ನಿರ್ಭಯ ವಿಚಾರಣೆಗೆ ಟ್ವಿಸ್ಟ್, IPL ಹರಾಜಿಗೆ ಅಡ್ಡಿಯಾಗುತ್ತಾ ಪ್ರೊಟೆಸ್ಟ್ ; ಡಿ.17ರ ಟಾಪ್ 10 ಸುದ್ದಿ!

Published : Dec 17, 2019, 04:40 PM ISTUpdated : Dec 17, 2019, 05:13 PM IST
ನಿರ್ಭಯ ವಿಚಾರಣೆಗೆ ಟ್ವಿಸ್ಟ್, IPL ಹರಾಜಿಗೆ ಅಡ್ಡಿಯಾಗುತ್ತಾ ಪ್ರೊಟೆಸ್ಟ್ ; ಡಿ.17ರ ಟಾಪ್ 10 ಸುದ್ದಿ!

ಸಾರಾಂಶ

ದೇಶದ ನಿದ್ದೆಗೆಡಿಸಿದ ನಿರ್ಭಯ ಪ್ರಕರಣದ ವಿಚಾರಣೆಗೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ವಿಚಾರಣೆಯಿಂದ CJI ಹಿಂದೆ ಸರಿದಿದ್ದಾರೆ. ಅತ್ತ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ರಾಜ್ಯದಲ್ಲಿ ಮತ್ತೆ ಆಪರೇಶನ್ ಕಮಲ ಗಾಳಿ ಬೀಸುತ್ತಿದೆ. ಜೆಡಿಎಸ್‌ನ ಇಬ್ಬರು ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ. ಐಪಿಎಲ್ ಟೂರ್ನಿಯ ಹರಾಜು, ಬೆಂಗಳೂರಿನಲ್ಲಿ ಭಯೋತ್ಪಾದನೆ ಸಂಚು ಸೇರಿದಂತೆ ಡಿಸೆಂಬರ್ 17ರ ಟಾಪ್ 10 ಸುದ್ದಿ ಇಲ್ಲಿವೆ.

1) 70 ವರ್ಷದ ಆಂಗ್ಲೋ ಇಂಡಿಯನ್‌ ಮೀಸಲು ಇನ್ನಿಲ್ಲ; ಮುಂದೇನು?...


ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳಿಗೆ ಹಾಗೂ ಆಂಗ್ಲೋ ಇಂಡಿಯನ್ನರಿಗೆ ಕಳೆದ 70 ವರ್ಷಗಳಿಂದ ನೀಡಲಾಗುತ್ತಿರುವ ಮೀಸಲಾತಿಯು 2020 ಜನವರಿ 25ಕ್ಕೆ ಅಂತ್ಯಗೊಳ್ಳಲಿದೆ. ಕಳೆದ ವಾರ ಸಂವಿಧಾನದ 126ನೇ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಸರ್ಕಾರ ಪ.ಜಾತಿ ಹಾಗೂ ಪ.ಪಂಗಡದ ಮೀಸಲಾತಿಯನ್ನು ಇನ್ನೂ 10 ವರ್ಷಗಳ ಕಾಲ ವಿಸ್ತರಿಸಿದೆ.

2) ಎಣ್ಣೆ ಕಿಕ್‌ನಲ್ಲಿ ಚಕ್ರವಿಲ್ಲದ ಕಾರು ಚಲಾಯಿಸಿದ ಭೂಪ!

