ಕಾಶ್ಮೀರದಲ್ಲಿ ನಡೆಯುತ್ತಿರುವುದು ಜಿಹಾದ್| ಕಣಿವೆ ನಾಡಿನ ವಿಚಾರವಾಗಿ ಮತ್ತೆ ಇಮ್ರಾನ್ ಖಾನ್ ಬೆದರಿಕೆ
ಇಸ್ಲಾಮಾಬಾದ್[ಸೆ.30]: ಪದೇ ಪದೇ ಕಾಶ್ಮೀರ ವಿಚಾರದಲ್ಲಿ ಉದ್ಧಟತದನದ ಹೇಳಿಕೆ ನೀಡುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರದ ಪರ ನಿಲ್ಲುವುದು ಧರ್ಮಯುದ್ಧ (ಜಿಹಾದ್) ಎಂದು ಸಂಬೋಧಿಸಿದ್ದಾರೆ.
ಇಮ್ರಾನ್ ವಿಶ್ವಸಂಸ್ಥೆ ಭಾಷಣ ಬಕ್ವಾಸ್: ಮೋದಿ ಶಹಬ್ಬಾಸ್ ಎಂದ ಕಾಂಗ್ರೆಸ್!
undefined
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಪಾಕಿಸ್ತಾನಕ್ಕೆ ಮರಳಿದ ಇಮ್ರಾನ್, ಕಾಶ್ಮೀರದ ವಿರುದ್ಧ ಇಡೀ ಜಗತ್ತು ಪಾಕಿಸ್ತಾನ ಕಾಶ್ಮೀರಿಗಳ ಪರ ನಿಲ್ಲಲಿದೆ. ಅವರ ಪರ ನಿಲ್ಲುವುದು ಜಿಹಾದ್‌ಗೆ ಸಮವಾಗಿದ್ದು, ನಮ್ಮ ಮೇಲೆ ಅಲ್ಲಾಹು ತೃಪ್ತಿಯಾಗಬೇಕಿರುವುದರಿಂದ ಈ ರೀತಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಮರ್ಯಾದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು: ಹೀಗಿತ್ತು ವಿದಿಶಾ ಚಾಟಿಯೇಟು!
ಈ ಹೋರಾಟದಲ್ಲಿ ನಿರಾಶೆಯಾಗಬೇಕಿಲ್ಲ.ಕಾಶ್ಮೀರಿಗಳು ನಮ್ಮೆಡೆ ನೋಡುತ್ತಿದ್ದು, ನಾವು ಅವರೊಂದಿಗೆ ನಿಂತರೆ ಅವರು ಗೆಲ್ಲಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಎರಡು ದಿನಗಳ ಹಿಂದಷ್ಟೇ ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಹಾಧಿವೇಶನದ ವೇಳೆ ದಿ ಭಾಷಣದ ಬಳಿಕ ಮಾತನಾಡಿದ್ದ ಇಮ್ರಾನ್, ಭಾರತದ ವಿರುದ್ಧ ಹಲವು ಆರೋಪ ಮಾಡಿದ್ದರು. ಬಳಿಕ ಪಾಕ್ ಆರೋಪಗಳಿಗೆ ಪ್ರತ್ಯುತ್ತರ ನೀಡುವ ಭಾರತದ ಅಧಿಕಾರದ ಭಾಗವಾಗಿ ಮಾತನಾಡಿದ ಭಾರತದ ವಿದೇಶಾಂಗ ಇಲಾಖೆಯ ಮಹಿಳಾ ಅಧಿಕಾರಿ ವಿದಿಶಾ ಮೈತ್ರಾ ಅವರು ಪಾಕಿಸ್ತಾನ ಭಯೋತ್ಪಾದನೆಯ ಉಗಮ ಸ್ಥಾನ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಆ ದೇಶದ ಮಾನ ಹರಾಜು ಹಾಕಿದ್ದಾರೆ