
ಬೆಂಗಳೂರು[ನ.25]: ಅಭಿಮಾನಿಗಳ ಒತ್ತಡಕ್ಕೆ ಮಣಿದು, ಹಿರಿಯ ನಟ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಹೆಲಿಕಾಪ್ಟರ್ ಮೂಲಕ ರವಾನಿಸಲಾಗುತ್ತಿದೆ. ಸಂಜೆ 5 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಭಾರತೀಯ ಸೇನಾ ಹೆಲಿಕಾಪ್ಟರ್ ಮೂಲಕ ಅಂಬಿ ಮೃತದೇಹವನ್ನು ಮಂಡ್ಯಕ್ಕೆ ಸಾಗಿಸಲಾಗುತ್ತದೆ. ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಷ್ ಅವರ ಪಾರ್ಥಿವ ಶರೀರದ ದರ್ಶನ ಸಕಲ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಸಂಪುಟದ ಸಚಿವರು, ಚಿತ್ರರಂಗದ ನಟರು ಹಾಗೂ ಇತರೆ ಗಣ್ಯರು ಮಂಡ್ಯದಲ್ಲಿ ನಡೆಯಲಿರುವ ಅಂಬರೀಶ್ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಮಂಡ್ಯದಲ್ಲಿ ಹುಟ್ಟಿ ಬೆಳೆದ ಅಂಬರೀಷ್‌ಗೆ ಮಂಡ್ಯದ ಮಂದಿಯೊಂದಿಗೆ ವಿಪರೀತ ಒಡನಾಟವಿತ್ತು. ರಾಜಕೀಯವಾಗಿಯೂ ಮಂಡ್ಯದಲ್ಲಿಯೇ ಬೆಳೆದ ತಮ್ಮ ನೆಚ್ಚಿನ ನಾಯಕ ಪಾರ್ಥಿವ ಶರೀರ ದರ್ಶನಕ್ಕೆ ಜಿಲ್ಲಿಯಲ್ಲಿಯೂ ವ್ಯವಸ್ಥೆ ಮಾಡಬೇಕೆಂದು ಜನರು ಆಗ್ರಹಿಸಿದ್ದರು. ಇದಕ್ಕೆ ಮಣಿದ ಸರಕಾರ ಹೆಲಿಕಾಪ್ಟರ್ ಮೂಲಕ ಅಂಬರೀಷ್ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ಸಾಗಿಸಿ, ಒಂದರೆಡು ಗಂಟೆಗಳ ಕಾಲ ಮಂಡ್ಯದಲ್ಲಿಯೂ ಸಾರ್ವಜನಿಕರ ದರ್ಶನಕ್ಕೆ ಇಡಲು ವ್ಯವಸ್ಥೆ ಮಾಡಿದೆ.
