ರಾಷ್ಟ್ರಪತಿ ಕೈಗೆ ಮಹಾ ರೂಲ್, ಮತ್ತೆ ಬರ್ತಾರ ಸ್ಯಾಂಡಲ್ವುಡ್ ಕ್ಲೀನ್; ನ.12ರ ಟಾಪ್ 10 ಸುದ್ದಿ!

By Web Desk  |  First Published Nov 12, 2019, 4:48 PM IST

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಕಸರತ್ತಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಬಿಜೆಪಿ, ಶಿವ ಸೇನೆ ಹಾಗೂ NCP ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆಗಳು ಕಾಣಿಸುತ್ತಿವೆ. ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಲಾಗಿದೆ. ರಾಧಿಕಾ ಕುಮಾರಸ್ವಾಮಿ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇದೀಗ ರಮ್ಯಾ ಚಿತ್ರರಂಗಕ್ಕೆ ವಾಪಾಸ್ ಬರ್ತಾರ ಅನ್ನೋ ಮಾತುಗಳಿಗೆ ಉತ್ತರ ಸಿಕ್ಕಿದೆ. ರಾಮ ಮಂದಿರಕ್ಕೆ ಶಂಕು  ಸ್ಥಾಪನೆ, ಟಿ20 ಸ್ಥಾನದಲ್ಲಿ ದೀಪಕ್ ಚಹಾರ್ ಏರಿಕೆ ಸೇರಿದಂತೆ ನವೆಂಬರ್ 12ರ ಟಾಪ್ 10 ಸುದ್ದಿ ಇಲ್ಲಿವೆ.


1) 'ಮಹಾ' ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು: ಒದ್ದಾಡುತ್ತಿದೆ ಈ ತ್ರಿಮೂರ್ತಿಗಳ ಮನಸ್ಸು!

Latest Videos

undefined

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರ ನಿರ್ಣಯದಿಂದ ಸರ್ಕಾರ ರಚನೆಯ ಉಮೇದಿನಲ್ಲಿದ್ದ ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟಕ್ಕೆ ತೀವರ ಮುಖಭಂಗವಾಗಿದೆ.

2) ಹೈಕೋರ್ಟ್ ಸ್ಪಷ್ಟ: ಡಿಕೆ ಶಿವಕುಮಾರ್‌ಗೆ ಮತ್ತೊಂದು ಸಂಕಷ್ಟ

ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಂದೆಡೆ ಹೈಕೋರ್ಟ್ ಡಿಕೆಶಿಗೆ ಬಿಗ್ ಶಾಕ್ ನೀಡಿದೆ.

3) ಏಪ್ರಿಲ್ 2ಕ್ಕೆ ರಾಮಮಂದಿರಕ್ಕೆ ಶಂಕುಸ್ಥಾಪನೆ

ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಶ್ರೀರಾಮಚಂದ್ರನ ಜನ್ಮದಿನವಾದ ರಾಮನವಮಿಯ ದಿನದಂದೇ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. 

4) ನಮ್ಮ ಪಾರ್ಟ್ನರ್ ಹೀಗೆ ಮಾಡಿದ್ದು ಆಘಾತವಾಗಿದೆ : ಶೋಭಾ ಕರಂದ್ಲಾಜೆ

ಕೆಲ ದಶಕಗಳಿಂದಲೂ ನಮ್ಮ ಮಿತ್ರರಾಗಿದ್ದ ಪಕ್ಷ ಹೀಗೆ ಮಾಡಿರುವುದು ಆಘಾತವಾಗಿದೆ ಎಂದು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವಾಗದಿರುವ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

5) ಪ್ರಯಾಣಿಕರ ಗಮನಕ್ಕೆ: 20 ಕ್ಕೂ ಹೆಚ್ಚು ರೈಲು ಸೇವೆ ರದ್ದು

 ಸೊಲ್ಲಾಪುರ ವಿಭಾಗದಲ್ಲಿ ಬರುವ ಕಲಬುರಗಿ-ಸಾವಳಗಿ ಜೋಡಿ ರೈಲು ಮಾರ್ಗದ ನಾನ್-ಇಂಟರ್‌ಲಿಂಕಿಂಗ್ ಕಾಮಗಾರಿ ಕೈಗೊಂಡಿದ್ದರಿಂದ ನಾಲ್ಕು ಎಕ್ಸಪ್ರೆಸ್ ರೈಲು ಸೇರಿ 20 ಕ್ಕೂ ಹೆಚ್ಚು ರೈಲು ಸೇವೆ ಎರಡು ವಾರ ರದ್ದು ಪಡಿಸಿ ಅಧಿಸೂಚನೆ ಹೊರಡಿಸಿದೆ.

