ಸಿಎಂ ಜೊತೆ ಪ್ರಧಾನಿ ಮೋದಿ ಮಾತು, ವಿದೇಶಿ ಮಾಧ್ಯಮ ಭಾರತಕ್ಕೆ ಆಪತ್ತು; ಮೇ.16ರ ಟಾಪ್ 10 ಸುದ್ದಿ!

By Suvarna NewsFirst Published May 16, 2021, 5:08 PM IST
Highlights

ವಿದೇಶಿ ಮಾಧ್ಯಮಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಅವಮಾನಿಸುವ ಕೆಲಸ ಮಾಡುತ್ತಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಮಾಥ್ಯೂ ಹೇಡನ್ ಹೇಳಿದ್ದಾರೆ. ಇನ್ನು ಯೋಗಿ ಆದಿತ್ಯನಾಥ್ ಸೇರಿದಂತೆ ನಾಲ್ವರು ಸಿಎಂ ಜೊತೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಬಿಗ್‌ಬಾಸ್ ಸ್ಪರ್ಧಿ ವೈಷ್ಣವಿಗೆ ಬಂದಿದೆ ಸಾವಿರಾರು ಮದುವೆ ಪ್ರಪೋಸಲ್, ವಾಟ್ಸಾಪ್‌ ಹೊಸ ನೀತಿ ಜಾರಿಗೆ ಸೇರಿದಂತೆ ಮೇ.16ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಭಾರತ ಬೆಂಬಲಿಸಿ ಆಸೀಸ್ ಕ್ರಿಕೆಟಿಗನ ಭಾವನಾತ್ಮಕ ಪತ್ರಕ್ಕೆ ಆನಂದ್ ಮಹೀಂದ್ರ ಧನ್ಯವಾದ!...

 ಭಾರತವನ್ನು ಅವಮಾನಿಸುತ್ತಿರುವ ವಿಶ್ವ ಮಾಧ್ಯಮಕ್ಕೆ ಆಸ್ಟ್ರೇಲಿಯಾ ಕ್ರಿಕೆಟಿಗ ಮಾಥ್ಯೂ ಹೇಡನ್ ಚಾಟಿ ಬೀಸಿದ್ದಾರೆ. ಹೇಡನ್ ಪತ್ರವನ್ನು ಮಹೀಂದ್ರ ಕಂಪನಿ ಚೇರ್ಮೆನ್ ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ಹೇಡನ್ ಪ್ರೀತಿ ಹಾಗೂ ವಾತ್ಸಲ್ಯಕ್ಕೆ ಧನ್ಯವಾದ ಎಂದು ಮಹೀಂದ್ರ ಹೇಳಿದ್ದಾರೆ.

ಮೋದಿ ವಿರುದ್ಧ ಟೀಕೆ: 'ಅರೆಸ್ಟ್ ಮೀ ಟೂ' ಎಂದ ರಾಹುಲ್ ಗಾಂಧಿ...

ಕೊರೋನಾ ಪರಿಸ್ಥಿತಿಯನ್ನು ಸರ್ಕಾರ ನಿಭಾಯಿಸುತ್ತಿರುವುದನ್ನು ಟೀಕಿಸುವ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ದೆಹಲಿಯಲ್ಲಿ ಹಲವಾರು ಜನರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರೆಸ್ಟ್ ಮೀ ಟೂ ಎಂದಿದ್ದಾರೆ.

ಯೋಗಿ ಸೇರಿ ನಾಲ್ವರು ಸಿಎಂಗಳ ಜೊತೆ ಮೋದಿ ಮಾತು, ಕೊರೋನಾ ಬಗ್ಗೆ ಮಾಹಿತಿ!...

ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮುಖಗೊಂಡಿದೆ. ಕೊರೋನಾ ನಿಯಂತ್ರಣ ವಿಚಾರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಗಳ ಸಿಎಂ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಸೂಕ್ತ ಸಲಹೆ ಸೂಚನೆ ನೀಡುತ್ತಿದ್ದಾರೆ.

ಇನ್‌ಸ್ಟಾಗ್ರಾಂ ಮತ್ತು ಮೇಲ್‌ನಲ್ಲಿ ವೈಷ್ಣವಿಗೆ ಬಂದಿದೆ ಸಾವಿರಾರು ಮದುವೆ ಪ್ರಪೋಸಲ್‌ಗಳು!...

ಅಗ್ನಿಸಾಕ್ಷಿಗಿಂತ ಬಿಗ್ ಬಾಸ್‌ನಲ್ಲಿ ತುಂಬಾ ಇಷ್ಟ ಅದ್ರಿ ವೈಷ್ಣವಿ ಎಂದ ನೆಟ್ಟಿಗರು. ಬರ್ತಿದೆ ಸಾವಿರಾರು ಪ್ರಪೋಸಲ್‌ಗಳು...

