ಸಂಪೂರ್ಣ ಮಧ್ಯ ನಿಷೇಧಕ್ಕೆ ನಿರ್ಧಾರ, KPL ಪ್ರಶ್ನೆಗೆ ಸಂಜನಾ ಅಚ್ಚರಿ ಉತ್ತರ; ಡಿ.28ರ ಟಾಪ್ 10 ಸುದ್ದಿ!

By Suvarna News  |  First Published Dec 28, 2019, 5:47 PM IST

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ರಾಹುಲ್ ಗುಡುಗಿದ್ದಾರೆ. ನಿರ್ಮಾಪಕಿ ಮೇಲೆ ಹಲ್ಲೆ ಪ್ರಕರಣದ ಬಳಿಕ ಸುದ್ದಿಗೋಷ್ಠಿ ನಡೆಸಿದ ನಟಿ ಸಂಜನಾ ಅಚ್ಚರಿ ಉತ್ತರ ನೀಡಿದ್ದಾರೆ. ಕೆಪಿಎಲ್ ಕುರಿತ ಪ್ರಶ್ನೆಗೆ ಸಂಜನಾ ನೀಡಿದ ಉತ್ತರ ಕೆಎಸ್‌ಸಿಎಗೆ ಶಾಕ್ ನೀಡಿದೆ. ಡಿಕೆಶಿ ಯೇಸು ಪ್ರತಿಮೆ ವಿವಾದ, ಮನ್‌ಮೋಹನ್ ಸಿಂಗ್ ಸರ್ಕಾರ ಟೀಕಿಸಿದ ಅಮಿತ್ ಶಾ ಸೇರಿದಂತೆ ಡಿಸೆಂಬರ್ 28ರ ಟಾಪ್ 10 ಸುದ್ದಿ ಇಲ್ಲಿವೆ.


ನೋಟ್ ಬ್ಯಾನ್‌ಗಿಂತಲೂ ಎನ್‌ಆರ್‌ಸಿ, ಎನ್‌ಪಿಆರ್ ಘೋರ: ರಾಹುಲ್ ಗಾಂಧಿ!


ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಅಪನಗದೀಕರಣಕ್ಕಿಂತ ಘೋರ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

Latest Videos

undefined


'ಪಾಕಿಸ್ತಾನದಿಂದ ಬರುತ್ತಿದ್ದ ಆಲಿಯಾ, ಮಾಲಿಯಾಗಳಿಗೆ ಬ್ರೇಕ್‌'

 ಹಿಂದೆಲ್ಲಾ ಪಾಕಿಸ್ತಾನದಿಂದ ‘ಆಲಿಯಾ- ಮಾಲಿಯಾ- ಜಮಾಲಿಯಾ’ಗಳು ದೇಶಕ್ಕೆ ಬಂದು ಯೋಧರನ್ನು ಕೊಂದು ವಾಪಸ್‌ ಹೋಗುತ್ತಿದ್ದರು. ಅದಕ್ಕೆಲ್ಲಾ ಬಿಜೆಪಿ ಈಗ ಬ್ರೇಕ್‌ ಹಾಕಿದೆ ಎಂದು ಹೇಳುವ ಮೂಲಕ ಹಿಂದಿನ ಕಾಂಗ್ರೆಸ್‌ ಹಾಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಆಡಳಿತದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಟಿ ಬೀಸಿದ್ದಾರೆ.


KPL ಬೆಟ್ಟಿಂಗ್ ಪ್ರಶ್ನೆಗೆ ಸಂಜನಾ ಅಚ್ಚರಿ ಉತ್ತರ! ಕ್ರಿಕೆಟ್ ಪ್ರಿಯರು ತತ್ತರ

ಚಿತ್ರ ನಿರ್ಮಾಪಕಿ ವಂದನಾ ಜೈನ್ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ನಟಿ ಸಂಜನಾ ಗಲ್ರಾನಿ ಕೂಡಾ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಈ ವೇಳೆ ಪತ್ರಕರ್ತರು ಕೆಪಿಎಲ್ ಬೆಟ್ಟಿಂಗ್ ಬಗ್ಗೆ ಪ್ರಶ್ನಿಸಿದ್ದಾರೆ. ಸಂಜನಾ ಕೊಟ್ಟ ಉತ್ತರ ಹೀಗಿತ್ತು...   

ಜಿಎಸ್‌ಟಿ ವಂಚಿಸಿದರೆ ಆಸ್ತಿಗೆ ಕತ್ತರಿ: ಕೇಂದ್ರದ ಹೊಸ ನಿರ್ಧಾರ!

ಇತ್ತೀಚಿನ ದಿನಗಳಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹ ಇಳಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಎಸ್‌ಟಿ ವಂಚನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರೀಯ ನೇರ ತೆರಿಗೆಗಳು ಮತ್ತು ಸುಂಕ ಮಂಡಳಿ ನಿರ್ಧರಿಸಿದೆ.


ರಾಜ್ಯಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದ ಸಂದರ್ಭದಲ್ಲಿ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಕಾನೂನು ಸಚಿವ ಮಾದುಸ್ವಾಮಿ ಹೇಳಿದರು.  ಹಾಸನದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಮಾಧುಸ್ವಾಮಿ ಜನವರಿ 2 ರಂದು ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದಿದ್ದಾರೆ.


ಯೇಸು ಪ್ರತಿಮೆ ವಿವಾದಕ್ಕೆ ಟ್ವಿಸ್ಟ್; ಡಿಕೆಶಿ ವಿರುದ್ಧ ಸರ್ಕಾರ ಹೊಸ ಅಸ್ತ್ರ?

