ಪೇಜಾವರ ಸ್ವಾಮೀಜಿ ಅಸ್ತಂಗತ;ಮೋದಿ ಸೇರಿದಂತೆ ಗಣ್ಯರ ಸಂತಾಪ; ಡಿ.29ರ ಟಾಪ್ 10 ಸುದ್ದಿ!

By Suvarna NewsFirst Published Dec 29, 2019, 5:22 PM IST
Highlights

ಮಹಾಸಂತ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಅಗಲಿಕೆಯಿಂದ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಸಿಎಂ ಯಡಿಯೂರಪ್ಪ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. 6ನೇ ವಯಸ್ಸಿನಲ್ಲಿ ಸ್ವಾಮೀಜಿಯಾಗಲು ನಿರ್ಧರಿಸಿದ ವೆಂಕಟರಮಣ ವಿಶ್ವತೀರ್ಥರಾದ ಸಾಧನೆ,  ಮುಸ್ಲಿಂ ಬಾಂಧವರೊಂದಿಗೆ ರಂಜಾನ್ ಆಚರಣೆ ಸೇರಿದಂತೆ ಮಹಸಂತನಾಗಿ ಮಾರ್ಗದರ್ಶನ ನೀಡಿದ ಪೇಜಾವರ ಕುರಿತು ಡಿಸೆಂಬರ್ 29ರ ಟಾಪ್ 10 ಸುದ್ದಿ.
 

ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಸ್ತಂಗತ

ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ದೈವಾಧೀನರಾಗಿದ್ದಾರೆ.  ಅವರ ಕೊನೆಯ ಆಸೆಯಂತೆ ಉಡುಪಿ ಮಠದಲ್ಲೇ ಶ್ರೀಗಳು ಬೆಳಗ್ಗೆ 9.20ಕ್ಕೆ ಅಸ್ತಂಗತರಾಗಿದ್ದಾರೆ. ಶ್ರೀಗಳಿಗೆ 89 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಉಡುಪಿಯ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು.

ಪೇಜಾವರ ಶ್ರೀಗಳು ದೈವಾಧೀನ : ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ

ನಾಡು ಕಂಡ ಶ್ರೇಷ್ಠ ಸಂತ ಪೇಜಾವರ ಶ್ರೀಗಳು ದೈವಾಧೀನರಾಗಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್  ಶಾ ಸಂತಾಪ ಸೂಚಿಸಿದ್ದಾರೆ.

ಮಹಾಸಂತ ಅಸ್ತಂಗತ: ಯತಿಗಳಿಗೆ ಸಕಲ ಸರ್ಕಾರಿ ಗೌರವ

ಮಹಾಸಂತ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಅಸ್ತಂಗತರಾಗಿದ್ದು, ಅವರ ಪಾರ್ಥೀವ ಶರೀರಕ್ಕೆ ಉಡುಪಿಯಲ್ಲಿ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರಿ ಗೌರವದ ಮೂಲಕ ಅಂತಿನ ನಮನ ಸಲ್ಲಿಸಿದರು. 

ಪಕ್ಷ ಬೇಧವಿಲ್ಲದೇ ರಾಜಕೀಯ ಗಣ್ಯರನ್ನು ಆಶೀರ್ವದಿಸುತ್ತಿದ್ದ ಪೇಜಾವರ ಶ್ರೀಗಳು

ಪರಿಶಿಷ್ಟರ ಕೇರಿಯಲ್ಲಿ ಪಾದಯಾತ್ರೆ, ಶ್ರೀಮಠದ ಆವರಣದಲ್ಲಿ ರಂಜಾನ್ ಆಚರಣೆ, ಮಡೆಸ್ನಾನ ನಿಷೇಧ ಮತ್ತಿತರ ಆದರ್ಶ ನಡೆಗಳ ಮೂಲಕ ಸಮಾಜಕ್ಕೆ ಮಾದರಿಯಾದವರು. ಅಲ್ಲದೇ ತಮ್ಮ ಮಠಕ್ಕೆ ಆಗಮಿಸುತ್ತಿದ್ದ ಹಾಗೂ ಭೇಟಿಯಾಗುತ್ತಿದ್ದ ಎಲ್ಲಾ ರಾಜಕೀಯ ನಾಯಕರನ್ನು ಪಕ್ಷ ಬೇಧವಿಲ್ಲದೇ ನಗುಮೊಗದಿಂದ ಸ್ವಾಗತಿಸಿ ಹರಸಿ ಆಶೀರ್ವದಿಸುತ್ತಿದ್ದರು. 

ಪೇಜಾವರ ಶ್ರೀಗಳ ನಿಧನಕ್ಕೆ ಸಿಎಂ ಕಂಬನಿ, ರಾಜ್ಯದಲ್ಲಿ 3 ದಿನ ಶೋಕಾಚರಣೆ!