ನಟಿ ರಶ್ಮಿಕಾ ಮಂದಣ್ಣಗೆ ಆ ಮನೆಯ ಸೋಸೆಯಾಗೋ ಆಸೆ; ಯಾರ ಮನೆ ಗೊತ್ತಾ?...

ಅತಿ ಕಡಿಮೆ ಸಮಯದಲ್ಲಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಮದುವೆ ಪ್ಲಾನ್ ಬಗ್ಗೆ ಹಂಚಿಕೊಂಡಿದ್ದಾರೆ. ಮದುವೆ ಆದರೆ ಈ ಮನೆತನದಲ್ಲಿ ಈ ಶೈಲಿಯಲ್ಲಿ ಮದುವೆ ಅಗುವುದಾಗಿ ಹೇಳಿಕೊಂಡಿದ್ದಾರೆ. 

ವಾಟ್ಸಾಪ್‌ ಹೊಸ ನೀತಿ ಜಾರಿಗೆ: ಪ್ರೈವೆಸಿ ಒಪ್ಪದಿದ್ರೆ ವಾಟ್ಸಾಪ್ ಬಂದ್!...

ವಾಣಿಜ್ಯಿಕ ದೃಷ್ಟಿಯಿಂದ ಬಳಕೆದಾರರ ಮಾಹಿತಿಯನ್ನು ಜೊತೆಗಾರ ಸಂಸ್ಥೆ ಫೇಸ್‌ಬುಕ್‌ ಜೊತೆ ಹಂಚಿಕೊಳ್ಳುವ ಸಂಬಂಧ ವಾಟ್ಸಾಪ್‌ ರೂಪಿಸಿರುವ ನೂತನ ನೀತಿ ಶನಿವಾರದಿಂದಲೇ ಜಾರಿಗೆ ಬಂದಿದೆ. ವಾಟ್ಸಾಪ್‌ ಸೇವೆಯನ್ನು ಬಳಸಲು ಗ್ರಾಹಕರು ನೂತನ ನೀತಿಯನ್ನು ಒಪ್ಪಿಕೊಳ್ಳಲೇ ಬೇಕು.

ಏರಿಂಡಿಯಾದ 12,000 ಕೋಟಿ ವಿದೇಶಿ ಆಸ್ತಿ ಕೇರ್ನ್‌ ಪಾಲು ಸಾಧ್ಯತೆ!...

 ಏರಿಂಡಿಯಾಕ್ಕೆ ಸೇರಿದ ವಿದೇಶದಲ್ಲಿರುವ .12 ಸಾವಿರ ಕೋಟಿಗೂ ಮಿಗಿಲಾದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ಕೇರ್ನ್‌ ಸಂಸ್ಥೆ ಅಮೆರಿಕದ ಕೋರ್ಟ್‌ ಮೆಟ್ಟಿಲೇರಿದೆ.

ಕೊರೋನಾ ಮಾರ್ಗಸೂಚಿ ಪಾಲನೆ ವೇಳೆ ಎಚ್ಚರ ಮರೆತ ಚಾಲಕ; ಹೊತ್ತಿ ಉರಿದ ಕಾರು! ...

ನಿಯಮ ಪಾಲನೆ ವೇಳೆ ಎಚ್ಚರವಹಿಸಬೇಕು. ಹೀಗೆ ಎಚ್ಚರ ಮರೆತ ಅಮೆರಿಕದ ಮೇರಿಲ್ಯಾಂಡ್ ನಿವಾಸಿ ಸುಟ್ಟ ಗಾಯಗಳಿಂದ ಆಸ್ಪತ್ರೆ ದಾಖಲಾದ ಘಟನೆ ವರದಿಯಾಗಿದೆ.

ಕೊರೋನಾ ಲಸಿಕೆ ಹಾಕಿಸಿಕೊಂಡ ಎಷ್ಟು ದಿನದ ನಂತರ ಸೆಕ್ಸ್ ಮಾಡಬಹುದು ?...

ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಎಷ್ಟು ದಿನಗಳ ನಂತರ ಸೆಕ್ಸ್ ಮಾಡಬಹುದು? ಏನು ಎಚ್ಚರಿಕೆ ತೆಗೆದುಕೊಳ್ಳಬೇಕು?

ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ವ್ಯವಸ್ಥೆ'...

 ಕೊರೋನಾ ವೈರಸ್ ಆತಂಕದ ಮಧ್ಯೆ ರಾಜ್ಯದ ಜನರಲ್ಲಿ ಬ್ಲ್ಯಾಕ್ ಫಂಗಸ್ ಭೀತಿ ಶುರುವಾಗಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

click me!