ಸಿದ್ದು ನಮ್ಮ ನಾಯಕ ಎಂದ ನೂತನ ಅರ್ಹ ಶಾಸಕರ ನಡೆಗೆ ಬಿಜೆಪಿ ನಾಯಕ ಗರಂ

By Suvarna News  |  First Published Dec 17, 2019, 4:27 PM IST

ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಜಯಗಳಿಸಿರುವ ಕೆಲವು ಶಾಸಕರು ಈಗಲೂ ನಮಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ನಾಯಕರು ಎಂದು ಹೇಳಿಕೆ ನೀಡುತ್ತಿರುವುದಕ್ಕೆ ಬಿಜೆಪಿಯಲ್ಲಿ ಆಕ್ಷೇಪಗಳ ವ್ಯಕ್ತವಾಗಿವೆ.


ಶಿವಮೊಗ್ಗ, (ಡಿ.17): ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಜಯಗಳಿಸಿರುವ ಕೆಲವು ಶಾಸಕರು ಈಗಲೂ ನಮಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ನಾಯಕರು ಎಂದು ಹೇಳಿಕೆ ನೀಡುತ್ತಿರುವುದಕ್ಕೆ ಸಚಿವ ಕೆ.ಎಸ್​.ಈಶ್ವರಪ್ಪ ಗರಂ ಆಗಿದ್ದಾರೆ. 

ಶಿವಮೊಗ್ಗದ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ತಾಯಿಯಂತೆ ಭಾವಿಸುತ್ತಾರೆ. ನಮಗೆ ಪ್ರಧಾನಿ ಮೋದಿ ನಾಯಕರು. ಬೇರೆ ಪಕ್ಷದಿಂದ ಬಂದು ಬಿಜೆಪಿಗೆ ಸೇರಿದವರಿಗೂ ಮೋದಿ ಅವರೇ ನಾಯಕರು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ನಮ್ಮ ನಾಯಕರು ಎನ್ನುತ್ತಿದ್ದವರಿಗೆ ಪರೋಕ್ಷವಾಗಿ ಟಾಂಗ್​ ಕೊಟ್ಟರು.

Tap to resize

Latest Videos

'ಬಿಜೆಪಿ ಶಾಸಕರೇ ಸಿದ್ದು ನಮ್ಮ ನಾಯಕ ಅಂತಿದ್ದಾರೆ!' 

ಸಿಎಂ ಸೇರಿದಂತೆ ನಮ್ಮ ಪಕ್ಷದ ವಿವಿಧ ನಾಯಕರು ಬೇರೆ ಪಕ್ಷದಿಂದ ಬಂದವರನ್ನು ಕೈಹಿಡಿದು ಕರೆದುಕೊಂಡಿದ್ದಾರೆ. ಹೀಗಾಗಿ ಅವರು ನಮ್ಮ ಪಕ್ಷದವರನ್ನೇ ನಾಯಕರು ಎಂದು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಜೆಪಿಯಿಂದ ಗೆದ್ದ ಬಳಿಕವೂ ಸಹ ರಮೇಶ್​ ಜಾರಕಿಹೊಳಿ, ಸಿದ್ದರಾಮಯ್ಯನವರೇ ನಮ್ಮ ನಾಯಕರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇತ್ತೀಚೆಗೆ ಉಪಚುನಾವಣೆ ಸಂದರ್ಭದಲ್ಲಿ ಹೇಳಿದ್ದರು.

ಇವತ್ತು ಆಸ್ಪತ್ರೆಗೆ ಬಂದವರೆಲ್ಲ ರಾಜಕೀಯ ವೈರಿಗಳೇ ಹೆಚ್ಚು: ರಾಜಕಾರಣದಾಚೆಗೆ ಸಿದ್ದು ಅಚ್ಚುಮೆಚ್ಚು

ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ರಮೇಶ್ ಜಾರಕಿಹೊಳಿ , ಸಿದ್ದರಾಮಯ್ಯ ನಮ್ಮ ಗುರು, ಪಕ್ಷ ಬದಲಾಯಿಸಿದ್ರೂ ಅವರೇ ನಮ್ಮ ನಾಯಕ. ಹೀಗಾಗಿ ಆರೋಗ್ಯ ವಿಚಾರಿಸಲು ಬಂದಿದ್ದೆ ಎಂದು ಹೇಳಿದ್ದರು. 

ಅಷ್ಟೇ ಅಲ್ಲದೇ ಹಿರೇಕೆರೂರು ನೂತನ ಶಾಸಕ ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್ ಸಹ ಸಿದ್ದರಾಮಯ್ಯನವರೇ ನಮ್ಮ ನಾಯಕರು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

click me!