ಅನಾರೋಗ್ಯದಿಂದ ಬಳಲುತ್ತಿದ್ದ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಠ ಪೇಜಾವರದ ಶ್ರೀಗಳು ಕೃಷ್ಣೈಕ್ಯರಾಗಿದ್ದಾರೆ. ಇವರ ಅಗಲುವಿಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅನೇಕ ಗಣ್ಯರು ಶ್ರೀಗಳ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ. ಸಿಎಂ ಬಿ. ಎಸ್. ಯಡಿಯೂರಪ್ಪ ಕೂಡಾ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಶ್ರೀಗಳ ಗೌರವಾರ್ಥ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಿದ್ದಾರೆ.

ವೆಂಕಟರಮಣ ‘ವಿಶ್ವೇಶ ತೀರ್ಥ’ರಾಗಿದ್ದು ಹೇಗೆ..?

ಪೇಜಾವರ ಶ್ರೀಯವರ ಮೂಲ ಹೆಸರು ವೆಂಕಟರಮಣ. 6ನೇ ವಯಸ್ಸಿನಲ್ಲಿ ಸ್ವಾಮೀಜಿಯಾಗಲು ನಿರ್ಧರಿಸಿದ್ದ ಪೇಜಾವರ ತೀರ್ಥ ಸ್ವಾಮೀಜಿ ಇತಿಹಾಸ ಸೃಷ್ಟಿಸಿದ್ದಾರೆ.

ಪೇಜಾವರ ಶ್ರೀ ಅಸ್ತಂಗತ: ಸಂಗೀತ ನಿರ್ದೇಶಕ ಹಂಸಲೇಖ ಸಂತಾಪ

ಉಡುಪಿಯ ಪೇಜಾವರ ಶ್ರೀಗಳ‌ ನಿಧನಕ್ಕೆ‌ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಸಂತಾಪ ಸೂಚಿಸಿದ್ದಾರೆ. ಭಾನುವಾರ ನಗರದಲ್ಲಿ ಮಾಧ್ಯಮವರ ಜತೆ ಮಾತನಾಡಿದ ಅವರು, ಪ್ರತಿಯೊಂದು ಜೀವಕ್ಕೂ ಒಂದು ಕೊನೆ ಇದೆ. ಉಡುಪಿ ಒಂದು ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿದೆ. ಪೇಜಾವರದ ಪೀಠ ನನಗೆ ಬಹಳ ಇಷ್ಟವಾದ ಸ್ಥಳವಾಗಿದೆ ಎಂದು ತಿಳಿಸಿದ್ದಾರೆ. 

ಉಡುಪಿಯಲ್ಲಿ ಮಹಾನ್ ಸಂತನಿಗೆ ಭಕ್ತರ ನಮೋ ನಮಃ.

ನಾಡು ಕಂಡ ಮಹಾನ್ ಸಂತ ಉಡುಪಿ ಮಠದ ಪೇಜಾವರ ಶ್ರೀಗಳು ಇಂದು (ಭಾನುವಾರ) ಲಿಂಗೈಕ್ಯರಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನ ದರ್ಶನ ಪಡೆಯಲು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಯವರೆಗೆ ಉಡುಪಿಯ ಅಜ್ಜರ ಕಾಡು ಮೈದಾನದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ಅಜ್ಜರ ಕಾಡು ಮೈದಾನಕ್ಕೆ ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದುಕೊಂಡರು. 

'ಪೇಜಾವರ ಶ್ರೀಗಳಿಂದ ರಾಮಮಂದಿರ ಶಂಕು ಸ್ಥಾಪನೆ ಮಾಡಿಸುವ ಇಚ್ಛೆ ಇತ್ತು'

ಶ್ರೇಷ್ಠ ಸಂತ ಮಹಾನ್ ಯತಿವರ್ಯರಾದ ಪೇಜಾವರ ಶ್ರೀಗಳು ದೈವಾದೀನರಾಗಿದ್ದು, ಶ್ರೀಗಳ ಅಗಲಿಕೆ ತೀವ್ರ ನೋವು ತಂದಿದೆ. ವೈದ್ಯರ ಪ್ರಯತ್ನದ ನಡುವೆಯೇ ಅವರು ನಮ್ಮನ್ನು ಅಗಲಿದ್ದಾರೆ ಎಂದು ತುಮಕೂರಿನ ಸಿದ್ದಲಿಂಗ ಸ್ವಾಮೀಜಿ ಹೇಳಿದರು. 

ಪರ್ಯಾಯದಲ್ಲಿ ಅಪರೂಪದ ದಾಖಲೆಯ ಮಾಡಿದ್ದ ಪೇಜಾವರ ಶ್ರೀಗಳು.

ಪೇಜಾವರ ಶ್ರೀಗಳು ಕೃಷ್ಣೈಕ್ಯರಾಗಿದ್ದಾರೆ. ತಮ್ಮ 89ನೇ ವಯಸ್ಸಿನಲ್ಲಿ ದೈವಧೀನರಾಗಿದ್ದಾರೆ. ತಮ್ಮ ಜೀವಮಾನದಲ್ಲಿ ಶ್ರೀಗಳು ಹಲವು ವಿಶೇಷಗಳನ್ನು ಎದುರಿಸಿದ್ದು ಅದರಲ್ಲಿ ಐದು ಪರ್ಯಾಗಳನ್ನು ಮಾಡಿರುವುದು ಒಂದು ದಾಖಲೆಯಾಗಿದೆ. 

click me!