ಕೆಲ ಚಾಲಕರು ವಾಹನ ಚಲಾಯಿಸುವಾಗ ಕಾನೂನು, ನಿಯಮವನ್ನು ಗಮನದಲ್ಲಿಟ್ಟುಕೊಂಡು ಡ್ರೈವ್ ಮಾಡುತ್ತಾರೆ. ಆದರೀಗ ಲಂಡನ್‌ನಲ್ಲಿ ಪೊಲೀಸರು ಮದ್ಯ ಕುಡಿದು ವಾಹನ ಚಲಾಯಿಸುತ್ತಿದ್ದಾತನನ್ನು ಬಂಧಿಸಿದ್ದಾರೆ. ಅಚ್ಚರಿಗೊಳಿಸುವ ವಿಚಾರವೆಂದರೆ ಎಣ್ಣೆ ಏಟಿಗೆ ಈತನಿಗೆ ತಾನು ಚಕ್ರವಿಲ್ಲದ ಕಾರನ್ನು ಚಲಾಯಿಸುತ್ತಿದ್ದೇನೆಂದೂ ಗಮನಕ್ಕೆ ಬಂದಿಲ್ಲ

3) ನಿರ್ಭಯಾ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ CJI, ದೋಷಿಗಳಿಗೆ ಗಲ್ಲು ವಿಳಂಬ?

ವೈಯುಕ್ತಿಕ ಕಾರಣ ನೀಡಿ ನಿರ್ಭಯಾ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಬೋಬ್ಡೆ. ಇದೀಗ  ನಿರ್ಭಯಾ ಪ್ರಕರಣದ ದೋಷಿಗಳಿಗೆ ಗಲ್ಲು ಶಿಕ್ಷೆ ವಿಳಂಬವಾಗಿದೆ.  

4) ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ಗೆ ಗಲ್ಲು ಶಿಕ್ಷೆ!

ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ಗೆ ಪೇಶಾವರ ಹೈಕೋರ್ಟ್ ನ ವಿಶೇಷ ಪೀಠ ಗಲ್ಲು ಶಿಕ್ಷೆ ವಿಧಿಸಿದೆ. 2007ರಲ್ಲಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ದೇಶದಲ್ಲಿ[ಪಾಕಿಸ್ತಾನ] ತುರ್ತು ಪರಿಸ್ಥಿತಿ ಹೇರಿದ್ದು, 2013ರಲ್ಲಿ ಅವರ ವಿರುದ್ಧ ಪರ್ವೇಜ್ ಮುಷರಫ್ ವಿರುದ್ಧ ದಾಖಲಾಗಿತ್ತು

5) ವಿದ್ಯಾರ್ಥಿಗಳಿಂದ ಬಾಬ್ರಿ ಮಸೀದಿ ಪ್ರತಿಕೃತಿ ಧ್ವಂಸ: ಕಲ್ಲಡ್ಕ ಭಟ್ ಸೇರಿ ಐವರ ವಿರುದ್ದ ಕೇಸ್

ಹಿಂದೂ ಹಾಗೂ ಮುಸಲ್ಮಾನರ ನಡುವಿನ ಕೋಮು ವೈಷಮ್ಯಕ್ಕೆ ಕಾರಣವಾಗಿದ್ದ ಅಯೋಧ್ಯೆ ವಿಚಾರವಾಗಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಪ್ರತಿ ಬಾರಿಯೂ ಗಲಭೆಗೆ ಕಾರಣವಾಗುತ್ತಿದ್ದ ಈ ವಿಚಾರ ಶಾಂತಿಯುತವಾಗಿ ಅಂತ್ಯವಾಗಿದ್ದು, ದೇಶದ ನಾಗರಿಗರು ಸುಪ್ರೀಂ ತೀರ್ಪಿಗೆ ತಲೆಬಾಗಿದ್ದಾರೆ. ಆದರೀಗ ಮತ್ತೆ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ವಿಚಾರ ಸದ್ದು ಮಾಡಿದೆ

