ಗಂಡ್ಮಕ್ಳ ಜೊತೆಗೆ ಹೆಣ್ಮಕ್ಳ ತವರಾಗಿದೆ ಬಾರು, ಮದುಮಗನಿಗೆ ಕೈಕೊಟ್ಟ ಕಾರು; ಮೇ.4ರ ಟಾಪ್ 10 ಸುದ್ದಿ!

Suvarna News   | Asianet News
Published : May 04, 2020, 05:01 PM IST
ಗಂಡ್ಮಕ್ಳ ಜೊತೆಗೆ ಹೆಣ್ಮಕ್ಳ ತವರಾಗಿದೆ ಬಾರು, ಮದುಮಗನಿಗೆ ಕೈಕೊಟ್ಟ ಕಾರು; ಮೇ.4ರ ಟಾಪ್ 10 ಸುದ್ದಿ!

ಸಾರಾಂಶ

ರಾಜ್ಯದ್ಯಂತ ಮದ್ಯ ಮಾರಾಟ ಆರಂಭವಾಗಿದೆ. ಪುರಷರು ಮಾತ್ರವಲ್ಲ, ಮಹಿಳೆಯರು ಕೂಡ ಬಾರ್ ಮುಂದೆ ಕ್ಯೂ ನಿಂತು ಮದ್ಯ ಖರೀದಿಸುತ್ತಿರುವ ದೃಶ್ಯ ರಾಜ್ಯದ ಬಹುತೇಕ ಕಡೆಗಳಲ್ಲಿ ಕಂಡುಬರುತ್ತಿದೆ. ಇನ್ನು ಖರೀದಿಸಿದವರ ಮನೆ ತಲುಪುವ ಮೊದಲೇ ಆಟ ಶುರುವಮಾಡಿದ್ದಾರೆ. ತಬ್ಲೀಘಿಗಳಿಂದ ಕೊರೋನಾ ವೈರಸ್ ಹರಡುವಿಕೆ ಇನ್ನೂ ನಿಂತಿಲ್ಲ. ಇದೀಗ ತಬ್ಲೀಘಿಗಳಿಂದ  25 BSF ಯೋಧರಿಗೂ ಕೊರೋನಾ ಕಾಣಿಸಿಕೊಂಡಿದೆ. ಮಹಡಿ ಮೇಲೆ ಬಾಲಿವುಡ್ ನಟನ ತಂಗಿಯ ಕಿಸ್, ಮದುಮಗ ಕಾರು ಬೆಂಕಿಗೆ ಆಹುತಿ ಸೇರಿದಂತೆ ಮೇ.4ರ ಟಾಪ್ 10 ಸುದ್ದಿ ಇಲ್ಲಿವೆ.

ಕುಡಿ..ಕುಡಿ..ಮಜಾ ಹೊಡಿ.. ಕುಡಿದು..ಕುಡಿದು ಓಲಾಡಿ...ಎಲ್ಲಾ ಎಣ್ಣೆಯಾಟ!...

ಮದ್ಯದಂಗಡಿ ಓಪನ್ ಆಗಿದ ಸುದ್ದಿ ಕೇಳಿ ಎದ್ದನೋ ಬಿದ್ದನೋ ಅಂಥ ರಸ್ತೆ ಮಧ್ಯೆಯೇ ಕುಳಿತು ಗುಟುಕೇರಿಸಿಕೊಂಡವರಿಗೇನು ಕಡಿಮೆಯಿಲ್ಲ. ಮಾನಿನಿಯರು ಸರತಿ ಸಾಲಿನಲ್ಲಿ ಮದ್ಯ ಖರೀದಿಗೆ ನಿಂತು ನಾವೇನು ಕಮ್ಮಿ ಎಂದು ಸವಾಲು ಹಾಕುತ್ತ ಇದ್ದಾರೆ. ಸದ್ಯ ಇಡೀ ರಾಜ್ಯವೇ ಒಂದು ಅಮಲಿನ ಲೋಕ. ಮದ್ಯಪ್ರಿಯರ ಅವತಾರಗಳು ಆಹಾ ..ನೀವೇ ನೋಡಬೇಕು 

ಎಣ್ಣೆ ಕುಡಿಯುವುದಕ್ಕಿಂತ ಮುನ್ನವೇ ತಲೆ ತಿರುಗಿ ಬಿದ್ದ ಯುವತಿ..!

