ ಪ್ರಧಾನಿ ಮೋದಿಯನ್ನು ಭಗವಂತ ಎಂದು ಕರೆದಿದ್ದಾರೆ. ಮಹಿಳೆ ಮಾತಿಗೆ ನರೇಂದ್ರ ಮೋದಿ ಭಾವುಕರಾದ ಘಟನೆ ನಡೆದಿದೆ. ನಿರ್ಭಯ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಸನಿಹವಾಗುತ್ತಿದ್ದಂತೆ ಇದೀಗ ಹೊಸ ದಾಳ ಉರುಳಿಸಿ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ದರ್ಶನ್ ಅಭಿಯನದ ರಾಬರ್ಟ್ ಚಿತ್ರ ರಿಲೀಸ್‌ಗೂ ಮೊದಲೇ ಕೋಟಿ ಕೋಟಿ ರೂಪಾಯಿ ಗಳಿಸಿದೆ. ಹೀಗೆ ಮಾರ್ಚ್ 07ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.
ಮೋದಿಗೆ ಭಗವಂತನೆಂದ ಮಹಿಳೆ: ಭಾವುಕರಾದ ಪ್ರಧಾನಿ ಮೋದಿ!
ಎಂ ಮೋದಿ ಶನಿವಾರದಂದು ಜನೌಷಧಿ ದಿನದ ಪ್ರಯುಕ್ತ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಜನೌಷಧಿ ಕೇಂದ್ರಗಳ ಸಂಚಾಲಕ ಹಾಗೂ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂವಾದದ ನಡುವೆ ಪ್ರಧಾನಿ ಮೋದಿ ಭಾವುಕರಾಗಿದ್ದಾರೆ.
ನಿರ್ಭಯಾ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ಹಂತಕನ ಹೊಸ ದಾಳ!
ಮಾರ್ಚ್ 20ಕ್ಕೆ ನಿಗದಿಯಾಗಿರುವ ಗಲ್ಲು ಶಿಕ್ಷೆಯನ್ನು ಮುಂದೂಡಲು ನಿರ್ಭಯಾ ದೋಷಿಗಳು ಮತ್ತೊಂದು ವಿಳಂಬ ದಾಳವನ್ನು ಉರುಳಿಸಿದ್ದಾರೆ.ವಕೀಲರು ದಾರಿ ತಪ್ಪಿಸಿದ್ದು, ಹಾಗಾಗಿ ನನ್ನ ಕಾನೂನು ಹೋರಾಟವನ್ನು ಪುನಃ ಸ್ಥಾಪಿಸಬೇಕು ಎಂದು ಕೋರಿ 4 ದೋಷಿಗಳಲ್ಲಿ ಓರ್ವನಾದ ಮುಕೇಶ್ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ಅವಧೂತ ವಿನಯ್ ಗುರೂಜಿಗೆ ಬ್ಲ್ಯಾಕ್‌ಮೇಲ್; ಐವರು ಅಂದರ್!
ವಿನಯ್ ಗುರೂಜಿ ಅವರನ್ನು ಬ್ಲಾಕ್ ಮೇಲ್ ಮಾಡಲು ಹೋದ ಐವರು ಅಂದರ್ ಆಗಿದ್ದಾರೆ. 20-30 ಲಕ್ಷದವರೆಗೆ ಬ್ಲಾಕ್ ಮೇಲ್ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ.
ರಿಲೀಸ್‌ಗೂ ಮುನ್ನವೇ ಈ ಪಾಟಿ ಹವಾನಾ! 35 ಕೋಟಿ ರೂ. ಗಳಿಸಿದ 'ರಾಬರ್ಟ್'?
ಕನ್ನಡ ಚಿತ್ರರಂಗದಲ್ಲಿ ಬಾರಿ ನಿರೀಕ್ಷೆ ಮೂಡಿಸಿರುವ, ದರ್ಶನ್ ಅಭಿನಯದ ಚಿತ್ರ 'ರಾಬರ್ಟ್' ರಿಲೀಸ್‌ಗೂ ಮುನ್ನವೇ ಸದ್ದು ಮಾಡುತ್ತಿದೆ. ವಿತರಣೆ ಹಕ್ಕು ಮಾರಾಟದಿಂದ ಗಳಿಸಿದ ಹಣವೆಷ್ಟು? ಇದೀಗ ಬಹಿರಂಗವಾಗಿದೆ.