6) ಬೆಂಗಳೂರಿನಲ್ಲಿ ಭಯೋತ್ಪಾದನೆ ಸಂಚು: ಜೆಎಂಬಿ ಉಗ್ರ ಅರೆಸ್ಟ್

018ರಲ್ಲಿ ಬೆಂಗಳೂರಲ್ಲಿ ಪತ್ತೆಯಾಗಿದ್ದ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸೋಮವಾರ ಪಶ್ಚಿಮ ಬಂಗಾಳದ ರಘುನಾಥ್‌ಗಂಜ್‌ ಎಂಬಲ್ಲಿ ಬಂಧಿಸಿದೆ. ಬಂಧಿತನನ್ನು ಮೊಸಾರಫ್‌ ಹೊಸ್ಸೇನ್‌ (22) ಅಲಿಯಾಸ್‌ ಹೊಸ್ಸೇನ್‌ ಎಂದು ಗುರುತಿಸಲಾಗಿದೆ

7) ಇಬ್ಬರು ಶಾಸಕರು JDSಗೆ ಬೈ ಬೈ..! ಮುಂದುವರಿಯುತ್ತಾ ಆಪರೇಷನ್ ಕಮಲ..?

ಉಪಚುನಾವಣೆ ನಡೆದು, ಸರ್ಕಾರ ಸೇಫ್ ಎಂದು ತಿಳಿದ ಮೇಲೂ ಆಪರೇಷನ್ ಕಮಲ ಮುಂದುವರಿಯಲಿದೆಯಾ ಎಂಬ ಪ್ರಶ್ನೆ ಕೇಳಿ ಬಂದಿದೆ. ಮಂಡ್ಯದ ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿ ಸೇರುವ ಬಗ್ಗೆ ಚಿಂತಿಸಿದ್ದಾರೆ.

8) IPL ಹರಾಜಿಗೆ ಪೌರತ್ವ ಪ್ರತಿಭಟನೆಯ ಬಿಸಿ..! 

ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಜಾರಿ ವಿಷಯವಾಗಿ ಪ್ರತಿಭಟನೆ ನಡೆಯುತ್ತಿದ್ದು, ಇದರ ನಡುವೆಯೇ ಡಿ.19ರಂದು ಐಪಿಎಲ್‌ ಆಟಗಾರರ ಹರಾಜು ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


9) ಅಯ್ಯಯ್ಯೋ... ಎಲ್ಲರೆದುರು ಅಲಿಯಾ ಮುಂದೆ ಶರ್ಟ್ ಬಿಚ್ಚಿದ ರಣಬೀರ್!...

ಬಾಲಿವುಡ್ ಚಾಕಲೇಟ್ ಬಾಯ್ ರಣಬೀರ್ ಕಪೂರ್- ಅಲಿಯಾ ಭಟ್ ಡೇಟಿಂಗ್ ನಡೆಸ್ತಾ ಇರೋದು ಗೊತ್ತೇ ಇದೆ. ಹಾಗಂತ ಎಲ್ಲರೆದುರು ರಣಬೀರ್ ಶರ್ಟ್ ಬಿಚ್ಚೋದಾ? ರಣಬೀರ್ ಶರ್ಟ್ ಬಿಚ್ಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

10) ಭಾರತದ ರೀತಿ ಯುಪಿಐ ಹಣ ವರ್ಗಾವಣೆ ಜಾರಿಗೆ ಅಮೆರಿಕಕ್ಕೆ ಗೂಗಲ್‌ ಶಿಫಾರಸು!

ಭಾರತದಲ್ಲಿ ಗೂಗಲ್‌ ಪೇ ಭಾರೀ ಯಶಸ್ಸು ಕಂಡಿರುವ ಬೆನ್ನಲ್ಲೇ, ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ಮಾದರಿಯ ಹಣ ವರ್ಗಾವಣೆ ವ್ಯವಸ್ಥೆಯನ್ನು ಅಮೆರಿಕದ ಫೆಡರಲ್‌ ರಿಸವ್‌ರ್‍ ಕೂಡ ಜಾರಿಗೊಳಿಸಬೇಕು ಎಂದು ಗೂಗಲ್‌ ಸಂಸ್ಥೆ ಶಿಫಾರಸು ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!