ನಗರದ  ಕಸ್ತೂರ ಬಾ ರಸ್ತೆಯಲ್ಲಿರುವ ಟಾನಿಕ್ ಹೆಸರಿನ ಮದ್ಯದಂಗಡಿಯಲ್ಲಿ ಎಣ್ಣೆ ಖರೀದಿಸಲು ತಿಂಡಿಯನ್ನು ತಿನ್ನದೆ ಯುವತಿಯೊಬ್ಬಳು ಸರತಿ ಸಾಲಿನಲ್ಲಿ ನಿಂತಿದ್ದಳು. ಆದರೆ ಬಿಸಿಲು ಹೆಚ್ಚಾಗಿದ್ದರಿಂದ ಎಣ್ಣೆ ಖರೀದಿಸುವ ಮುನ್ನವೇ ಕ್ಯೂನಲ್ಲೇ ತಲೆ ತಿರುಗಿ ಬಿದ್ದಿದ್ದಾಳೆ.

ಜಾಧವ್‌ ರಕ್ಷಣೆಗಾಗಿ ಪಾಕ್‌ ಜೊತೆ ಭಾರತ ಹಿಂಬಾಗಿಲ ಮಾತುಕತೆ!...

ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಸೇನಾನಿ ಕುಲಭೂಷಣ್‌ ಜಾಧವ್‌ ಅವರ ರಕ್ಷಣೆಗಾಗಿ ಭಾರತ ಸರ್ಕಾರ ಪಾಕಿಸ್ತಾನದ ಜೊತೆ ಹಿಂಬಾಗಿಲ ಮೂಲಕ ಮಾತುಕತೆ ನಡೆಸಿತ್ತು ಎಂಬ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್‌ ಅವರ ಪರ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ಬಹಿರಂಗಪಡಿಸಿದ್ದಾರೆ.

ತಬ್ಲೀಘಿ ಅವಾಂತರ: 25 ಮಂದಿ BSF ಯೋಧರಿಗೆ ಕೊರೋನಾ ಸೋಂಕು!

ಭಾನುವಾರ  ಮತ್ತೆ ಗಡಿ ರಕ್ಷಣಾ ಪಡೆಯ 25 ಮಂದಿ ಯೋಧರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟು 42 ಯೋಧರಿಗೆ ಕೊರೋನಾ ತಗುಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವರಲ್ಲಿ 31 ಯೋಧರು ದೆಹಲಿ ಪೊಲೀಸರೊಂದಿಗೆ ನಿಜಾಮುದ್ದೀನ್‌ನಲ್ಲಿರುವ ತಬ್ಲೀಘಿ ಮರ್ಕಜ್ ಹಾಗೂ ಚಾಂದಿನಿ ಮಹಲ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಘಟಕದಲ್ಲಿದ್ದರೆನ್ನಲಾಗಿದೆ. BSFನ 126ನೇ ಬೆಟಾಲಿಯನ್‌ನ ಸುಮಾರು 58 ಯೋಧರಿಗೆ ನಡೆಸಿದ್ದ ಕೊರೋನಾ ವರದಿಯಲ್ಲಿ ನೆಗೆಟಿವ್ ಎಂಬ ಫಲಿತಾಂಶ ಬಂದಿದೆ.

ಒತ್ತಡಕ್ಕೆ ಮಣಿದು ಕಂಬಳ ವೀರನಿಗೆ ಟ್ರಯಲ್ಸ್‌ಗೆ ಆಹ್ವಾನ!...

ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದ ಕಂಬಳ ಜಾಕಿ ಶ್ರೀನಿವಾಸ್ ಗೌಡ ಹಾಗೂ ಮಧ್ಯ ಪ್ರದೇಶ ಗ್ರಾಮೀಣ ಪ್ರತಿಭೆ ರಾಮೇಶ್ವರ್‌ ಗುಜ್ಜಾರ್‌ಗೆ ಸಾಯ್ ಆಯ್ಕೆ ಟ್ರಯಲ್ಸ್ ನಡೆಸಲು ಮುಂದಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ಮಹಡಿ ಮೇಲೆ ನಿಂತು ಬಾಯ್‌ಫ್ರೆಂಡ್‌ಗೆ ಲಿಪ್‌ಲಾಕ್‌ ಮಾಡಿದ ಖ್ಯಾತ ನಟನ ತಂಗಿ!...

 ಬಹಿರಂಗವಾಗಿ ಮಹಡಿ ಮೇಲೆ ನಿಂತು ಬಾಯ್‌ಫ್ರೆಂಡ್‌ಗೆ ಕಿಸ್‌ ಮಾಡಿದ ಖ್ಯಾತ ನಟನ ತಂಗಿ.  ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗೆ ಬಂದ ಕಾಮೆಂಟ್‌ ಹೇಗಿತ್ತು ಗೊತ್ತಾ?

20ಕೆಜಿ ತೂಕ ಹೆಚ್ಚಿಸ್ಕೊಂಡು ಕರೀನಾ ಕಪೂರ್‌ ರೀತಿ ಕಾಣಿಸುತ್ತಿರುವೆ ಎಂದ 'ತಲೈವಿ'!

