ಭಾರತದ ವಿದೇಶಾಂಗ ಅಧಿಕಾರಿ ಭಾಷಣಕ್ಕೆ ಬೆವರಿದ ಪಾಕ್ ಪ್ರಧಾನಿ| ಮಿಸ್ಟರ್ ಇಮ್ರಾನ್ ಖಾನ್ ನಿಯಾಜಿ ಎಂದು ಕರೆದ ವಿದಿಶಾ ಮೈತ್ರಾ| ಲೆ.ಜನರಲ್ ಎಎಕಿ ನಿಯಾಜಿ ಅವರ ಸಂಬಂಧಿ ಇಮ್ರಾನ್ ಖಾನ್| 1971ರಲ್ಲಿ ಭಾರತೀಯ ಸೇನೆ ಮುಂದೆ 90 ಸಾವಿರ ಸೈನಿಕರೊಂದಿಗೆ ಶರಣಾಗಿದ್ದ ಎಎಕೆ ನಿಯಾಜಿ| ಇಮ್ರಾನ್ ಖಾನ್ ನಿಯಾಜಿ ರಕ್ತ ಸಂಬಂಧಿ ಎಂದು ಜಗಜ್ಜಾಹೀರು|
ವಿಶ್ವಸಂಸ್ಥೆ(ಸೆ.30): ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ರೋಷಾವೇಶದ ಮಾತನಾಡಿ ತಣ್ಣಗಾಗಿರುವ ಇಮ್ರಾನ್ ಖಾನ್‌ಗೆ ಭಾರತ ವಿದಿಶಾ ಮೈತ್ರಾ ನೀಡಿರುವ ತಿರುಗೇಟು ಇದೀಗ ವಿಶ್ವದ ಗಮನ ಸೆಳೆದಿದೆ.
ಪಾಕ್ ಪ್ರಧಾನಿಯ ಭಾಷಣಕ್ಕೆ ಪ್ರತಿಕ್ರಿಯೆ ಹಕ್ಕಿನಡಿ ಭಾರೀ ತಿರುಗೇಟು ನೀಡಿರುವ ವಿದಿಶಾ ಮೈತ್ರಾ, ಇಮ್ರಾನ್ ಖಾನ್ ಅವರನ್ನು ಇಮ್ರಾನ್ ಖಾನ್ ನಿಯಾಜಿ ಎಂದು ಕರೆಯುವ ಮೂಲಕ ಇಡೀ ವಿಶ್ವದ ಹುಬ್ಬೇರಿಸಿದ್ದಾರೆ.
ಅಸಲಿಗೆ ಇಮ್ರಾನ್ ಖಾನ್ 1971ರ ಭಾರತ-ಪಾಕ್ ಯುದ್ಧದದಲ್ಲಿ ಭಾರತೀಯ ಸೇನೆ ಮುಂದೆ 90 ಸಾವಿರ ಪಾಕ್ ಸೈನಿಕರೊಂದಿಗೆ ಶರಣಾಗಿದ್ದ ಲೆ. ಜನರಲ್ ಎಎಕೆ ನಿಯಾಜಿ ಸಂಬಂಧಿ. ಈ ಕಾರಣಕ್ಕೆ ವಿದಿಶಾ ಇಮ್ರಾನ್ ಅವರ ಪೂರ್ಣ ಹೆಸರು ಪ್ರಸ್ತಾಪಿಸಿ ಅವರನ್ನು ಪೇಚಿಗೆ ಸಿಲುಕಿಸಿದ್ದಾರೆ.
ಇಮ್ರಾನ್ ಖಾನ್ ಲೆ. ಜನರಲ್ ಎಎಕೆ ನಿಯಾಜಿ ಅವರ ಸಂಬಂಧಿ ಎಂಬುದು ಇದೀಗ ಜಗಜ್ಜಾಹೀರಾಗಿದ್ದು, ವಿದಿಶಾ ಮೈತ್ರಾ ಅವರ ನಿರ್ಭಿಡೆಯ ಭಾಷಣಕ್ಕೆ ಭಾರತವೂ ಸೇರಿದಂತೆ ಇಡೀ ವಿಶ್ವ ತಲೆಬಾಗಿದೆ.
undefined
ಯಾರು ಎಎಕೆ ನಿಯಾಜಿ?:
ಪಾಕ್ ಸೇನೆಯ ಲೆ. ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ, ಬಾಂಗ್ಲಾ ಯುದ್ಧ ಮುಕ್ತಾಯ ಕಂಡಾಗ ತಮ್ಮ 90 ಸಾವಿರ ಸೈನಿಕರೊಂದಿಗೆ ಭಾರತೀಯ ಸೇನೆ ಮುಂದೆ ಶರಣಾಗಿದ್ದರು.
ಪಾಕ್ ಸೇನೆಯ ಈಸ್ಟರ್ನ್ ಕಮಾಂಡ್ ಮುಖ್ಯಸ್ಥರಾಗಿದ್ದ ಎಎಕೆ ನಿಯಾಜಿ, ಆಗಿನ ಪೂರ್ವ ಪಾಕಿಸ್ತಾನದ ಗರ್ವನರ್ ಜನರಲ್ ಕೂಡ ಆಗಿದ್ದರು. ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನ ಸೋತ ಬಳಿಕ ಡಿಸೆಂಬರ್ 16, 1971ರಂದು ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್ ಮುಖ್ಯಸ್ಥ ಲೆ. ಜನರಲ್ ಜಗಜೀತ್ ಸಿಂಗ್ ಅರೋರಾ ಅವರ ಮುಂದೆ ನಿಯಾಜಿ ತಮ್ಮ 90 ಸಾವಿರ ಸೈನಿಕರೊಂರದಿಗೆ ಶರಣಾಗಿದ್ದರು.
ಭಾರತಂಬೆಯ ಹೆಮ್ಮೆಯ ಪುತ್ರಿ ವಿದಿಶಾ ಮೈತ್ರಾ:
2009 ರ ಬ್ಯಾಚ್'ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾಗಿರುವ ವಿದಿಶಾ ಮೈತ್ರಾ, ಉತ್ತಮ ತರಬೇತು ಅಧಿಕಾರಿಯ ಬಂಗಾರದ ಪದಕಕ್ಕೆ ಭಾಜನಾರಾಗಿದ್ದರು. ಪ್ರಸ್ತುತ ವಿಶ್ವಸಂಸ್ಥೆಯ ಭಾರತೀಯ ವಿದೇಶಾಂಗ ಇಲಾಖೆಯ ಅಧಿಕಾರಿಯಾಗಿ ವಿದಿಶಾ ಕಾರ್ಯ ನಿರ್ವಹಿಸುತ್ತಿದ್ದಾರೆ.