ಮೈಸೂರು: ಸ್ವಾಮೀಜಿ ನೇಣು ಬಿಗಿದು ಆತ್ಮಹತ್ಯೆ
ಮೈಸೂರು ಬೆನಕನಹಳ್ಳಿ ಪಟ್ಟದ ಮಠದ ಪೀಠಾಧ್ಯಕ್ಷ ಮಹದೇವಸ್ವಾಮಿ(47) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ. ಭಕ್ತಾದಿಗಳು ಮಠದ ಆವರಣದಲ್ಲೇ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ನಡೆಗೆ ಕನ್ನಡಿಗರ ಆಕ್ರೋಶ: ಕಾರಣ?
ಮರಾಠಿ ಭಾಷಿಕರ ಓಲೈಕೆಗೆ ಮಹಾರಾಷ್ಟ್ರ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿ ಸರ್ಕಾರ ತನ್ನ ಚೊಚ್ಚಲ ಬಜೆಟ್‌ನಲ್ಲಿ ಕರ್ನಾಟಕ ಗಡಿಭಾಗದಲ್ಲಿರುವ ಮರಾಠಿ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆ ಹಾಗೂ ಮರಾಠಿ ಪತ್ರಿಕೆಗಳಿಗೆ ಬರೋಬ್ಬರಿ 10 ಕೋಟಿ ಅನುದಾನ ಘೋಷಣೆ ಮಾಡುವ ಮೂಲಕ ಗಡಿಭಾಗದ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಕಂದಕ ಸೃಷ್ಟಿಸಲು ಯತ್ನ ಮಾಡುತ್ತಿದೆ.
ದೇಶದ 6000 ಮಂದಿ ಬಳಿ 215 ಕೋಟಿ ರೂ. ಗಿಂತ ಅಧಿಕ ಆಸ್ತಿ!
215 ಕೋಟಿ ರು. (30 ದಶಲಕ್ಷ ಡಾಲರ್)ಗಿಂತ ಅಧಿಕ ಆಸ್ತಿ ಹೊಂದಿರುವ 5,986 ಕುಬೇರರು ಭಾರತದಲ್ಲಿ ಇದ್ದಾರೆ. ಆ ಮೂಲಕ ಈ ವರ್ಗದ ಅತೀ ಹೆಚ್ಚು ಶ್ರೀಮಂತರು ಇರುವ ದೇಶಗಳ ಪೈಕಿ ಭಾರತ 12ನೇ ಸ್ಥಾನದಲ್ಲಿದೆ. ಅಲ್ಲದೇ ಮುಂದಿನ 5 ವರ್ಷದಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ವರದಿಯೊಂದು ಹೇಳಿದೆ.
ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಬಗ್ಗೆ ನಿಮಗೆ ತಿಳಿಯದ ವಿಚಾರಗಳು!
ಸ್ಯಾಂಡಲ್‌ವುಡ್ 'ಆದಿ ಲಕ್ಷ್ಮಿ' ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟಿಯಾಗಿ, ರಾಖಿ ಸ್ಟಾರ್ ಪತ್ನಿಯಾಗಿ ಹಾಗೂ ಲಿಟಲ್ ಐರಾ ಆ್ಯಂಡ್ ಜೂನಿಯರ್ ಯಶ್‌ಗೆ ಅಮ್ಮನಾಗಿರುವ ರಾಧಿಕಾ ರಿಯಲ್ ಲೈಫ್‌ನಲ್ಲಿ ಹೇಗಿರುತ್ತಾರೆ ಅನ್ನೋದು ಬಹಿರಂಗವಾಗಿದೆ.
ಮತ್ತೆ ಸುದ್ದಿಯಲ್ಲಿ ಯತ್ನಾಳ್: ಜಾತಿ ನಿಂದನೆ ಕೇಸ್ ಬುಕ್..!
ಸದಾ ಒಂದಿಲ್ಲೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡು ಟೀಕೆಗೆ ಗುರಿಯಾಗುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇದೀಗ ಜಾತಿ ನಿಂದನೆ ಕೇಸ್ ದಾಖಲಾಗಿದೆ.
ಸಚಿವ ನಾರಾಯಣ ಗೌಡ ಜೊತೆ ವೇದಿಕೆ ಹಂಚಿಕೊಂಡ 'ಕೈ' ಮುಖಂಡ
ಕಾಂಗ್ರೆಸ್ ಮುಖಂಡ ಬಿಜೆಪಿ ಸಚಿವ ಕೆ. ಸಿ. ನಾರಾಯಣ ಗೌಡ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.