ನಾಳೆ ಪ್ರಧಾನಿ ಮೋದಿ ಮಾತು, ಭಾರತೀಯ ಸೇನೆಯಿಂದ ಪಾಕ್‌ಗೆ ತಿರುಗೇಟು; ಏ.13ರ ಟಾಪ್ 10 ಸುದ್ದಿ!

By Suvarna News  |  First Published Apr 13, 2020, 4:39 PM IST

ಕೊರೋನಾ ವೈರಸ್ ಹರಡದಂತೆ ಕೈಗೊಳ್ಳಲಾದ ಮೊದಲ ಹಂತದ ಲಾಕ್‌ಡೌನ್ ಮುಗಿಯುತ್ತಿದ್ದು, ಇದೀಗ 2ನೇ ಹಂತದ ಲಾಕ್‌ಡೌನ್‌ಗೆ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇನ್ನು ನಾಳೆ ದೇಶವನ್ನುದ್ದೇಶಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಇತ್ತ ರಾಜ್ಯದಲ್ಲಿ ಎಣ್ಣೆ ಪ್ರಿಯರಿಗೆ ಶುಭ ಸುದ್ದಿ ನೀಡಲು ಸರ್ಕಾರ ಮುಂದಾಗಿದೆ. ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಡಾಕ್ಟರ್ ಜೊತೆ ಸಚಿನ್ ಸಮಾಲೋಚನೆ, ನಿಖಿಲ್ ಕುಮಾರಸ್ವಾಮಿ ಮದುವೆ ಸೇರಿದಂತೆ ಏಪ್ರಿಲ್ 13ರ ಟಾಪ್ 10 ಸುದ್ದಿ ಇಲ್ಲಿವೆ. 


ಏ. 15 ರಿಂದ ಲಾಕ್‌ಡೌನ್ 2.0 ಶುರು; ಕೇಂದ್ರದಿಂದ ಹೊಸ ಮಾರ್ಗಸೂಚಿ ರಿಲೀಸ್...

ಏಪ್ರಿಲ್ 14 ಕ್ಕೆ ಮೊದಲ ಹಂತದ ಲಾಕ್ ಡೌನ್ ಮುಕ್ತಾಯಗೊಳ್ಳುತ್ತಿದ್ದು ಏಪ್ರಿಲ್ 15 ರಿಂದ ಎರಡನೇ ಹಂತದ ಲಾಕ್‌ಡೌನ್ ಶುರುವಾಗಲಿದ್ದು ಕೇಂದ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಲಾಕ್‌ಡೌನ್ 2.0 ನಲ್ಲಿ ಕೆಲವು ವಿನಾಯಿತಿಗಳನ್ನು ನೀಡಿದೆ.

Tap to resize

Latest Videos

 

ಮದ್ಯಪ್ರಿಯರಿಗೆ ಗುಡ್​ ನ್ಯೂಸ್​: ಏಪ್ರಿಲ್ 15ರಿಂದ ಸಿಗುತ್ತೆ ಎಣ್ಣೆ?.

ಲಾಕ್​ಡೌನ್​ನಿಂದಾಗಿ 22 ದಿನಗಳಿಂದ ರಾಜ್ಯದೆಲ್ಲೆಡೆ ಮಾಲ್, ಬಾರ್, ಪಬ್​ಗಳನ್ನು ಮುಚ್ಚಲಾಗಿದೆ. ಆದರೆ ಇದೀಗ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ 2ನೇ ಹಂತದ ಲಾಕ್‌ಡೌನ್‌ ವೇಳೆ ಸಿಹಿ ಸುದ್ದಿ ಕೊಡುವ ಸಾಧ್ಯತೆಯಿದೆ.

 

ಮಂಗಳವಾರ ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಮಾತು!

ಪ್ರಧಾನ ಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಒಂದನ್ನು ಮಾಡಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಪ್ರಿಲ್ 14 ರಂದು ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೊರೋನಾ ಸೋಂಕು ದೇಶದಲ್ಲಿ ಕಾಣಿಸಿಕೊಂಡ ಬಳಿಕ ನಾಲ್ಕನೇ ಬಾರಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದು, ಅವರು ಏನು ಹೇಳಬುದು? ಲಾಕ್‌ಡೌನ್ ವಿಸ್ತರಣೆ ಕುರಿತು ಏನು ಹೇಳಬಹುದು? ಲಾಕ್‌ಡೌನ್ ಕುರಿತು ಯಾವೆಲಲಾ ಮಾರ್ಗಸೂಚಿಗಳನ್ನು ವಿಧಿಸಬಹುದೆಂಬ ಕುತೂಲ ಮನೆ ಮಾಡಿದೆ. 

 

ದೇಶದಲ್ಲಿ ಪೋಲಿ ಸಿನಿಮಾ ವೀಕ್ಷಣೆ ಶೇ. 95 ಹೆಚ್ಚಳ!

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ವಿಶ್ವದ 400 ಕೋಟಿಗೂ ಹೆಚ್ಚು ಜನರನ್ನು ಗೃಹಬಂಧನಕ್ಕೆ ಒಳಪಡಿಸಿದ ಮೇಲೆ ಹಲವು ದೇಶಗಳಲ್ಲಿ ಕಾಂಡೋಮ್‌ಗಳ ಕೊರತೆ ಕಾಣಿಸಿಕೊಂಡಿದೆ ಎಂಬ ಸುದ್ದಿಗಳ ಬೆನ್ನಲ್ಲೇ, ಈ ಅವಧಿಯಲ್ಲಿ ಜನರು ನೀಲಿ ಚಿತ್ರಗಳ ವೀಕ್ಷಣೆಗೆ ಮುಗಿಬಿದ್ದಿರುವ ಸುದ್ದಿಯೂ ಹೊರಬಂದಿದೆ.