ಕನಕಪುರದಲ್ಲಿ ಸ್ಥಾಪನೆಯಾಗಿರುವ ಯೇಸು ಪ್ರತಿಮೆ ವಿವಾದಕ್ಕೆ ಹೊಸ ಟ್ಟಿಸ್ಟ್ ಸಿಕ್ಕಿದೆ.  ಡಿಕೆಶಿ ಕನಸನ್ನು ಛಿದ್ರಗೊಳಿಸಲು ಬಿಜೆಪಿ ಈಗ ಕಾನೂನು ಮೊರೆ ಹೋಗಲು ನಿರ್ಧರಿಸಿದೆ. ಯೇಸು ಪ್ರತಿಮೆ ಸ್ಥಾಪನೆಯಾಗಿರುವ ಜಾಗ ಗೋಮಾಳಕ್ಕೆ ಸೇರಿದ್ದು, ಕ್ರೈಸ್ತರನ್ನು ಮತ್ತು ಸೋನಿಯಾ ಗಾಂಧಿ ಓಲೈಸಲು ಡಿಕೆಶಿ ಈ  ಪ್ರತಿಮೆ ಸ್ಥಾಪಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಸಂಪೂರ್ಣ ಮದ್ಯ ನಿಷೇಧ : ಕುಡಿದ್ರೂ, ಮಾರಿದ್ರೂ ಭಾರೀ ದಂಡ

ಮದ್ಯಪಾನ ನಿರ್ಮೂಲನೆ ಮಾಡಲು ಗ್ರಾಮಸ್ಥರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮಂಡ್ಯದ ಉಪ್ಪರಕನಹಳ್ಳಿ ಗ್ರಾಮಸ್ಥರಿಂದ ಕುಡುಕರ ಮೇಲೆ ನಿಗಾ ವಹಿಸಲು ಕಾವಲು ಪಡೆ ರಚನೆ ಮಾಡಲಾಗಿದೆ.  ಗ್ರಾಮ ಪಂಚಾಯತ್ ಮುಖಂಡರು ಮದ್ಯ ನಿಷೇಧ ಮಾಡಿದ್ದಾರೆ. ನ್ಯಾಯ ಪಂಚಾಯಿತಿ ಮಾಡುವ ಮೂಲಕ ಈ ನಿರ್ಧಾರ ಕೈಗೊಳ್ಳಲಾಗಿದೆ. 


BCCI ಬಾಸ್ 'ದಾದಾ' ಕೆಲಸವನ್ನು ಕೊಂಡಾಡಿದ ಆಸೀಸ್ CEO

ಬಿಸಿಸಿಐ ಅಧ್ಯಕ್ಷ ಚುಕ್ಕಾಣಿ ಹಿಡಿದ ಬಳಿಕ ಸೌರವ್ ಗಂಗೂಲಿ ಈಗಾಗಲೇ ಹಲವು ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದೀಗ ಚತುಷ್ಕೋನ ಸರಣಿ ನಡೆಸುವ ಬಗ್ಗೆ ಒಲವು ತೋರಿರುವ ದಾದಾ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಸಿಇಒ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಗುಡ್‌ಬೈ 2019: ಈ ವರ್ಷ ಸದ್ದು ಮಾಡಿದ ಟಾಪ್ 10 ಸಿನಿಮಾಗಳಿವು!

ಕನ್ನಡ ಚಿತ್ರರಂಗ ಮತ್ತೊಂದು ವರ್ಷ ಪೂರೈಸಿ ಹೊಸ ವರ್ಷದ ಆಗಮನಕ್ಕೆ ಅಣಿಯಾಗಿದೆ. 2019 ಇನ್ನೇನು ಇತಿಹಾಸ ಸೇರುವುದಕ್ಕೆ ಕೆಲವೇ ದಿನಗಳಿವೆ. ಇತಿಹಾಸಕ್ಕೆ ಜಾರುತ್ತಿರುವ ಈ ವರ್ಷದಲ್ಲಿ ಸದ್ದು ಮಾಡಿದ ಟಾಪ್ 10 ಸಿನಿಮಾಗಳಿವು!  

ಮಂಗಳೂರು ಗಲಭೆ: ಆರೋಪಿಗಳ ಪತ್ತೆಗೆ ಪೊಲೀಸರ ಹೊಸ ಐಡಿಯಾ, ಸಿಕ್ತು 30,000 ವಿಡಿಯೋ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರ ವಾಟ್ಸಾಪ್‌ ಗ್ರೂಪ್‌ಗೆ ಸಾರ್ವಜನಿಕರು ಮೂವತ್ತು ಸಾವಿರಕ್ಕೂ ಅಧಿಕ ವಿಡಿಯೋಗಳನ್ನು ಕಳುಹಿಸಿದ್ದಾರೆ.


ಸುವರ್ಣ ನ್ಯೂಸ್‌ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗ್ಯಾಂಗ್‌ನಿಂದ ಧಮ್ಕಿ!

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಹೌದು, ಈ ಕಾರ್ಖಾನೆಯಿಂದ ಕೆಮಿಕಲ್‌ಯುಕ್ತ ನೀರನ್ನು ಮಲಪ್ರಭಾ ಎಡದಂಡೆ ಕಾಲುವೆ ನೀರಿಗೆ ಬಿಡಲಾಗುತ್ತಿದೆ. ಇದೆ ನೀರು ರೈತರ ಗೆದ್ದೆಗೆ ಹರಿಯುತ್ತೆ. ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಹೋದ ಸುವರ್ಣ ನ್ಯೂಸ್‌ ತಂಡಕ್ಕೆ ಹೆಬ್ಬಾಳ್ಕರ್ ಗ್ಯಾಂಗ್ ಧಮ್ಕಿ ಹಾಕಿದೆ.

click me!