ಬಾಲಿವುಡ್‌ ಚಿತ್ರರಂಗದ ಬೋಲ್ಡ್‌ ನಟಿ ಕಂಗನಾ ರಣಾವತ್‌ ಜಯಲಲಿತಾ ಬಯೋಪಿಕ್‌ನಲ್ಲಿ ಮಿಂಚಲು ವಿಭಿನ್ನವಾಗಿ ತಯಾರಿ ಮಾಡಿಕೊಂಡಿದ್ದರು. ಪಾತ್ರ ಬೇಡುವಂತೆ ತೂಕ ಹೆಚ್ಚಿಸಿಕೊಳ್ಳಲು, ನಿರ್ಮಾಪಕರು ಹಾಗೂ ನಿರ್ದೇಶಕರು ಡಿಮ್ಯಾಂಡ್‌ ಮಾಡಿದ್ದರು. ಚಿತ್ರದ ಫಸ್ಟ್ ಪೋಸ್ಟರ್‌ಗೆ ಅಭಿಮಾನಿಗಳಿಂದ ಬಂದ ನೆಗಟಿವ್ ಕಾಮೆಂಟ್‌ ಕಂಗನಾಳನ್ನು ಕುಗ್ಗಿಸಿತು.

ಮದ್ಯ ಸಿಗುತ್ತೋ ಇಲ್ವೋ ಅಂತ ಆಧಾರ್ ಕಾರ್ಡ್ ತಂದ ಕುಡುಕ!...

ಮದ್ಯಕ್ಕಾಗಿ ಏನೇನೆಲ್ಲಾ ಮಾಡ್ತಾರೆ ನೋಡಿ! ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ಮದ್ಯದಂಗಡಿಗೆ ಆಧಾರ್ ಕಾರ್ಡ್ ತಂದಿದ್ದಾನೆ. ಮದ್ಯ ಸಿಗುತ್ತೋ ಇಲ್ವೋ ಅನ್ನೋ ಆತಂಕದಿಂದ ಆಧಾರ್ ಕಾರ್ಡ್ ತಂದಿದ್ದಾನೆ. 40 ದಿನಗಳಿಂದ ಮದ್ಯ ಇಲ್ಲದೇ ಕಂಗೆಟ್ಟಿದ್ದ ಈ ವ್ಯಕ್ತಿ ಯಾವುದೇ ಕಾರಣಕ್ಕೂ ವಾಪಸ್ ಹೋಗಲು ರೆಡಿ ಇರಲಿಲ್ಲ.  ಆಧಾರ್ ಕಾರ್ಡ್ ತೋರಿಸಿಯಾದರೂ ತೆಗೆದುಕೊಂಡು ಹೋಗಲು ಸಿದ್ದತೆ ಮಾಡಿಕೊಂಡು ಬಂದಿದ್ದಾನೆ. 

ಬೈಕ್‌ ಪೆಟ್ರೋಲ್‌ಗಿಂತ ವಿಮಾನ ಇಂಧನ‌ ಶೇ.70ರಷ್ಟು ಅಗ್ಗ!...

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರೀ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ, ಭಾರತದಲ್ಲೂ ವೈಮಾನಿಕ ಇಂಧನಗಳ ದರವನ್ನು ಭಾನುವಾರ ಶೇ.23.2ರಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಅಂದರೆ ಇದುವರೆಗೆ ಪ್ರತಿ 1000 ಲೀ.ಗೆ 29536 ರು. ಇದ್ದ ದರವನ್ನು 6812 ರು. ನಷ್ಟು ಇಳಿಸಲಾಗಿದೆ. ಅಂದರೆ 22544 ರು.ಗೆ ದರ ಇಳಿದಿದೆ.

ಚಲಿಸುತ್ತಿದ್ದ ಮದುಮಗನ i20 ಕಾರಿನಲ್ಲಿ ಬೆಂಕಿ, ಪೊಲೀಸರ ನೆರವಿನಿಂದ ಮಂಟಪ ತಲುಪಿದ ವರ!...

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಬಹುತೇಕ ಮದುವೆ ಸಮಾರಂಭ ರದ್ದಾಗಿದ್ದರೆ, ಇನ್ನೂ ಕೆಲವು ಮದುವೆ ಕಾರ್ಯಕ್ರಮಗಳು ಸರ್ಕಾರದ ನಿಯಮದಂತೆ ಅತ್ಯಂತ ಸರಳವಾಗಿ ಆಯೋಜಿಸಲಾಗುತ್ತಿದೆ. ಹೀಗೆ ಸರಳ ವಿವಾಹಕ್ಕೆ ತೆರಳುತ್ತಿದ್ದ ಮದುಮಗನ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಆದರೆ ಪೊಲೀಸರ ನೆರವಿನಿಂದ ಪ್ರಾಣಾಪಾಯದಿಂದ ವರ ಪಾರಾಗಿದ್ದಾನೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಬಾಂಗ್ಲಾ ರಾಜತಾಂತ್ರಿಕ ಸಮರ
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