ಅಂಬರೀಷ್ ಸಾವಿಗೆ ಮನ ನೊಂದ ಅಭಿಮಾನಿಯೊಬ್ಬ ದುಃಖ ತಡೆಯಲಾಗದೇ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಷ್ ಶನಿವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ಅಂಬರೀಶ್ ಅವರನ್ನು ವಿಕ್ರಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಮಂಡ್ಯದ ಗಂಡಿನ ಜನರ ಅಭಿಮಾನ, ಆಕ್ರೋಶ ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೃತರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ಹೆಲಿಕಾಪ್ಟರ್ ಮೂಲಕ ತೆಗೆದುಕೊಳ್ಳಲು ಯತ್ನಿಸುತ್ತಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸಾವಿನ ಬಗ್ಗೆ ಮಾತನಾಡಿದ್ದಕ್ಕೆ ನಾನು ಅಂಬಿಗೆ ಬೈದಿದ್ದೆ
ಫೋಟೋಗಳಲ್ಲಿ ಅಂಬರೀಷ್-ಸುಮಲತಾ ಪ್ರೇಮ್ ಕಹಾನಿ
ಒಮ್ಮೆ ಮಂಡ್ಯಕ್ಕೆ ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಿ, ಪುನಾ ತರುವುದು ಶಾಸ್ತ್ರಕ್ಕೆ ವಿರೋಧ ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲು ಹಿಂದು ಮುಂದು ನೋಡುತ್ತಿದ್ದು, ಅನ್ಯತಾ ಭಾವಿಸಬಾರದೆಂದು ಅಭಿಮಾನಿಗಳು ಮುಖ್ಯಮಂತ್ರಿ ಆಗ್ರಹಿಸಿದ್ದಾರೆ. ಆ ಕಾರಣದಿಂದ ಕೇಂದ್ರ ಸರಕಾರದೊಂದಿಗೆ ಸಂಪರ್ಕದಲ್ಲಿದ್ದು, ಏರ್‌ಲಿಫ್ಟ್ ಮಾಡುವ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸ್ಯಾಂಡಲ್‌ವುಡ್ ಅಣ್ಣನ ಸಾವಿಗೆ ಮನಮಿಡಿದ ಶೃತಿ
ಮಂಡ್ಯದ ಜನತೆ ಶಾಂತಿ ಕಾಪಾಡುವಂತೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಅಭಿಮಾನಿಗಳ ಆಕ್ರೋಶ: ಆಸ್ಪತ್ರೆ ಹಿಂಬಾಗಿಲಿನಿಂದ ಶವ ರವಾನೆ
ಇದೀಗ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಕಂಠೀರವ ಸ್ಟುಡಿಯೋದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಅಂಬಿ ಬಗ್ಗೆ ಕ್ರೇಜಿ ಸ್ಟಾರ್ ಬಿಚ್ಚಿಟ್ಟ ಗುಟ್ಟು
'ಅಂಬಿನ ನಿಂಗೆ ವಯಸ್ಸಾಯ್ತೋ..' ಚಿತ್ರದಲ್ಲಿ ಅಂಬಿ ನಟಿಸಿದ್ದು ಏಕೆ?
ಗಮನಿಸಿ: ಅಂತಿಮ ದರ್ಶನ ಕಂಠೀರವ ಸ್ಟೇಡಿಯಂನಲ್ಲಿ
ಅಂಬಿ ನಿವಾಸದಿಂದ ಹೊರಟ ಪಾರ್ಥಿವ ಶರೀರ ಇದೀಗ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಆ ಬಳಿಕ ಕಂಠೀರವ ಸ್ಟೇಡಿಯಂನತ್ತ ಕೊಂಡ್ಯೊಯಲಾಗುತ್ತದೆ.
ಅನಾರೋಗ್ಯದಿಂದ 2 ದಶಕಗಳ ಕಾಲ ಹೋರಾಡಿದ ಅಂಬಿ
ಮಂಡ್ಯ ಬಸ್ ದುರಂತಕ್ಕೆ ಸಂತಾಪ ಹೇಳುವಾಗಲೇ ಬಳಲಿದ್ದ ಅಂಬಿ
ಮಂಡ್ಯಕ್ಕೆ ಮರಲಿ ನಾಡ ಮಗನ ಪಾರ್ಥೀವ ಶರೀರ
48 ಗಂಟೆಗಳು ಮದ್ಯ ಮಾರಾಟ ನಿಷೇಧ
ಕೊನೆಯ ದಿನವನ್ನು ನೆಚ್ಚಿನ ಮನೆಯಲ್ಲಿ ಕಳೆಯದ ಅಂಬಿ
ಅಂಬಿ ಬೈದರೂ ಪ್ರಸಾದವೆಂದು ಕೊಳ್ಳುತ್ತಿದ್ದ ಅಭಿಮಾನಿಗಳು
ಸ್ಯಾಂಡಲ್‌ವುಡ್ ಟ್ರಬಲ್ ಶೂಟರ್ ರೆಬೆಲ್ ಸ್ಟಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.