6) ICC ಟಿ20 ರ‍್ಯಾಂಕಿಂಗ್ ಪ್ರಕಟ: ಹ್ಯಾಟ್ರಿಕ್ ವೀರ ದೀಪಕ್ ಚಹರ್’ಗೆ ಬಂಪರ್..!

ಭಾರತ ಕ್ರಿಕೆಟ್ ತಂಡದ ಯುವ ವೇಗದ ಬೌಲರ್ ದೀಪಕ್ ಚಹರ್, ಭಾನುವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆಯ ಪ್ರದರ್ಶನ ತೋರಿದ ಬಳಿಕ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರೀ ಏರಿಕೆ ಕಂಡಿದ್ದಾರೆ. ದೀಪಕ್ ಚಹರ್ ಹ್ಯಾಟ್ರಿಕ್ ಸಹಿತ ಕೇವಲ 7 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು.

7) ಅಂತರಾಷ್ಟ್ರೀಯ ಪ್ರಶಸ್ತಿ: ರಾಕಿಂಗ್ ಸ್ಟಾರ್ ಮುಡಿಗೆ ಮತ್ತೊಂದು ಗರಿ!

ಅಂತರಾಷ್ಟ್ರೀಯ ಮಟ್ಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಯಶ್ ಮುಡಿಗೆ ಮತ್ತೊಂದು ಗರಿ ಸಿಕ್ಕಿದೆ. ಕನ್ನಡದ ಹಿರಿಮೆಯನ್ನು ಇನ್ನಷ್ಟು ಮೇಲಕ್ಕೆ ಕೊಂಡೊಯ್ದಿದ್ದಾರೆ ಯಶ್. 

8) ಒಟ್ಟು 2,300 ರೂ. ಕುಸಿದ ಚಿನ್ನದ ದರ: ಚಿನ್ನದಷ್ಟೇ ಚೆಂದ ವಹಿವಾಟು!

ನವೆಂಬರ್ ಆರಂಭದಿಂದಲೇ ಕುಸಿತದ ಹಾದಿ ಹಿಡಿದಿರುವ ಚಿನ್ನ, ಬೆಳ್ಳಿ ದರ ದೇಶೀಯ ಮಾರುಕಟ್ಟೆಯಲ್ಲಿ ಇಂದೂ ಕೂಡ ಕೊಂಚ ಇಳಿಕೆ ಕಂಡಿದೆ. ಈ ಮೂಲಕ ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.

9) ಉಪ ಚುನಾವಣೆ : ಕಾಂಗ್ರೆಸಿಗೆ ದೇವೇಗೌಡರ ಚೆಕ್

 ಐದಾರು ಕ್ಷೇತ್ರಗಳಲ್ಲಿ ಮಾತ್ರ ಪ್ರಬಲ ಸ್ಪರ್ಧೆ ನೀಡುವ ಸಾಮರ್ಥ್ಯವಿದ್ದರೂ ಉಪಚುನಾವಣೆ ನಡೆಯುವ ಎಲ್ಲಾ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ ಬಿಜೆಪಿಗೆ ನೆರವಾಗಿ ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ಮುಂದಾಗಿದೆ.

10) ರಾಧಿಕಾ ಕುಮಾರಸ್ವಾಮಿ ಕಮ್‌ ಬ್ಯಾಕ್‌ಗೆ ಉತ್ತರ ಸಿಕ್ತು, ರಮ್ಯಾ ವಾಪಾಸ್ ಯಾವಾಗ?

ರಮ್ಯಾ ಸ್ಯಾಂಡಲ್‌ವುಡ್‌ಗೆ ಮತ್ತೆ ವಾಪಸ್ಸಾಗುತ್ತಾರೆ ಎನ್ನುವ ಮಾತು ಆಗಾಗ ಕೇಳಿ ಬರುತ್ತಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೆ ರಮ್ಯಾ ಉತ್ತರವೇನು? ಈ ಸ್ಟೋರಿಯಲ್ಲಿದೆ ಹಲವು ಕುತೂಹಲಗಳಿಗೆ ಉತ್ತರ.
 

click me!