ಭಾರತದ ದಾಳಿಗೆ 8 ಉಗ್ರರು, 15 ಪಾಕ್‌ ಯೋಧರು ಸಾವು; ಪಾಕ್‌ಗೆ ತಕ್ಕ ಶಾಸ್ತಿ

ಗಡಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಜಮ್ಮು- ಕಾಶ್ಮೀರದ ಕೆರಾನ್‌ ಸೆಕ್ಟರ್‌ಗೆ ಅಭಿಮುಖವಾಗಿರುವ ದುಧ್ನಿಯಲ್‌ ಪ್ರದೇಶದಲ್ಲಿನ ಉಗ್ರರ ಲಾಂಚ್‌ಪ್ಯಾಡ್‌ಗಳ ಮೇಲೆ ಭಾರತೀಯ ಸೇನಾಪಡೆಗಳು ಫಿರಂಗಿಗಳ ಮೂಲಕ ಏ.10ರಂದು ದಾಳಿ ನಡೆಸಿವೆ. ಈ ದಾಳಿಯಲ್ಲಿ 8 ಮಂದಿ ಉಗ್ರರು ಹಾಗೂ 15 ಮಂದಿ ಪಾಕಿಸ್ತಾನ ಸೈನಿಕರು ಹತರಾಗಿದ್ದಾರೆ ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ.

 

ಸಿಎಂ ಸುದ್ದಿಗೋಷ್ಠಿ: ಹಾಳಾದ ಭತ್ತ ಬೆಳೆಗೆ 45 ಕೋಟಿ ರಿಲೀಸ್, ಮದ್ಯದ ಬಗ್ಗೆ ಮಾತು.

 

ಏಪ್ರಿಲ್ 14ರ ಬಳಿಕ ಲಾಕ್‌ಡೌನ್ ಏ.30ರ ವರೆಗೆ ವಿಸ್ತರಣೆ ಪಕ್ಕಾ ಆಗಿದ್ದು, ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳು ಗೃಹ ಕಚೇರಿ ಕೃಷ್ಣಾದಲ್ಲಿ ದಿನಾಂಕ 13-4-2020ರಂದು ನಡೆಸಿದ ಅಧಿಕಾರಿಗಳ ಸಭೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ.


12 ಸಾವಿರ ಡಾಕ್ಟರ್‌ಗಳ ಜತೆ ಸಮಾಲೋಚನೆ ನಡೆಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್

ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಎರಡು ಮಾದರಿಯ ಕ್ರಿಕೆಟ್‌ನಲ್ಲಿ(ಟೆಸ್ಟ್ 200, ಏಕದಿನ 463) ಗರಿಷ್ಠ ಪಂದ್ಯಗಳನ್ನಾಡಿದ ಅನುಭವ ಇರುವ ಸಚಿನ್ ತೆಂಡುಲ್ಕರ್ ಶನಿವಾರ(ಏ.11) ಲಾಕ್‌ಡೌನ್ ಸಂದರ್ಭದಲ್ಲಿ ವೆಬಿನಾರ್ಸ್ ಮೂಲಕ 12,000 ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.

 

ನಿಖಿಲ್‌ ಕುಮಾರಸ್ವಾಮಿ- ರೇವತಿ ಮದುವೆ ಮುಹೂರ್ತ ಫಿಕ್ಸ್‌; ಯಾರ್ಯಾರ್ ಬರ್ತಿದ್ದಾರೆ?

ನಿಖಿಲ್‌-ರೇವತಿ ಅದ್ಧೂರಿ ಮದುವೆಯ ಪ್ಲ್ಯಾನ್‌ ಚೇಂಜ್ , ಏಪ್ರಿಲ್‌ 17ರ ಸರಳ ವಿವಾಹದಲ್ಲಿ ಕೇವಲ 50 ಜನ  ಕುಟುಂಬಸ್ಥರು ಮಾತ್ರ ಪಾಲ್ಗೊಳ್ಳಲಿದ್ದಾರೆ . 

 

ಐಎಂಎಫ್‌ ಸಲಹಾ ಮಂಡಳಿಗೆ ರಘುರಾಂ ರಾಜನ್‌!.

ಕೊರೋನಾ ವೈರಸ್‌ ವಿಶ್ವವ್ಯಾಪಿ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯು ಭಾರತದ ರಿಸವ್‌ರ್‍ ಬ್ಯಾಂಕ್‌ ಮಾಜಿ ಗವರ್ನರ್‌ ರಘುರಾಂ ರಾಜನ್‌ ಸೇರಿದಂತೆ 12 ಜನರ ಸಲಹಾ ಮಂಡಳಿ ರಚಿಸಿದೆ.

 

ವಿಶ್ವಗುರುವಾದ ಭಾರತ; ಕೊರೋನಾಕ್ಕೆ ನಮ್ಮಲ್ಲೇ ಔಷಧ!.

ಮಾರಕ ಕೊರೋನಾಕ್ಕೆ ಔಷಧ ಸಿಕ್ಕೇಬಿಡ್ತಾ? ಹೌದು ಎನ್ನುತ್ತಾರೆ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ. ಡಾ. ಗಿರಿಧರ ಕಜೆ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತಮ್ಮ ಔಷಧದ ವರದಿ ಸಲ್ಲಿಸಿದ್ದಾರೆ. ನನಗೆ ಪೆಟೆಂಟ್ ಸಹ ಬೇಡ. ಇದರಿಂದ ಜನರಿಗೆ ಉಪಯೋಗವಾದರೆ ಸಾಕು ಎನ್ಜುತ್ತಾರೆ.
  

click me!