* ವಿವಿಧ ರಾಜ್ಯಗಳ ಮೇ 17 ರಿಂದ 23ರವರೆಗಿನ ಬಳಕೆಗಾಗಿ 23 ಲಕ್ಷ ರೆಮ್‌ಡಿಸಿವಿರ್ ಇಂಜೆಕ್ಷನ್ ಹಂಚಿಕೆ
* ರೆಮ್‌ಡಿಸಿವಿರ್ ಇಂಜೆಕ್ಷನ್ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಮಾಹಿತಿ
* ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ರೆಮ್‌ಡಿಸಿವಿರ್ ಇಂಜೆಕ್ಷನ್
ನವದೆಹಲಿ, (ಮೇ.16): ದೇಶದಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್‌ಗೆ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕೆಲವರು ಇದನ್ನೇ ದಂಧೆ ಮಾಡಿಕೊಂಡು ನಕಲಿ ರೆಮ್‌ಡಿಸಿವಿರ್ ಮಾರಾಟ ಮಾಡುತ್ತಿದ್ದಾರೆ.
ಇನ್ನು ಈ ರೆಮ್‌ಡಿಸಿವಿರ್ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಮಾಹಿತಿ ಹಂಚಿಕೊಂಡಿದ್ದಾರೆ.
undefined
ಅಚ್ಚರಿ ಎನಿಸಿದರೂ ಸತ್ಯ: ನಕಲಿ ಆದರೂ ಶೇ 90 ರಷ್ಟು ಜೀವ ಉಳಿಸಿದ ರೆಮ್‌ಡಿಸಿವಿರ್!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ ಮೇ 17 ರಿಂದ 23ರವರೆಗಿನ ಬಳಕೆಗಾಗಿ 23 ಲಕ್ಷ ರೆಮ್‌ಡಿಸಿವಿರ್ ಇಂಜೆಕ್ಷನ್ ಹಂಚಿಕೆ ಮಾಡಿರುವುದಾಗಿ ಡಿ. ವಿ. ಸದಾನಂದಗೌಡ ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸದಾನಂದಗೌಡ, ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ರೆಮ್‌ಡಿಸಿವಿರ್ ಇಂಜೆಕ್ಷನ್ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 21ರಿಂದ ಇದುವರೆಗೆ ಒಟ್ಟಾರೇ 76 ಲಕ್ಷ ವಯಲ್ಸ್ ರೆಮ್‌ಡಿಸಿವಿರ್ ಇಂಜೆಕ್ಷನ್ ಹಂಚಿಕೆ ಮಾಡಲಾಗಿದೆ. ಇದರಲ್ಲಿ ರಾಜ್ಯದ ಪಾಲು 10 ಲಕ್ಷವಾಗಿದೆ ಎಂದು ಸದಾನಂದಗೌಡ ವಿವರ ನೀಡಿದ್ದಾರೆ.
ಮಾನ್ಯ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳ ಮೇ 17ರಿಂದ ಮೇ 23ರವರೆಗಿನ ಬಳಕೆಗಾಗಿ 23 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಚುಚ್ಚುಮದ್ದು ಹಂಚಿಕೆ ಮಾಡಿದ್ದು ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ಒದಗಿಸಲಾಗಿದೆ. ಏಪ್ರಿಲ್ 21ರಿಂದ ಇದುವರೆಗೆ 76 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಲಾಗಿದ್ದು ರಾಜ್ಯದ ಪಾಲು 10 ಲಕ್ಷ. pic.twitter.com/vTzjQgrqKQ
— Sadananda Gowda (@DVSadanandGowda)